ಸಾಕು ಪ್ರಾಣಿಗಳ ಹುಟ್ಟುಹಬ್ಬ ಆಚರಿಸುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಮನೆಯಲ್ಲಿ ಸಾಕಿದ ನಾಯಿ, ಬೆಕ್ಕುಗಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಎಲ್ಲಾದರೂ ಮನೆಯಲ್ಲಿರುವ ಕೋಳಿಗೆ ಹುಟ್ಟುಹಬ್ಬ ಆಚರಿಸುವುದನ್ನು ಕೇಳಿದ್ದೀರಾ? ಹೌದು ನೀವು ಓದಿದ್ದು ನಿಜ. ಇಲ್ಲೊಂದು ಕುಟುಂಬ ತಮ್ಮ ಮನೆಯಲ್ಲಿ ಸಾಕಿದ ಕೋಳಿಯ ಹುಟ್ಟುಹಬ್ಬವನ್ನು ಕೆಕ್ ಕತ್ತರಿಸಿ, ಬಲೂನ್ ಕಟ್ಟಿ ಅದ್ದೂರಿಯಾಗಿ ಆಚರಿಸಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೋಳಿ ಬರ್ತಡೇ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಎಲ್ಲಿ ನಡೆದ ಘಟನೆಯ ವಿಡಿಯೋ ಎನ್ನುವುದು ಸ್ಪಷ್ಟವಾಗಿಲ್ಲ. ವೀಡಿಯೋದಲ್ಲಿ ಮೊದಲು ಯುವತಿಯೊಬ್ಬಳು ಕೋಳಿಯನ್ನು ಹಿಡಿದುಕೊಂಡಿರುತ್ತಾಳೆ. ನಂತರ ಕ್ಯಾಂಡಲ್ಗಳನ್ನು ಬೆಳಗಿ ಕೇಕ್ ಕತ್ತರಿಸುತ್ತಾರೆ. ನಂತರ ಒಂದು ಚುರು ಕೇಕ್ಅನ್ನು ಯುವತಿಯ ಪಕ್ಕದಲ್ಲಿದ್ದ ಮಹಿಳೆ ಕೋಳಿಗೂ ತಿನ್ನಿಸುತ್ತಾಳೆ. ಕೋಳಿಯ ಎರಡನೇ ವರ್ಷದ ಬರ್ತಡೇಯನ್ನು ಕುಟುಂಬ ಆಚರಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಗೋಡೆಯ ಮೆಲೆ ಬಲೂನ್ನಲ್ಲಿ ಸಂಖ್ಯೆಯನ್ನು ತೂಗುಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕುಟುಂಬ ತಮ್ಮ ಮನೆಯ ಕೋಳಿಯ ಎರಡನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಲ್ಲದೆ ಹಲವು ಅತಿಥಿಗಳನ್ನು ಆಹ್ವಾನಿಸಿದ್ದರು. ಎಲ್ಲರೂ ಕೋಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವುದನ್ನು ವಿಡೀಯೋದಲ್ಲಿ ಕಾಣಬಹುದು. ಸದ್ಯವಿಡಿಯೋ ನೋಡಿ ನೆಟ್ಟಿಗರು ನಗುತ್ತಿದ್ದಾರೆ. ಬರ್ತಡೇ ಎನ್ನುವುದು ಇಷ್ಟು ಅತಿರೇಕಕ್ಕೆ ಹೋಗಬಾರದು ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ. ವಿಡಿಯೋ 6 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದ್ದು, ಬಳಕೆದಾರರು ಕಾಮೆಂಟ್ಗಳ ಮೂಲಕ ಪ್ರತಿಕ್ರಯಿಸಿದ್ದಾರೆ.
ಇದನ್ನೂ ಓದಿ:
ಸಂಗಾತಿಯನ್ನು ಕಳೆದುಕೊಂಡು ಮರುಗುತ್ತಿರುವ ನವಿಲು: ಮನಕಲಕುವ ವಿಡೀಯೋ ವೈರಲ್
Published On - 10:12 am, Thu, 6 January 22