Viral Video: ನಿವೃತ್ತಿ ಹೊಂದಿದ ಶಿಕ್ಷಕಿಗೆ ಇಡೀ ಶಾಲೆ ಹೇಗೆ ಬೀಳ್ಕೊಟ್ಟಿತು ಎಂದು ನೀವೇ ನೋಡಿ

ಒಂದೇ ಶಾಲೆಯಲ್ಲಿ 50 ವರ್ಷಗಳ ಕಾಲ ಪಾಠ ಮಾಡಿ ಇದೀಗ ನಿವೃತ್ತಿ ಹೊಂದಿದ ಶಿಕ್ಷಕಿಯನ್ನು ಇಡೀ ಶಾಲೆಯೇ ಬೀಳ್ಕೊಡುವ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ನಿವೃತ್ತಿ ಹೊಂದಿದ ಶಿಕ್ಷಕಿಗೆ ಇಡೀ ಶಾಲೆ ಹೇಗೆ ಬೀಳ್ಕೊಟ್ಟಿತು ಎಂದು ನೀವೇ ನೋಡಿ
ಶಿಕ್ಷಕಿಗೆ ಬೀಳ್ಕೊಡುಗೆ
Image Credit source: Instagram
Edited By:

Updated on: Jun 04, 2022 | 10:36 PM

ಪ್ರತಿಯೊಬ್ಬರಿಗೂ ಅದೊಂದು ಕಾಲ ಬರುತ್ತದೆ. ಅದ್ಯಾವುದು ಎಂದರೆ, ವೃತ್ತಿ ಜೀವನದಿಂದ ನಿವೃತ್ತಿ ಹೊಂದುವುದು. ಈ ಕ್ಷಣ ಒಂದು ಕಡೆ ಸಂತೋಷ ನೀಡಿದರೆ ಇನ್ನೊಂದೆಡೆ ದುಃಖವನ್ನೂ ನೀಡುತ್ತದೆ. ಇಂಥ ಕ್ಷಣವೊಂದು 50 ವರ್ಷದ ಶಿಕ್ಷಕಿ (Teacher)ಯೊಬ್ಬರಿಗೂ ಬಂದಿದ್ದು, ಇವರನ್ನು ವಿಶೇಷವಾಗಿ ಬೀಳ್ಕೊಡುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆದ್ದಿದೆ.

ಒಂದೇ ಶಾಲೆಯಲ್ಲಿ 50 ವರ್ಷಗಳ ಕಾಲ ಪಾಠ ಮಾಡಿ ಇದೀಗ ಶಿಕ್ಷಕಿ ನಿವೃತ್ತಿ ಹೊಂದಿದ್ದು, ಈ ವೇಳೆ ಸಹೋದ್ಯಯೋಗಿಗಳು, ವಿದ್ಯಾರ್ಥಿಗಳು ಬೀಳ್ಕೊಡುವ ಕ್ಷಣದ ವಿಡಿಯೋವನ್ನು ಶಿಕ್ಷಕಿಯ ಮಗಳು ‘ಕ್ಯಾಥರೀನ್’ ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Trending: ತಂದೆಯ ಹಾಡಿಗೆ ಇ ಐ ಇ ಐ ಓ… ಎಂದ ಮುದ್ದಾದ ಮಗು, ವಿಡಿಯೋ ವೈರಲ್

ಶಿಕ್ಷಕಿ ಪ್ರೌಢಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಅವರು ಕೇವಲ 22 ವರ್ಷದವರಾಗಿದ್ದಾಗ ಇಂಗ್ಲಿಷ್ ಶಿಕ್ಷಕಿಯಾಗಿ ಸೇರಿಕೊಂಡಿದ್ದರು. ”ಇಂದು ಅವಳ ಕೊನೆಯ ದಿನವಾಗಿತ್ತು. ಅವರನ್ನು ಇಡೀ ಶಾಲೆಯು ಕಳುಹಿಸಿಕೊಟ್ಟಿತು” ಎಂದು ಕ್ಯಾಥರೀನ್ ಪೋಸ್ಟ್‌ನಲ್ಲಿ ತಿಳಿಸಿದ್ದಾಳೆ. ಅಲ್ಲದೆ ತನ್ನ ಅಮ್ಮನ ನಿವೃತ್ತಿ ಜೀವನಕ್ಕೆ ಶುಭಹಾರೈಸಿದ್ದಾಳೆ.

ಸದ್ಯ ಈ ವಿಡಿಯೋ ವೈರಲ್ (Viral) ಆಗುತ್ತಿದ್ದು, ಅದ್ಭುತ ಕ್ಷಣ, ನಿಮ್ಮ ತಾಯಿಗೆ ಅಭಿನಂದನೆಗಳು, ಉತ್ತಮ ಶಿಕ್ಷಕರು ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ”ಯಾರು ನೋಡದ ಹಾಗೆ ನೃತ್ಯ ಮಾಡಿ”: ಕರಡಿ ಮರಿಯ ಕುಣಿತ ವಿಡಿಯೋ ವೈರಲ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:36 pm, Sat, 4 June 22