AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದ ಬೀಚೊಂದರಲ್ಲಿ ಬಿಕನಿ ಬೆಡಗಿಯರ ನಡುವೆ ಸೀರೆಯುಟ್ಟ ಭಾರತೀಯ ಮಹಿಳೆ ಹೆಚ್ಚು ಸುಂದರಿ ಮತ್ತು ಆಕರ್ಷಕವಾಗಿ ಕಾಣುತ್ತಾರೆ!

ವಿಡಿಯೋದಲ್ಲಿ ಮಹಿಳೆ ತನ್ನ ರಾಷ್ಟ್ರೀಯತೆಯನ್ನು ಬಹಳ ಸುಂದರವಾಗಿ, ಆರ್ಥಗರ್ಭಿತವಾಗಿ ಮತ್ತು ನಾವೆಲ್ಲ ಖುಷಿ ಮತ್ತು ಹೆಮ್ಮೆಪಟ್ಟುಕೊಳ್ಳುವ ರೀತಿಯಲ್ಲಿ ಪ್ರದರ್ಶಿಸುತ್ತಿದ್ದಾರೆ!

ವಿದೇಶದ ಬೀಚೊಂದರಲ್ಲಿ ಬಿಕನಿ ಬೆಡಗಿಯರ ನಡುವೆ ಸೀರೆಯುಟ್ಟ ಭಾರತೀಯ ಮಹಿಳೆ ಹೆಚ್ಚು ಸುಂದರಿ ಮತ್ತು ಆಕರ್ಷಕವಾಗಿ ಕಾಣುತ್ತಾರೆ!
ಬಿಕನಿಯುಟ್ಟ ಬೆಡಗಿಯರ ನಡುವೆ ಸೀರೆಯುಟ್ಟ ಭಾರತೀಯಳೇ ಸುಂದರ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Aug 23, 2022 | 4:48 PM

Share

ನವದೆಹಲಿ: ನಮ್ಮ ದೇಶದಲ್ಲೇ ಸೀರೆಯುಟ್ಟ ಮಹಿಳೆಯನ್ನು ಬೆರಗುಗಣ್ಣುಗಳಿಂದ ನೋಡುವ ಜಮಾನಾ ಇದು ಮಾರಾಯ್ರೇ. ಆದರೆ ಭಾರತೀಯ ಮಹಿಳೆಯೊಬ್ಬರು ನಮ್ಮ ಸಂಪ್ರದಾಯದಂತೆ ಸೀರೆಯುಟ್ಟು ವಿದೇಶದ ಬೀಚೊಂದರಲ್ಲಿ ಬಿಕಿನಿಯಲ್ಲಿ (bikini) ಓಡಾಡುತ್ತಿರುವ ಬಿಳಿ ಮಹಿಳೆಯರ ನಡುವೆ ಮುಗುಳ್ನಗುತ್ತಾ ನಡೆದು ಬರುತ್ತಿರುವ ವಿಡಿಯೋ ಗಮನ ಸೆಳೆಯುತ್ತದೆ ಮತ್ತು ಅದು ಸಖತ್ ವೈರಲ್ ಕೂಡ ಆಗಿದೆ. ಈ ವಿಡಿಯೋದಿಂದ ಒಂದು ವಿಷಯ ವೇದ್ಯವಾಗುತ್ತದೆ. ನಾವು ಯಾವುದೇ ದೇಶದಲ್ಲಿರಲಿ, ನಮ್ಮ ಉಡುಗೆ-ತೊಡುಗೆ, ನಾವು ಸೇವಿಸುವ ಆಹಾರ (food) ಮತ್ತು ನಾವಾಡುವ ಮಾತುಗಳಿಂದ (language) ಜನ ನಮ್ಮನ್ನು ಗುರುತಿಸುತ್ತಾರೆ.

ವಿಡಿಯೋದಲ್ಲಿ ಮಹಿಳೆ ತನ್ನ ರಾಷ್ಟ್ರೀಯತೆಯನ್ನು ಬಹಳ ಸುಂದರವಾಗಿ, ಆರ್ಥಗರ್ಭಿತವಾಗಿ ಮತ್ತು ನಾವೆಲ್ಲ ಖುಷಿ ಮತ್ತು ಹೆಮ್ಮೆಪಟ್ಟುಕೊಳ್ಳುವ ರೀತಿಯಲ್ಲಿ ಪ್ರದರ್ಶಿಸುತ್ತಿದ್ದಾರೆ!

ವಿಡಿಯೋ ಕ್ಲಿಪ್ ನಲ್ಲಿ ನಿಮಗೆ ಕಾಣುತ್ತಿರುವ ಹಾಗೆ ನಮ್ಮ ಕಥಾನಾಯಕಿ ಉತ್ತರ ಭಾರತದ ಕೆಲಭಾಗಗಳ ಮಹಿಳೆಯರು ಧರಿಸುವ ಶೈಲಿಯಲ್ಲಿ ಸೀರೆಯನ್ನುಟ್ಟು ಬೀಚ್ ನಲ್ಲಿ ವಿಹರಿಸುತ್ತಿದ್ದಾರೆ.

ಈ ವಿಡಿಯೋ ನಮಗೆ ವಿಶಿಷ್ಟ ಮತ್ತು ಕುತೂಹಲಕಾರಿಯಾಗಿ ಕಾಣೋದಿಕ್ಕೆ ಕಾರಣಗಳಿವೆ. ಮೊಲನೆಯದ್ದು. ಬೀಚ್ ಬೇರೆ ದೇಶದಲ್ಲಿರುವಂಥದ್ದು, ಭಾರತದಲ್ಲಿ ಅಲ್ಲ ಮತ್ತು ಬೀಚ್ ನಲ್ಲಿ ಕಾಣುವ ಮಹಿಳೆಯರೆಲ್ಲ ಬಿಕಿನಿ ತೊಟ್ಟಿರುವ ಸ್ಥಳೀಯರು ಇಲ್ಲವೇ ಪ್ರವಾಸಿಗರಾಗಿದ್ದಾರೆ. ಹಾಗಾಗಿ ನಮ್ಮ ಕಥಾನಾಯಕಿ ಅವರಿಗಿಂತ ಭಿನ್ನ ಮತ್ತು ಸುಂದರ ಅನಿಸುತ್ತಾರೆ.

ಸದರಿ ವಿಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ ಮತ್ತು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಶೇರ್ ಮಾಡಲಾಗುತ್ತಿದೆ. ವಿದೇಶದ ನೆಲದಲ್ಲಿ ಅದರಲ್ಲೂ ವಿಶೇಷವಾಗಿ ಬೀಚ್ ನಲ್ಲಿ ಅಲ್ಲಿನ ಸಂಸ್ಕೃತಿಗೆ ಮಾರುಹೋಗದೆ ತನಗೆ ಖುಷಿ ಮತ್ತು ತೃಪ್ತಿ ನೀಡುವ ಉಡುಗೆ ತೊಟ್ಟು ಬೀಚ್ ನಲ್ಲಿ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಓಡಾಡುತ್ತಿರುವುದನ್ನು ಹಲವಾರು ಯೂಸರ್ಸ್ ಶ್ಲಾಘಿಸಿದ್ದಾರೆ.

ಸೀರೆಗಳ ಬಗ್ಗೆಯೇ ಮುಂದುವರಿದು ಮಾತಾಡುವುದಾದರೆ ಕೆಲ ತಿಂಗಳ ಹಿಂದೆ ಬ್ರಿಟನ್ನಿನ ಪ್ರಸಿದ್ಧ ರಾಯಲ್ ಅಸ್ಕಾಟ್ ರೇಸ್ ಮೀಟಿಂಗ್ ನಲ್ಲಿ ಭಾಗವಹಿಸಿದ ಸುಮಾರು 100 ಕ್ಕೂ ಹೆಚ್ಚು ಮಹಿಳೆಯರು-ಅವರಲ್ಲಿ ಹೆಚ್ಚಿನವರು ಬ್ಯಾಂಕ್ ಉದ್ಯೋಗಿಗಳು ಮತ್ತು ವೈದ್ಯೆಯರು-ಎಲ್ಲರೂ ಭಾರತೀಯ ಸಂಪ್ರದಾಯವನ್ನು ಸ್ಫುಟವಾಗಿ ಪ್ರತಿನಿಧಿಸುವ 9 ಮೊಳದ ಸೀರೆಗಳನ್ನೇ ಉಟ್ಟು ಕಂಗೊಳಿಸುತ್ತಿದ್ದರು.

Published On - 4:48 pm, Tue, 23 August 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ