AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೂ. 17 ಲಕ್ಷ ಕೊಟ್ಟು ಕನಸಿನ ಕ್ರೂಸ್​ನಲ್ಲಿ ಜಗತ್ತನ್ನು ಸುತ್ತಲು ಮುಂದಾದ ವ್ಯಕ್ತಿ… ಅರ್ಧ ದಾರಿಯಲ್ಲಿ ಕೈ ಕೊಟ್ಟ ಕ್ರೂಸ್!

ಕ್ರಿಸ್ಟೋಫರ್ ಚಾಪೆಲ್ ಅವರು ಈ ವರ್ಷದ ಆರಂಭದಲ್ಲಿ ವಿಶ್ವ ಪ್ರವಾಸಕ್ಕಾಗಿ £ 17,500 (ರೂ 17 ಲಕ್ಷ) ಪಾವತಿಸಿದ್ದರು. ಹಲವು ದಿನಗಳ ಕಾಲ ಹಡಗಿನಲ್ಲಿದ್ದ ಚಾಪೆಲ್ ವಾಕರಿಕೆ ಮತ್ತು ತಲೆತಿರುಗುವಿಕೆಯ ಅನುಭವದ ನಂತರ ಫಿಲಿಪೈನ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆಂದು ಇಳಿದರು. ನಂತರ ಆಗಿದ್ದೇನು?

ರೂ. 17 ಲಕ್ಷ ಕೊಟ್ಟು ಕನಸಿನ ಕ್ರೂಸ್​ನಲ್ಲಿ ಜಗತ್ತನ್ನು ಸುತ್ತಲು ಮುಂದಾದ ವ್ಯಕ್ತಿ... ಅರ್ಧ ದಾರಿಯಲ್ಲಿ ಕೈ ಕೊಟ್ಟ ಕ್ರೂಸ್!
ಸಾಂದರ್ಭಿಕ ಚಿತ್ರImage Credit source: T+L
Follow us
ನಯನಾ ಎಸ್​ಪಿ
|

Updated on: Apr 25, 2023 | 3:09 PM

72 ವರ್ಷದ, ಕ್ರಿಸ್ಟೋಫರ್ ಚಾಪೆಲ್ (Christopher Chapel) ಅವರು ಈ ವರ್ಷದ ಆರಂಭದಲ್ಲಿ ಹಡಗಿನಲ್ಲಿ (Cruise) ವಿಶ್ವ ಪ್ರವಾಸಕ್ಕಾಗಿ £ 17,500 (ರೂ 17 ಲಕ್ಷ) ಪಾವತಿಸಿದ್ದರು. ಹಲವು ದಿನಗಳ ಕಾಲ ಹಡಗಿನಲ್ಲಿದ್ದ ಚಾಪೆಲ್ ವಾಕರಿಕೆ (Vomiting) ಮತ್ತು ತಲೆತಿರುಗುವಿಕೆಯ (headache) ಅನುಭವದ ನಂತರ ಫಿಲಿಪೈನ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆಂದು ಇಳಿದರು. ಆದರೆ ಬರುವಷ್ಟರಲ್ಲಿ ಕ್ರೂಸ್​ ಅವರನ್ನು ಬಿಟ್ಟು ಹೊರಟು ಹೋಗಿತ್ತು ಎಂದು ಟೈಮ್ಸ್ ನೌ ಪತ್ರಿಕೆ ವರದಿ ಮಾಡಿದೆ. ವಾಕರಿಕೆ, ತಲೆನೋವು ಕಾಣಿಸಿಕೊಂಡ ಬಳಿಕ ಚಾಪೆಲ್ ಮೊದಲು ಹಡಗಿನ ವೈದ್ಯರನ್ನು ಭೇಟಿ ಮಾಡಿದರು, ಅವರು ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಹಡಗಿನ ವೈದ್ಯರ ಮಾತಿನಂತೆ ಚಾಪೆಲ್‌ ಪರೀಕ್ಷೆಗೆಂದು ಫಿಲಿಪೈನ್ಸ್ ಅಲ್ಲಿ ಇಳಿದರು. ಸಾಧಾರಣ ಹೀಟ್‌ಸ್ಟ್ರೋಕ್‌ನಿಂದಾಗಿ ಹೀಗೆ ಆಗಿದೆ ಎಂದು ಪರೀಕ್ಷೆಗಳ ನಂತರ ತಿಳಿಯಿತು. ಇದನ್ನೂ ತಿಳಿದು ವಾಪಾಸ್ ಹಡಗಿನ ಬಳಿ ಬರುವಷ್ಟರಲ್ಲಿ ಸಮಯ ಮೀರಿತ್ತು. ಚಾಪೆಲ್ ಅವರನ್ನು ಬಿಟ್ಟು ಅವರ ಕ್ರೂಸ್​ ಫಿಲಿಪೈನ್ಸ್ ಬಂದರಿನಿಂದ ಹೊರಟಿತ್ತು.

ತನ್ನ ಪತ್ನಿ ಕರೆನ್ ವಿಲಿಯಮ್ಸ್ ಜೊತೆಗಿದ್ದ 72 ವರ್ಷದ ಚಾಪೆಲ್, ಹಡಗು ನಿರ್ಗಮನದ ನಂತರ ರಾಷ್ಟ್ರವ್ಯಾಪಿ ಕ್ರೂಸ್ ಸಂಘಟಕರು P&O ಮತ್ತು ಟ್ರಾವೆಲ್ ಇನ್ಶೂರೆರ್‌ಗಳನ್ನು ಸಂಪರ್ಕಿಸಿದರು ಮತ್ತು ಅವರ ವೈದ್ಯಕೀಯ ಸ್ಥಿತಿಯನ್ನು ಗಂಭೀರವೆಂದು ಗುರುತಿಸಲಾಗಿದೆ ಎಂದು ತಿಳಿಸಲಾಯಿತು, ಇದರಿಂದಾಗಿ ಹಿಂದಿರುಗುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಅವರು ವಿಮಾನದಲ್ಲಿ ಮನಿಲಾಗೆ ಪ್ರಯಾಣಿಸಲು ಅನರ್ಹರು ಎಂದು ವೈದ್ಯರು ಪರಿಗಣಿಸಿದ್ದಾರೆ ಎಂದು ವರದಿಯಾಗಿತ್ತು. ಪರಿಣಾಮವಾಗಿ, ಅವರು ದೋಣಿಯನ್ನು ತೆಗೆದುಕೊಳ್ಳಬೇಕಾಯಿತು.

“ನನ್ನನ್ನು ಮನೆಗೆ ಕರೆತಂದ ವೈದ್ಯರು ಬಹಳ ಒಳ್ಳೆಯವರಾಗಿದ್ದರು, ನನ್ನ ಪರಿಸ್ಥಿತಿಗೆ ನಾನು ಅವರನ್ನು ಧೂಷಿಸಿವುದಿಲ್ಲ, ಆದರೂ ಅವರು ಏಕೆ ನನ್ನ ಜೊತೆ ಬಂದಿದ್ದರು ಎಂದು ನನಗೆ ತಿಳಿಯಲಿಲ್ಲ. ಏಕೆಂದರೆ ಅವರು ನನ್ನ ನರಗಳನ್ನು ಶಾಂತಗೊಳಿಸಲು ಡಯಾಜೆಪಮ್ ಅನ್ನು ನೀಡಿದ್ದರು ಅಷ್ಟೇ, ಅದುಬಿಟ್ಟು ಬೇರೇನೂ ತೊಂದರೆ ಇರಲಿಲ್ಲ,” ಎಂದು ಎಪ್ರಿಲ್ 7 ರಂದು ತನ್ನ ಮನೆಯಾದ UK ಗೆ ಚಾಪೆಲ್ ಹೇಳಿದ್ದಾರೆ, ಎಂದು LadBible ಅಲ್ಲಿ ಉಲ್ಲೇಖಿಸಿದ್ದಾರೆ.

ಹಡಗಿನಿಂದ ಹೊರಗೆ ಕಳುಹಿಸಿದ ವೈದ್ಯ ನನ್ನನ್ನು ಪರೀಕ್ಷಿಸಿರಲಿಲ್ಲ ಎಂದು ಚಾಪೆಲ್ ಹೇಳಿದರು.

“ಈ ಘಟನೆ ನನಗೆ ಹಾಸ್ಯಾಸ್ಪದ ಎನಿಸುತ್ತಿದೆ. ಹಡಗಿನಿಂದ ಹೊರ ಹಾಕಿದ ವ್ಯಕ್ತಿ ನನ್ನನು ಪರೀಕ್ಷಿಸಿಲ್ಲ, ಅದು ಹೇಗೆ ನನ್ನ ಸ್ಥಿತಿ ಗಂಭೀರ ಎಂದು ಪರಿಗಣಿಸಿದರು. ಬಹುಷಃ, ವೈದ್ಯಕೀಯ ಪರೀಕ್ಷೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತೆ ಎಂದು ಹಡಗಿನ ವೈದ್ಯರು ಈ ರೀತಿಯ ಕಾರಣ ಹೇಳಿ ನನನ್ನು ಬಿಟ್ಟು ಹೋಗಿರಬೇಕು. ಇಲ್ಲವಾದರೆ P&O ಹೇಳುವ ಪ್ರಕಾರ, ನನ್ನ ಅರೋಗ್ಯ ಅಷ್ಟು ಹದಗೆಟ್ಟಿದ್ದರೆ, ಏಕೆ ಯಾವುದೇ ವೈದ್ಯಕೀಯ ಪರೀಕ್ಷೆಯ ಫಲಿತಾಂಶ ನನಗೆ ತೋರಿಸುತ್ತಿಲ್ಲ.” ಎಂದು ಚಾಪೆಲ್ ಹೇಳಿದ್ದಾರೆ.

ಇದನ್ನೂ ಓದಿ: ಸ್ಫೋಟಗೊಳ್ಳುವ ನಕ್ಷತ್ರಗಳು ಭೂಮಿಯ ವಿನಾಶಕ್ಕೆ ಕಾರಣವಾಗಬಹುದು!

ನಾನು ಕ್ರೂಸ್‌ಗೆ ಹಿಂತಿರುಗಬೇಕು ಎಂದು ಎಷ್ಟು ಬಾರಿ ನರ್ಸ್​ಗಳಿಗೆ ಹೇಳಿದರು, ಅವರು ಹೆಚ್ಚಿನ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಚಾಪೆಲ್ ಅವರಿಗೆ ಹೇಳುತ್ತಲೇ ಇದ್ದರಂತೆ. “ಹೀಗಾದ ಬಾಳಿಕೆ ನನ್ನ ತಪ್ಪಿಲ್ಲದೆ ನಾನು ಆಸ್ಪತ್ರೆಯ ಬೆಡ್‌ನಲ್ಲಿ ಸಿಲುಕಿಕೊಂಡಿದ್ದೆ, ಅದು ಹಾಸ್ಯಾಸ್ಪದವಾಗಿತ್ತು. ನನ್ನನ್ನು ಮತ್ತೆ ಹಡಗಿನಲ್ಲಿ ಹೋಗಲು ಅನುಮತಿಸಬೇಕಾಗಿತ್ತು, ಏಕೆಂದರೆ ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿರಲಿಲ್ಲ” ಎಂದು ಅವರು ಹೇಳಿದರು.

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ