ಬಾಹ್ಯಾಕಾಶ ಎಚ್ಚರಿಕೆ: ಸ್ಫೋಟಗೊಳ್ಳುವ ನಕ್ಷತ್ರಗಳು ಭೂಮಿಯ ವಿನಾಶಕ್ಕೆ ಕಾರಣವಾಗಬಹುದು!

| Updated By: ನಯನಾ ಎಸ್​ಪಿ

Updated on: Apr 25, 2023 | 1:02 PM

ನಮ್ಮ ಅವನತಿ ಹತ್ತಿರದಲ್ಲಿದೆಯೇ? ಈ ಕಾಸ್ಮಿಕ್ ದುರಂತದಿಂದ ನಾವು ನಮ್ಮ ಗ್ರಹವನ್ನು ರಕ್ಷಿಸಬಹುದೇ? ಕ್ಷಣಗಣನೆ ಪ್ರಾರಂಭವಾಗಿದೆ, ಮತ್ತು ನಾವು ಸವಾಲನ್ನು ಎದುರಿಸಬಹುದೇ ಮತ್ತು ಸ್ಫೋಟಗೊಳ್ಳುವ ನಕ್ಷತ್ರಗಳ ಮಾರಣಾಂತಿಕ ಎಕ್ಸ್-ಕಿರಣಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದೇ ಎಂದು ಸಮಯ ಮಾತ್ರ ಹೇಳಲು ಸಾಧ್ಯ.

ಬಾಹ್ಯಾಕಾಶ ಎಚ್ಚರಿಕೆ: ಸ್ಫೋಟಗೊಳ್ಳುವ ನಕ್ಷತ್ರಗಳು ಭೂಮಿಯ ವಿನಾಶಕ್ಕೆ ಕಾರಣವಾಗಬಹುದು!
ಸಾಂದರ್ಭಿಕ ಚಿತ್ರ
Image Credit source: What if
Follow us on

ಇತ್ತೀಚಿನ ಅಧ್ಯಯನದ ಪ್ರಕಾರ ಸ್ಫೋಟಗೊಳ್ಳುವ ನಕ್ಷತ್ರಗಳ (Exploding Stars) X-ಕಿರಣಗಳು (X-rays) ನಮ್ಮ ಭೂಮಿಯ (Earth) ಮೇಲೆ ಜೀವವನ್ನು ಅಳಿಸಿಹಾಕುವ ಸಾಧ್ಯತೆ ಇದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಚಂದ್ರ ಎಕ್ಸ್-ರೇ ವೀಕ್ಷಣಾಲಯ (Chandra X-ray Observatory) ಮತ್ತು ಇತರ ಸುಧಾರಿತ ದೂರದರ್ಶಕಗಳೊಂದಿಗೆ ಶಸ್ತ್ರಸಜ್ಜಿತವಾದ ಖಗೋಳಶಾಸ್ತ್ರಜ್ಞರು, ನಕ್ಷತ್ರಗಳ ಸ್ಫೋಟಗಳಿಂದ ಉತ್ಪತ್ತಿಯಾಗುವ ಎಕ್ಸ್-ಕಿರಣಗಳು ಭೂಮಿ ಸೇರಿದಂತೆ 100 ಜ್ಯೋತಿರ್ವರ್ಷಗಳಷ್ಟು (Light years) ದೂರದಲ್ಲಿರುವ ಗ್ರಹಗಳ ಮೇಲೆ ಪರಿಣಾಮ ಬೀರಬಹುದು ಎಂದು ಕಂಡುಹಿಡಿದಿದ್ದಾರೆ. ಈ ಅಧ್ಯಯನದ ಪ್ರಕಾರ ನಮ್ಮ ಗ್ರಹಕ್ಕೆ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚಿನ ಅಪಾಯವನ್ನುಂಟುಮಾಡುತ್ತವೆ.

ಸ್ಫೋಟಿಸುವ ನಕ್ಷತ್ರಗಳಿಂದ ಉತ್ಪತ್ತಿಯಾಗುವ ಬೃಹತ್ ಸ್ಫೋಟದ ಅಲೆಗಳಿಂದ ಭೂಮಿಗೆ ಬೆದರಿಕೆ ಇರುತ್ತದೆ. ಈ ಕಾಸ್ಮಿಕ್ ಸ್ಫೋಟಗಳು ಬೃಹತ್ ಪ್ರಮಾಣದ ಎಕ್ಸ್-ಕಿರಣಗಳನ್ನು ಉತ್ಪಾದಿಸುತ್ತವೆ, ಅದು ಸ್ಫೋಟದ ನಂತರ ತಿಂಗಳುಗಳು ಅಥವಾ ವರ್ಷಗಳ ನಂತರ ಭೂಮಿಯಂತಹ ಗ್ರಹಗಳನ್ನು ತಲುಪಬಹುದು ಮತ್ತು ದಶಕಗಳವರೆಗೆ ಇರುತ್ತದೆ. ಖಗೋಳಶಾಸ್ತ್ರಜ್ಞರು ಇಂತಹ ಘಟನೆಗಳು ನಮ್ಮ ಗ್ರಹದಲ್ಲಿ ಸಾಮೂಹಿಕ ಅಳಿವಿಗೆ ಪ್ರಚೋದಿಸಬಹುದು ಎಂದು ಘೋಷಿಸಿದ್ದಾರೆ.

ಓಝೋನ್ ಅಪಾಕಲಿಪ್ಸ್: ಭೂಮಿಯ ಮೇಲೆ ಅಕ್ರಮಣ

ಅಧ್ಯಯನದ ನೇತೃತ್ವ ವಹಿಸಿದ್ದ ಇಲಿನಾಯ್ಸ್ ವಿಶ್ವವಿದ್ಯಾನಿಲಯದ ಇಯಾನ್ ಬ್ರಂಟನ್ ಅವರು ಭೂಮಿಯ ಮೇಲೆ ಸ್ಫೋಟಗೊಂಡ ನಕ್ಶತ್ರಗಳ ಎಕ್ಸ್-ಕಿರಣಗಳು ಭೀಕರ ಪರಿಣಾಮಗಳನ್ನು ವಿವರಿಸಿದ್ದಾರೆ. “ಎಕ್ಸ್-ಕಿರಣಗಳು ಹತ್ತಿರದ ಗ್ರಹದ ಮೇಲೆ ಬೀಸಿದರೆ, ವಿಕಿರಣವು ಗ್ರಹದ ವಾತಾವರಣದ ರಸಾಯನಶಾಸ್ತ್ರವನ್ನು ತೀವ್ರವಾಗಿ ಬದಲಾಯಿಸುತ್ತದೆ. ಈ ಪ್ರಕ್ರಿಯೆಯು ಓಝೋನ್‌ನ ಗಮನಾರ್ಹ ಭಾಗವನ್ನು ಅಳಿಸಿಹಾಕಬಹುದು, ಇದು ಅಂತಿಮವಾಗಿ ನಕ್ಷತ್ರದ ಅಪಾಯಕಾರಿ ವಿಕಿರಣದಿಂದ ಭೂಮಿಯ ಮೇಲಿನ ಜೀವರಾಶಿ ನಾಶವಾಗಬಹುದು”, ಎಂದು ಬ್ರಂಟನ್ ಹೇಳಿದ್ದಾರೆ.

ಇದನ್ನೂ ಓದಿ: ಡೈನೋಸಾರ್​ಗಳನ್ನು ನಾಶ ಮಾಡಿದ ಕ್ಷುದ್ರಗ್ರಹ ಬಿದ್ದ ವಿಶ್ವದ ಎರಡನೇ ಆಳವಾದ ನೀಲಿ ರಂಧ್ರ ಪತ್ತೆ!

ಸೂಪರ್ನೋವಾ: ದಿ ಸೈಲೆಂಟ್ ಕಿಲ್ಲರ್ಸ್

ಖಗೋಳಶಾಸ್ತ್ರಜ್ಞರು ಬಾಹ್ಯಾಕಾಶದ ಆಳದಲ್ಲಿ 31 ಸೂಪರ್ನೋವಾಗಳನ್ನು ಮತ್ತು ಅವುಗಳ ಪರಿಣಾಮಗಳನ್ನು ಗಮನಿಸಿದ್ದಾರೆ, ಗ್ರಹಗಳು 160 ಬೆಳಕಿನ ವರ್ಷಗಳಷ್ಟು ದೂರದಿಂದ ವಿಕಿರಣದ ಪ್ರಭಾವಕ್ಕೆ ಒಳಗಾಗಬಹುದು ಎಂದು ಬಹಿರಂಗಪಡಿಸಿದ್ದಾರೆ. ದೂರದರ್ಶಕಗಳಿಂದ 1979C, SN 1987A, SN 2010jl ಮತ್ತು SN 1994I ಸೂಪರ್ನೋವಾಗಳನ್ನು ಖಗೋಳಶಾಸ್ತ್ರಜ್ಞರು ಗಮನಿಸಿದ್ದಾರೆ.

ಅಂತಿಮ ಕ್ಷಣಗಣನೆ: ಭೂಮಿಯ ಭವಿಷ್ಯ?

ನಮ್ಮ ಅವನತಿ ಹತ್ತಿರದಲ್ಲಿದೆಯೇ? ಈ ಕಾಸ್ಮಿಕ್ ದುರಂತದಿಂದ ನಾವು ನಮ್ಮ ಗ್ರಹವನ್ನು ರಕ್ಷಿಸಬಹುದೇ? ಕ್ಷಣಗಣನೆ ಪ್ರಾರಂಭವಾಗಿದೆ, ನಾವು ಈ ದುರಂತವನ್ನು ಎದುರಿಸಬಹುದೇ? ಸ್ಫೋಟಗೊಳ್ಳುವ ನಕ್ಷತ್ರಗಳ ಮಾರಣಾಂತಿಕ ಎಕ್ಸ್-ಕಿರಣಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದೇ ಎಂದು ಸಮಯ ಮಾತ್ರ ಹೇಳಲು ಸಾಧ್ಯ.