Hikikomori: ಯುವಕರೇ ಮನೆಯಿಂದ ಹೊರಬನ್ನಿ… ತಿಂಗಳಿಗೆ 40,000 ರೂ ನೀಡುತ್ತೇವೆ ಎನ್ನುತ್ತಿದೆ ಈ ಸರ್ಕಾರ

South Korea New Challenge: ಒಂಟಿತನದ ಸಮಸ್ಯೆ ಕಾಡುತ್ತಿರುವ 9ರಿಂದ 24 ವರ್ಷದ ವಯೋಮಾನದ ಮಕ್ಕಳು ಮತ್ತು ಯುವಕರಿಗೆ ತಿಂಗಳಿಗೆ 6,50,000 ವಾನ್ (ಸುಮಾರು 40,000 ರೂ) ಹಣವನ್ನು ಭತ್ಯೆಯಾಗಿ ನೀಡುವುದಾಗಿ ದಕ್ಷಿಣ ಕೊರಿಯಾ ಸರ್ಕಾರ ಘೋಷಣೆ ಮಾಡಿದೆ.

Hikikomori: ಯುವಕರೇ ಮನೆಯಿಂದ ಹೊರಬನ್ನಿ... ತಿಂಗಳಿಗೆ 40,000 ರೂ ನೀಡುತ್ತೇವೆ ಎನ್ನುತ್ತಿದೆ ಈ ಸರ್ಕಾರ
ಸೌತ್ ಕೊರಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 25, 2023 | 7:31 PM

ನವದೆಹಲಿ: ಒಂಟಿತನ (Loneliness) ಎಂಬುದು ಮೇಲ್ನೋಟಕ್ಕೆ ಕಾಣುವಷ್ಟು ಸರಳ ಸಮಸ್ಯೆ ಅಲ್ಲ. ಅನೇಕ ಮಂದಿ ತಮ್ಮ ಪಾಡಿಗೆ ತಾವು ಒಂಟಿಯಾಗಿ ಉಳಿಯಲು ಬಯಸುವುದುಂಟು. ಆದರೆ, ಸಮಾಜದಿಂದ ಪೂರ್ಣ ವಿಮುಖಗೊಂಡು ಒಂಟಿಯಾಗಿ ಇರಲು ಹಾತೊರೆಯುವ ಮತ್ತು ಯಾರೊಂದಿಗೂ ಬೆರೆಯಲು ಇಚ್ಛಿಸದೇ ಒಂಟಿಯಾಗಿರುವ ಜನರು ಉಂಟು. ಅಂದರೆ ಇವರು ಮನೆಯೊಳಗೆ ಚಿಪ್ಪಿನೊಳಗೆ ಅಡಗಿಕೊಂಡಂತೆ ಕೂತುಬಿಡುತ್ತಾರೆ. ಇವರಿಗದು ಮಾನಸಿಕ ಕಾಯಿಲೆ. ಇದರಿಂದ ವ್ಯಕ್ತಿ ಖಿನ್ನ ಸ್ಥಿತಿಗೆ (Depression) ಜಾರುತ್ತಾನೆ, ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಇದು ಜಾಗತಿಕವಾಗಿ ಇರುವ ಮಾನಸಿಕ ವ್ಯಾಧಿ. ಸೌತ್ ಕೊರಿಯಾ ದೇಶ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡಲು ಮುಂದಾಗಿದೆ. ಒಂಟಿತನದ ಸಮಸ್ಯೆ ಕಾಡುತ್ತಿರುವ 9ರಿಂದ 24 ವರ್ಷದ ವಯೋಮಾನದ ಮಕ್ಕಳು ಮತ್ತು ಯುವಕರಿಗೆ ತಿಂಗಳಿಗೆ 6,50,000 WON (ಸುಮಾರು 40,000 ರೂ) ಹಣವನ್ನು ಭತ್ಯೆಯಾಗಿ ನೀಡುವುದಾಗಿ ಘೋಷಣೆ ಮಾಡಿದೆ.

ಈ ಒಂಟಿತನದ ರೋಗವನ್ನು ಸೌತ್ ಕೊರಿಯಾದಲ್ಲಿ ಹಿಕಿಕೋಮೋರಿ (Hikikomori) ಎಂದು ಕರೆಯುತ್ತಾರೆ. ಹಿಕಿಕೋಮೋರಿ ಪದ ಜಪಾನ್ ಮೂಲದ್ದು. ಜಪಾನ್​ನಲ್ಲಂತೋ ಹಿಕಿಕೋಮೋರಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಬರೋಬ್ಬರಿ 15 ಲಕ್ಷ ಇದೆ. ದಕ್ಷಿಣ ಕೊರಿಯಾದಲ್ಲಿ 19ರಿಂದ 39 ವರ್ಷದ ವಯೋಮಾನದವರಲ್ಲಿ ಒಂಟಿತನ ರೋಗದಿಂದ ಬಳಲುತ್ತಿರುವವರ ಸಂಖ್ಯೆ 3.5 ಲಕ್ಷ ಇದೆ. ಆದರೆ, ಜೀವನದ ಬುನಾದಿಗೆ ಬೇಕಾದ 24 ವರ್ಷದೊಳಗಿನ ಪ್ರಾಯದಲ್ಲಿ ಮಕ್ಕಳು ಹೀಗೆ ಸಮಾಜವಿಮುಖಿಯಾಗಿ ಕೂತುಬಿಟ್ಟರೆ ಭವಿಷ್ಯದ ಗತಿ ಏನು? ಅಂತೆಯೇ ದಕ್ಷಿಣ ಕೊರಿಯ ಸರ್ಕಾರ ಈ ರೋಗವನ್ನು ಗಂಭೀರವಾಗಿ ಪರಿಗಣಿಸಿರುವುದು.

ಇದನ್ನೂ ಓದಿViral Video: ಗಾರ್ಡನ್​ನಲ್ಲಿ ಮೊಬೈಲ್ ನೋಡುತ್ತಾ ವ್ಯಕ್ತಿ ಮಲಗಿದ್ದಾಗ ಕರಡಿ ಎಂಟ್ರಿ, ಒಮ್ಮೆ ಜೀವವೇ ಬಾಯಿಗೆ ಬಂದಂಗಾಗಿರ್ಬೇಕು

ಯುವಕರನ್ನು ಬಡಿದೆಬ್ಬಿಸಿ ಮನೆಯಿಂದ ಹೊರಗೆ ತರಲು ತಿಂಗಳಿಗೆ 40,000 ರೂ

ಜನರು ನಾನಾ ಕಾರಣಗಳಿಗೆ ಖಿನ್ನತೆಗೆ ಅಥವಾ ಒಂಟಿತನಕ್ಕೆ ಜಾರುತ್ತಾರೆ. ಕೆಲ ಪ್ರಕರಣಗಳಲ್ಲಿ ವೈದ್ಯಕೀಯ ಕಾರಣಗಳಿವೆ. ಇನ್ನೂ ಕೆಲ ಪ್ರಕರಣಗಳಲ್ಲಿ ಮಕ್ಕಳು ಮನೆಯಲ್ಲೋ ಅಥವಾ ಶಾಲೆಯಲ್ಲೋ ಅಥವಾ ಹೊರಗೋ ವಿಕ್ಷಿಪ್ತ ಘಟನೆಗಳನ್ನು ಕಂಡು ಜಿಗುಪ್ಸೆಗೊಂಡು ಡಿಪ್ರೆಶನ್​ಗೆ ಹೋಗಬಹುದು. ಅತ್ಯಾಚಾರ, ಹಿಂಸಾಚಾರ ಇತ್ಯಾದಿ ಘಟನೆಗಳು ಖಿನ್ನತೆಗೆ ದೂಡಬಹುದು. ಇಂಥವರು ಯಾರೊಂದಿಗೂ ಬೆರೆಯದೇ ಮನೆಯಲ್ಲಿ ಸುಮ್ಮನೆ ಕೂತುಬಿಡುತ್ತಾರೆ, ಅಥವಾ ಸದಾ ನಿದ್ರೆಗೆ ಜಾರುತ್ತಾರೆ. ಓದಲು, ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ.

ಸೌತ್ ಕೊರಿಯಾದಲ್ಲಿ ಮೊದಲೇ ಜನಸಂಖ್ಯೆ ಕಡಿಮೆ. ಅದರಲ್ಲೂ ದುಡಿಯುವ ವಯಸ್ಸಿನವರ ಸಂಖ್ಯೆಯಂತೂ ಇಳಿಮುಖವಾಗುತ್ತಿದೆ. ಜೊತೆಗೆ, ಅಲ್ಲಿ ಓದಿನಲ್ಲಿ, ಕೆಲಸದಲ್ಲಿ ತುರುಸಿನ ಸ್ಪರ್ಧೆ ಇದೆ. ಮಕ್ಕಳ ಮೇಲೆ ಪೋಷಕರ ಒತ್ತಡ ವಿಪರೀತ ಇದೆ. ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚು.

ಇದನ್ನೂ ಓದಿViral News: ಮೊಮ್ಮಗಳನ್ನು ಅಪಹರಿಸಿ ಮಗಳ ಬಳಿ 60 ಲಕ್ಷ ರೂ. ಬೇಡಿಕೆ ಇಟ್ಟ ಅಜ್ಜ

ಈಗ ಯುವಜನರು ಹಿಕಿಕೋಮೋರಿಯಂತಹ ಮಾನಸಿಕ ಸಮಸ್ಯೆಗೆ ಸಿಕ್ಕು ದುಡಿಯುವ ಅವಧಿಯನ್ನು ವ್ಯರ್ಥ ಮಾಡಿದರೆ ಅದರಿಂದ ಅವರಿಗೂ, ಸಮಾಜಕ್ಕೂ ಮತ್ತು ದೇಶಕ್ಕೂ ಹಾನಿಕರ. ಹೀಗಾಗಿ, 9ರಿಂದ 24 ವರ್ಷ ವಯಸ್ಸಿನ ಹಿಕಿಕೋಮೋರಿ ರೋಗಿಗಳಿಗೆ ಅಲ್ಲಿನ ಸರ್ಕಾರ ತಿಂಗಳಿಗೆ 40 ಸಾವಿರ ರೂ ಭತ್ಯೆ ನೀಡಲು ನಿರ್ಧರಿಸಿದೆ. ಇದರಿಂದಲಾದರೂ ಈ ಮಕ್ಕಳು ಖುಷಿಯಿಂದ ಮನೆ ಬಿಟ್ಟು ಎಲ್ಲರೊಂದಿಗೆ ಬೆರೆಯಲಿ ಎಂಬುದು ಸರ್ಕಾರದ ಉದ್ದೇಶ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:31 pm, Tue, 25 April 23

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ