AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI ರಚಿತ ಹುಡುಗಿ ವಯಸ್ಸಾಗುವ ವೀಡಿಯೊವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ ಅವರು ಮಹಿಳೆಯು ವಯಸ್ಸಾಗುವ ಪ್ರಕ್ರಿಯೆಯನ್ನು ತೋರಿಸುವ AI- ರಚಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

AI ರಚಿತ ಹುಡುಗಿ ವಯಸ್ಸಾಗುವ ವೀಡಿಯೊವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ AI- ರಚಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆImage Credit source: Anand Mahindra Twitter
ನಯನಾ ಎಸ್​ಪಿ
|

Updated on:Apr 25, 2023 | 4:08 PM

Share

ನಿಸ್ಸಂದೇಹವಾಗಿ, ಕೃತಕ ಬುದ್ಧಿಮತ್ತೆ (AI) ನಮ್ಮ ಜೀವನದ ದೊಡ್ಡ ಭಾಗವಾಗಿದೆ. ನಾವು ಅದರ ಮೂಲಕ ಅದ್ಭುತ ಕಲಾಕೃತಿಯನ್ನು ರಚಿಸಬಹುದು ಅಥವಾ ನಮ್ಮ ಪ್ರಬಂಧಗಳನ್ನು ಬರೆಯುವಂತೆ ಮಾಡಬಹುದು, ಹೀಗೆ ಹತ್ತು ಹಲವು ಕೆಲಸಗಳನ್ನು AI ಸಹಾಯದಿಂದ ಮಾಡಬಹುದು. ಈಗ ಹಲವರ ಗಮನ ಸೆಳೆದಿರುವ ಮತ್ತೊಂದು AI ಸಂಬಂಧಿತ ಪೋಸ್ಟ್ ಅನ್ನು ಉದ್ಯಮಿ (Industrialist) ಆನಂದ್ ಮಹೀಂದ್ರಾ (Anand Mahindra) ಹಂಚಿಕೊಂಡಿದ್ದಾರೆ. 5 ರಿಂದ 95 ವರ್ಷ ವಯಸ್ಸಿನ ಹುಡುಗಿಗೆ ವಯಸ್ಸಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಈ ವಿಡಿಯೋ ಈಗ ಸಾಮಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ

5 ವರ್ಷದಿಂದ 95 ವರ್ಷ ಆಗುತ್ತಿರುವ ಹುಡುಗಿಯನ್ನು ತೋರಿಸುವ ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಭಾವಚಿತ್ರಗಳ ಸರಣಿಯ ಈ ಪೋಸ್ಟ್ ಅನ್ನು ನಾನು ನೋಡಿದೆ. AI ಯ ಶಕ್ತಿಯು ತುಂಬಾ ಕಾಡುವ ಸುಂದರತೆ, ಮುಂದೊಂದುದಿನ AI ಮಾನವನನ್ನು ರಚಿಸಬಹುದಾದರೆ ನಾನು ಆಶ್ಚರ್ಯಪಡುವುದಿಲ್ಲ” ಎಂದು ಬರೆದಿದ್ದಾರೆ. ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಚಿಕ್ಕ ಹುಡುಗಿಯನ್ನು ತೋರಿಸುತ್ತದೆ. ವೀಡಿಯೊ ಮುಂದುವರೆದಂತೆ, ನೀವು ಅದರಲ್ಲಿ ಆ ಹುಡುಗಿ ವಯಸ್ಸಾಗುವ ಪ್ರಕ್ರಿಯೆಯನ್ನು ನೋಡಬಹುದು.

ಈ ವೀಡಿಯೊವನ್ನು ಕೇವಲ ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದನ್ನು ಐದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕ್ಲಿಪ್ 10,000 ಕ್ಕೂ ಹೆಚ್ಚು ಲೈಕ್ ಮತ್ತು ಹಲವಾರು ಕಾಮೆಂಟ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ವ್ಯಾಪಾರ, ಉದ್ಯಮ, ಲೋಕೋಪಕಾರದ ಟೈಟಾನ್: ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ರತನ್ ಟಾಟಾ

ಕಾಮೆಂಟ್‌ಗಳಲ್ಲಿ ಒಬ್ಬ ವ್ಯಕ್ತಿ, “ಇದು ಸುಂದರ ಮತ್ತು ವಿಸ್ಮಯಕಾರಿಯಾಗಿದೆ, ಹೆಚ್ಚು ದೂರ ಹೋಗದಂತೆ ಮತ್ತು ವಾಸ್ತವದ ಗ್ರಹಿಕೆಯನ್ನು ಕಳೆದುಕೊಳ್ಳದಿರಲು ಎಚ್ಚರಿಕೆ ನೀಡುತ್ತಿದೆ,” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಇದು ನಿಜವಾಗಿಯೂ ಅದ್ಭುತವಾಗಿದೆ, ಮತ್ತು AI ರೂಪಾಂತರಗೊಳ್ಳುವ ವಿಧಾನವನ್ನು ಗ್ರಹಿಸಲು ಕಷ್ಟವಾಗುತ್ತದೆ. ಚಿತ್ರಗಳನ್ನು ರಚಿಸುವುದರಿಂದ ಹಿಡಿದು ಪುಸ್ತಕಗಳಿಂದ ಹಾಡುಗಳವರೆಗೆ, ಭವಿಷ್ಯವು ಸಂಪೂರ್ಣವಾಗಿ AI- ಚಾಲಿತವಾಗಲು ನೂರಾರು ಉಪಕರಣಗಳು ಪ್ರತಿ ವಾರ ಬಿಡುಗಡೆಯಾಗುತ್ತದೆ, ಇದು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.” ಎಂದು ಹಂಚಿಕೊಂಡಿದ್ದಾರೆ. ಮೂರನೆಯವರು, “ಇದು ನಿಜಕ್ಕೂ ಸುಂದರವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.

Published On - 4:07 pm, Tue, 25 April 23