Viral Video: ಹಿಂಗೂ ಉಂಟೇ..? ಗಡ್ಡ ಮೀಸೆ ಬೋಳಿಸಿದ್ದಕ್ಕೆ ಮಗನಿಗೆ ತಂದೆಯಿಂದ ಕಪಾಳಮೋಕ್ಷ; ವೈರಲ್‌ ಆಯ್ತು ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತವೆ. ಸದ್ಯ ಅಂತಹದೇ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಯುವಕನೊಬ್ಬ ಕ್ಲೀನ್‌ ಶೇವ್‌ ಮಾಡಿದ ಒಂದೇ ಒಂದು ಕಾರಣಕ್ಕೆ ಆತನ ತಂದೆ ಆತನ ಕೆನ್ನೆಗೆ ಬಾರಿಸಿದ್ದಾರೆ. ತಂದೆಯ ಈ ಅತಿರೇಕದ ವರ್ತನೆಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Viral Video: ಹಿಂಗೂ ಉಂಟೇ..? ಗಡ್ಡ ಮೀಸೆ ಬೋಳಿಸಿದ್ದಕ್ಕೆ  ಮಗನಿಗೆ ತಂದೆಯಿಂದ ಕಪಾಳಮೋಕ್ಷ; ವೈರಲ್‌ ಆಯ್ತು ವಿಡಿಯೋ
Edited By:

Updated on: Jun 20, 2024 | 6:42 PM

ಮಕ್ಕಳು ಏನಾದ್ರೂ ತಪ್ಪು ಮಾಡಿದ್ರೆ ಖಂಡಿತವಾಗಿಯೂ ತಂದೆ-ತಾಯಿ ಒಂದೇಟು ಪೆಟ್ಟು ಕೊಟ್ಟು ಬುದ್ಧಿವಾದ ಹೇಳುತ್ತಾರೆ. ಹೀಗೆ ಹೆತ್ತವರು ತಮ್ಮ ಪುಟ್ಟ ಮಕ್ಕಳಿಗೆ ಬೈದು, ಹೊಡೆದು ಸರಿ ದಾರಿಗೆ ತರುವ ಕೆಲಸ ಮಾಡುತ್ತಿರುತ್ತಾರೆ. ಆದರೆ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಪೋಷಕರು ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ಕೈ ಮಾಡಲು ಹೋಗುವುದಿಲ್ಲ. ಹೀಗಿರುವಾಗ ಇಲ್ಲೊಬ್ಬ ತಂದೆ ಗಡ್ಡ ಮೀಸೆ ಬೋಳಿಸಿದ್ದಕ್ಕೆ ಬೆಳೆದು ನಿಂತ ಮಗನ ಕೆನ್ನೆಗೆ ಬಾರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ತಂದೆಯ ಈ ಅತಿರೇಕದ ವರ್ತನೆಗೆ ನೆಟ್ಟಿಗರು ಫುಲ್‌ ಗರಂ ಆಗಿದ್ದಾರೆ.

ಈ ವಿಡಿಯೋವನ್ನು @gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕ್ಲೀನ್‌ ಶೇವ್‌ ಮಾಡುವ ಮೂಲಕ ತಂದೆಗೆ ಸರ್ಪ್ರೈಸ್‌ ನೀಡಲು ಹೋದ ಮಗ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌ ವಿಡಿಯೋದಲ್ಲಿ ಯುವಕನೊಬ್ಬ ಕ್ಲೀನ್‌ ಶೇವ್‌ ಮಾಡಿ ತನ್ನ ತಂದೆಗೆ ಸರ್ಪ್ರೈಸ್‌ ನೀಡಲು ಬಹಳ ಕಾತುರದಿಂದ ನಿಂತಿರುವುದನ್ನು ಕಾಣಬಹುದು. ನಂತರ ತಂದೆ ಹಿಂದೆಯಿಂದ ಬಂದು ಮಗನ ಕ್ಲೀನ್‌ ಶೇವ್‌ ಅವತಾರವನ್ನು ಕಂಡು, ಗಡ್ಡ ಮೀಸೆ ಬೋಳಿಸ್ತೀಯಾ ಅಂತಾ ಕೋಪದಿಂದ ಮಗನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಇದನ್ನೂ ಓದಿ: ಸಮುದ್ರ ತೀರದಲ್ಲಿ ಪ್ರೇಮಿಗಳಿಬ್ಬರ ರೊಮ್ಯಾನ್ಸ್, ಪ್ರಿಯಕರ ನೋಡುತ್ತಿದ್ದಂತೆ ಅಲೆಗಳಲ್ಲಿ ಕೊಚ್ಚಿ ಹೋದ ಯುವತಿ‌

ಜೂನ್‌ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12.4 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಅನೇಕ ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಅಲ್ಲಾ ಮಕ್ಕಳಿಗೆ ತಮ್ಮಿಷ್ಟದಂತೆ ಗಡ್ಡ ಮೀಸೆ ಬೋಳಿಸುವ ಸ್ವಾತಂತ್ರ್ಯವೂ ಇಲ್ಲವೇ? ಎಂದು ಈ ತಂದೆಯ ಅತಿರೇಕದ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: