Viral Video: ಇಂಡಿಯಾ ಗೇಟ್​ ಬಳಿ ನಿನ್ನೆ ಒಂದು ಮ್ಯಾಜಿಕ್​ ನಡೆದಿದೆ!

India Gate : ಮರಳು ಶಿಲ್ಪಕಲಾವಿದ ಸುದರ್ಶನ ಪಟ್ನಾಯಕ್, ನಿನ್ನೆ ಟ್ವಿಟರ್​ನಲ್ಲಿ ಹಾಕಿದ ಈ ಪೋಸ್ಟ್​ಗೆ ಅಧಿಕಾರಿಗಳು ಅದೆಷ್ಟು ವೇಗದಲ್ಲಿ ಸ್ಪಂದಿಸಿದರೆಂದರೆ... ವಿಡಿಯೋ ನೋಡಿ.

Viral Video: ಇಂಡಿಯಾ ಗೇಟ್​ ಬಳಿ ನಿನ್ನೆ ಒಂದು ಮ್ಯಾಜಿಕ್​ ನಡೆದಿದೆ!
ಇಂಡಿಯಾ ಗೇಟ್​ ಎದುರಿನಲ್ಲಿ ಕಸದರಾಶಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 23, 2022 | 3:46 PM

India Gate: ಐತಿಹಾಸಿಕ ಪ್ರವಾಸಿ ಸ್ಥಳಗಳಿಗೆ ನಮ್ಮ ಭಾರತ ಅತೀ ಪ್ರಸಿದ್ಧ. ಅತಿಥಿ ದೇವೋ ಭವ ಎಂಬ ಟ್ಯಾಗ್​ಲೈನ್​ನೊಂದಿಗೆ ನಿತ್ಯವೂ ಸಾವಿರಾರು ಜನರನ್ನು ನಮ್ಮ ದೇಶ ಬರಮಾಡಿಕೊಳ್ಳುತ್ತದೆ. ಈ ಸ್ಥಳಗಳ ಪೈಕಿ ಹೊಸದೆಹಲಿಯಲ್ಲಿರುವ ಇಂಡಿಯಾ ಗೇಟ್ ಕೂಡ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳ. ದಿನಕ್ಕೆ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ತೆಗೆಸಿಕೊಂಡ ಫೋಟೋಗಳನ್ನು, ಸೆಲ್ಫೀಗಳನ್ನು ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಖ್ಯಾತ ಮರಳು ಶಿಲ್ಪಕಲಾವಿದ ಸುದರ್ಶನ ಪಟ್ನಾಯಕ್ ಕೂಡ ಎಲ್ಲರಂತೆ ಈ ಸ್ಥಳಕ್ಕೆ ನಿನ್ನೆ ಭೇಟಿ ನೀಡಿದರು. ನಂತರ ಅವರೂ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಮುಂದೆ? ನೋಡಿ ನೀವೇ.

ನೋಡಿದಿರಲ್ಲ ರಸ್ತೆಯುದ್ದಕ್ಕೂ ಹರಡಿಕೊಂಡಿರುವ ಕಸದ ರಾಶಿಯ ಈ ವಿಡಿಯೋ. ‘ಇದು ಇಂಡಿಯಾ ಗೇಟ್​. ದೆಹಲಿಗೆ ಭೇಟಿ ನೀಡಲು ಸಂತೋಷವೇನೋ ಆಯಿತು. ಆದರೆ ಈ ಕಸದ ರಾಶಿ ನೋಡಿ ಅತೀವ ನಿರಾಶೆಯಾಯಿತು. ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಗರಗಳನ್ನು ಅದರಲ್ಲೂ ರಾಷ್ಟ್ರೀಯ ಐತಿಹ್ಯವುಳ್ಳ ಮಹಾನಗರಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಸುದರ್ಶನ ಮನವಿಯುಕ್ತ ಪೋಸ್ಟ್ ಮಾಡಿದರು.

ತಕ್ಷಣವೇ ಅಧಿಕಾರಿಗಳು ಕ್ರಮ ಕೈಗೊಂಡರು! ಆನಂತರದ ಪೋಸ್ಟ್​ ಹಂಚಿಕೊಂಡ ಸುದರ್ಶನ ಧನ್ಯವಾದ ತಿಳಿಸಿದರು.

ಏನೇ ಸುಧಾರಣೆಯಾಗಬೇಕೆಂದರೂ ಸಾಮಾಜಿಕ ಜಾಲತಾಣದ ಮೂಲಕವೇ ಗಮನ ಸೆಳೆಯಬೇಕು ಎನ್ನುವಂಥ ಡಿಜಿಟಲ್​ ಕಾಲದಲ್ಲಿ ನಾವಿದ್ದೇವೆ. ಅಂತೂ ಕೂಡಿಟ್ಟ ಕಸ ಮುಕ್ತಿ ಕಂಡಿತಲ್ಲ. ಒಳ್ಳೆಯದೇ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:55 pm, Tue, 23 August 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ