AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಮೊಮ್ಮಗಳನ್ನು ಅಪಹರಿಸಿ ಮಗಳ ಬಳಿ 60 ಲಕ್ಷ ರೂ. ಬೇಡಿಕೆ ಇಟ್ಟ ಅಜ್ಜ

ಅಪ್ಪ, ಅಮ್ಮನನ್ನು ಬಿಟ್ಟರೆ ಮಕ್ಕಳನ್ನು ಹೆಚ್ಚು ಮುದ್ದು ಮಾಡುವುದು ಅಜ್ಜ, ಅಜ್ಜಿಯೇ ಹೀಗಾಗಿ ಮಕ್ಕಳು ಅಜ್ಜ-ಅಜ್ಜಿಯ ನೆಚ್ಚಿನ ಕೂಸಾಗಿಯೇ ಬೆಳೆಯಲು ಇಷ್ಟಪಡುತ್ತಾರೆ.

Viral News: ಮೊಮ್ಮಗಳನ್ನು ಅಪಹರಿಸಿ ಮಗಳ ಬಳಿ 60 ಲಕ್ಷ ರೂ. ಬೇಡಿಕೆ ಇಟ್ಟ ಅಜ್ಜ
ಮೊಮ್ಮಗಳನ್ನು ಅಪಹರಿಸಿದ ಅಜ್ಜ( ಸಾಂದರ್ಭಿಕ ಚಿತ್ರ)Image Credit source: SCMP
ನಯನಾ ರಾಜೀವ್
|

Updated on: Apr 25, 2023 | 2:29 PM

Share

ಅಪ್ಪ, ಅಮ್ಮನನ್ನು ಬಿಟ್ಟರೆ ಮಕ್ಕಳನ್ನು ಹೆಚ್ಚು ಮುದ್ದು ಮಾಡುವುದು ಅಜ್ಜ, ಅಜ್ಜಿಯೇ ಹೀಗಾಗಿ ಮಕ್ಕಳು ಅಜ್ಜ-ಅಜ್ಜಿಯ ನೆಚ್ಚಿನ ಕೂಸಾಗಿಯೇ ಬೆಳೆಯಲು ಇಷ್ಟಪಡುತ್ತಾರೆ. ಅಜ್ಜಿಯ ಮನೆಗೆ ಹೋದರೆ ಸಾಕು ತರತರಹದ ತಿನಿಸುಗಳು, ಬಗೆ ಬಗೆಯ ಬಟ್ಟೆಗಳು ಹೀಗೆ ಮಕ್ಕಳು ಇಷ್ಟ ಪಡುವ ಎಲ್ಲಾ ವಸ್ತುಗಳು ಮನೆಯಲ್ಲಿರುತ್ತವೆ. ಆದರೆ ಇಲ್ಲೊಬ್ಬ ಅಜ್ಜ ತನ್ನ ಮೊಮ್ಮಗಳನ್ನೇ ಕಿಡ್ನ್ಯಾಪ್ ಮಾಡಿ ತನ್ನ ಮಕ್ಕಳ ಬಳಿಯೇ 60 ಲಕ್ಷ ಬೇಡಿಕೆ ಇಟ್ಟಿದ್ದರು.

ಚೀನಾದಲ್ಲಿ ನಡೆದ ಘಟನೆ ಇದು 65 ವರ್ಷದ ವ್ಯಕ್ತಿ ತನ್ನ 4 ವರ್ಷದ ಮೊಮ್ಮಗಳನ್ನು ಅಪಹರಿಸಿದ್ದರು. ಶಾಲೆಯಿಂದ ಕರೆದುಕೊಂಡು ಬರುವುದಾಗಿ ಹೇಳಿ ಮೊಮ್ಮಗಳನ್ನು ಅಪಹರಿಸಿದ್ದರು.

ಮೊಮ್ಮಗಳನ್ನೇ ಅಪಹರಿಸಲು ಕಾರಣವೇನು? ವ್ಯಕ್ತಿ ಜೂಜಾಡಿ ಲಕ್ಷಾಂತರ ರೂ ಕಳೆದುಕೊಂಡಿದ್ದ, ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮೊಮ್ಮಗಳನ್ನು ಅಪಹರಿಸಿದ್ದರು. 3 ದಿನಗಳಲ್ಲಿ ಸುಮಾರು 60 ಲಕ್ಷ ರೂಪಾಯಿಗಳ ಮಾಡದಿದ್ದರೆ ಬಾಲಕಿಯನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಬಳಿಕ ಪೊಲೀಸರು ವೃದ್ಧನನ್ನು ಪತ್ತೆ ಮಾಡಿ ಜೈಲಿಗಟ್ಟಿದ್ದಾರೆ.

ಮತ್ತಷ್ಟು ಓದಿ:ಕರ್ನಾಟಕದ ಪುಟ್ಟ ಬಾಲಕಿ ಪಿಯಾನೋ ನುಡಿಸುವ ಪರಿಗೆ ಮನಸೋತ ಪ್ರಧಾನಿ ಮೋದಿ

ನಾನು ಈ ಸ್ಥಿತಿಗೆ ಬರಲು ಮಗಳೇ ಕಾರಣ, ಆಕೆಗೆ ನಾನು ಚೆನ್ನಾಗಿ ಬದುಕುವುದು ಇಷ್ಟವಿಲ್ಲ, ನನ್ನ ಸಾವನ್ನೇ ಬಯಸುತ್ತಿದ್ದಾಳೆ ಎಂದು ದೂರಿದ್ದಾರೆ. ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ, ಅಂತಿಮವಾಗಿ ಆತನ ಪತ್ನಿ ಮಧ್ಯ ಪ್ರವೇಶಿಸಿ ಉಪವಾಸ ಕೈಬಿಟ್ಟು ಇತರೆ ಕೈದಿಗಳೊಂದಿಗೆ ಹೊಂದಾಣಿಕೆಯಿಂದ ಇರುವಂತೆ ಸಲಹೆ ನೀಡಿದ್ದರು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ