ಹೃದಯಸ್ಪರ್ಶಿ ಪ್ರೇಮಕಥೆ.. ಮೃತ ಪ್ರೇಮಿಗಳಿಗೆ ಪ್ರೇತ ಮದುವೆ ಮಾಡಿಸಿದ ಕುಟುಂಬಸ್ಥರು
Symbolising union in afterlife: ಜಿಂಗ್ಶನ್ ಮತ್ತು ಲಿ ಶುಯಿಂಗ್ಗೆ ಜೋಡಿಯ ಕುಟುಂಬಸ್ಥರು ಕಳೆದ ಸೋಮವಾರ ಅಂತ್ಯಕ್ರಿಯೆಯ ಸಮಯದಲ್ಲಿ ಅದೇ ಸಭಾಂಗಣದಲ್ಲಿ ಈ ವಿಶಿಷ್ಟ ವಿವಾಹ ಸಮಾರಂಭವನ್ನು ನಡೆಸಿ ಕೊಂಚ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಮೃತ ಯಾಂಗ್ ಜಿಂಗ್ಶನ್ ಮತ್ತು ಲಿ ಶುಯಿಂಗ್ ಜೋಟಿಗೆ ಅಲ್ಲಿ ವಿವಾಹ ನಡೆದಿತ್ತು. ಈ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಅವರಿಬ್ಬರ ಫೋಟೋವನ್ನು ಇಟ್ಟು ಆ ಫೋಟೋಗೆ ಮದುವೆ ಮಾಡಿಸಿದ್ದಾರೆ.
ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ ಸತ್ತವರಿಗೆ ಪ್ರೇತ ವಿವಾಹವೆಂದು ಮದುವೆ ಮಾಡಿಸುವ ಸಂಪ್ರದಾಯವಿದೆ ಎಂದು ತಿಳಿದಿದೆ. ಆದರೆ ಇತ್ತೀಚಿನ ಘಟನೆಯೊಂದಿಗೆ ಕೆಲವು ದೇಶಗಳಲ್ಲಿ ಕುಟುಂಬ ಸದಸ್ಯರು ಸತ್ತವರಿಗೂ ಮದುವೆ ಮಾಡಿಸಿದ್ದಾರೆ. ಇತ್ತೀಚೆಗೆ ಅಪಘಾತವೊಂದು ನಡೆದಿದ್ದು, ಏಕಕಾಲಕ್ಕೆ ಯುವಕ-ಯುವತಿ ಜೋಡಿ ಸಾವನ್ನಪ್ಪಿದ್ದರು. ಇದೀಗ ಆ ಪ್ರೇಮಿಗಳ ಜೋಡಿಗೆ ಎರಡೂ ಕುಟುಂಬದವರು ಸಂಪ್ರದಾಯದ ಪ್ರಕಾರವೇ ವಿವಾಹ ಮಾಡಿಸಿ, ಸಂತೃಪ್ತಿ-ಸಮಾಧಾನ ಹೊಂದಿದ್ದಾರೆ. ಮಲೇಷ್ಯಾದಲ್ಲಿ ಈ ಘಟನೆ ನಡೆದಿದೆ. ವಿವರಗಳಿಗೆ ಹೋಗುವುದಾದರೆ…
ಯಾಂಗ್ ಜಿಂಗ್ಶನ್ (31) ಮತ್ತು ಲಿ ಶುಯಿಂಗ್ (32) ಎಂಬ ಯುವ ಜೋಡಿ ಮಲೇಷ್ಯಾದಲ್ಲಿ ಮಾರಣಾಂತಿಕ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪೆರಾಕ್‌ನ ವಾಯವ್ಯ ಪ್ರದೇಶದಲ್ಲಿ ಕಳೆದ ತಿಂಗಳು ಮೇ 24 ರಂದು ಈ ಘಟನೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಯುವ ಜೋಡಿ ಪ್ರೇಮಿಗಳಾಗಿದ್ದರು. ಶೀಘ್ರದಲ್ಲೇ ಮದುವೆಯಾಗುವ ಆಲೋಚನೆಯನ್ನೂ ಹೊಂದಿದ್ದರು ಎಂದು ವರದಿಯಾಗಿದೆ. ಹಾಗೆಂದೇ, ಲಿ ಶುಯಿಂಗ್ಗೆ (Lee Xueying) ಪ್ರಪೋಸ್ ಮಾಡಲು ಜಿಂಗ್ಶನ್ (Yang Jingshan) ತನ್ನ ಹುಟ್ಟುಹಬ್ಬವನ್ನು ಆರಿಸಿಕೊಂಡಿದ್ದನು. ಬ್ಯಾಂಕಾಕ್‌ಗೂ ಹೋಗುವ ಪ್ಲಾನ್ ಮಾಡಿಕೊಂಡಿದ್ದರಂತೆ. ಆದರೆ ದುರದೃಷ್ಟ ದಂಪತಿಯನ್ನು ಕೈಬೀಸಿ ಕರೆದಿದೆ. ಅವರು ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತುವ ಮುನ್ನ ಇಬ್ಬರೂ ಕಾರು ಅಪಘಾತದಲ್ಲಿ ಅಸುನೀಗಿದ್ದಾರೆ. ಯಾಂಗ್ ಜಿಂಗ್ಶನ್ ಮತ್ತು ಲಿ ಶುಯಿಂಗ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಈ ಪ್ರಪಂಚದಿಂದ ದೂರವಾಗಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ ಅಪಘಾತದ ನಂತರ, ಆ ಯುವ ಜೋಡಿಯ ಎರಡೂ ಕಡೆಯ ಕುಟುಂಬಸ್ಥರು ಒಂದಾಗಿ ಅವರ ಸಾವಿನ ನೋವಲ್ಲೂ ಒಂದು ವಿಶೇಷ ಆಚರಣೆಯನ್ನು ನಡೆಸಲು ನಿರ್ಧರಿಸಿದ್ದಾರೆ. ತಮ್ಮ ಮಕ್ಕಳ ಪ್ರೀತಿಯೆಂಬ ಕೊನೆಯ ಆಸೆಯನ್ನು ಈಡೇರಿಸಲು ‘ಪ್ರೇತ ವಿವಾಹ’ ನಡೆಸಿದ್ದಾರೆ.
ಇದು ಚೀನಾದ ಸಂಪ್ರದಾಯ. ಈ ಸಂಪ್ರದಾಯದಲ್ಲಿ ಇಬ್ಬರು ಅವಿವಾಹಿತರು ಸತ್ತಾಗ ಅವರ ಆತ್ಮಗಳು ವಿವಾಹದ ಪವಿತ್ರ ಬಂಧದಲ್ಲಿ ಒಂದಾಗುತ್ತವೆ. ಹೀಗೆ ಮಾಡುವುದರಿಂದ ಸಾವಿನ ನಂತರವೂ ಇಬ್ಬರೂ ಪತಿ-ಪತ್ನಿಯಾಗಿ ಶಾಶ್ವತವಾಗಿ ಉಳಿಯುತ್ತಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬುದು ಬಲವಾದ ನಂಬಿಕೆ.
ಜಿಂಗ್ಶನ್ ಮತ್ತು ಲಿ ಶುಯಿಂಗ್ಗೆ ಜೋಡಿಯ ಕುಟುಂಬಸ್ಥರು ಕಳೆದ ಸೋಮವಾರ ಅಂತ್ಯಕ್ರಿಯೆಯ ಸಮಯದಲ್ಲಿ ಅದೇ ಸಭಾಂಗಣದಲ್ಲಿ ಈ ವಿಶಿಷ್ಟ ವಿವಾಹ ಸಮಾರಂಭವನ್ನು ನಡೆಸಿ ಕೊಂಚ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಮೃತ ಯಾಂಗ್ ಜಿಂಗ್ಶನ್ ಮತ್ತು ಲಿ ಶುಯಿಂಗ್ ಜೋಟಿಗೆ ಅಲ್ಲಿ ವಿವಾಹ ನಡೆದಿತ್ತು. ಈ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಅವರಿಬ್ಬರ ಫೋಟೋವನ್ನು ಇಟ್ಟು ಆ ಫೋಟೋಗೆ ಮದುವೆ ಮಾಡಿಸಿದ್ದಾರೆ. ಜಿಂಗ್ಶನ್ ಅವರ ಕುಟುಂಬವು ತಮ್ಮ ಸಂತಾಪ ಸಂದೇಶದಲ್ಲಿ ಲಿ ಶುಯಿಂಗ್ ಳನ್ನು ತಮ್ಮ ಸೊಸೆ ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಸಮುದ್ರ ತೀರದಲ್ಲಿ ಪ್ರೇಮಿಗಳಿಬ್ಬರ ರೊಮ್ಯಾನ್ಸ್, ಪ್ರಿಯಕರ ನೋಡುತ್ತಿದ್ದಂತೆ ಅಲೆಗಳಲ್ಲಿ ಕೊಚ್ಚಿ ಹೋದ ಯುವತಿ
ಸತ್ತವರನ್ನು ಮದುವೆಯಾಗುವ ಸಂಪ್ರದಾಯ ಚೀನಾದಲ್ಲಿ ಮಾತ್ರವಲ್ಲದೆ ಈ ದೇಶಗಳಲ್ಲಿಯೂ ಇದೆ. ಚೀನೀ ಜಾನಪದ ಶಾಸ್ತ್ರಜ್ಞ ಹುವಾಂಗ್ ಜಿಂಗ್ಚುನ್ ಪ್ರಕಾರ ಸತ್ತ ಜನರನ್ನು ಮದುವೆಯಾಗುವ ಸಂಪ್ರದಾಯವು ಪ್ರೀತಿಪಾತ್ರರನ್ನು ಕಳೆದುಕೊಂಡ ಸಂಬಂಧಿಕರ ಭಾವನೆಗಳನ್ನು ನಿಭಾಯಿಸಲು/ನಿಗ್ರಹಿಸಲು ಸಹಾಯ ಮಾಡುತ್ತದೆ. ಚೀನೀ ಸಂಸ್ಕೃತಿಯ ಪ್ರಭಾವದ ಅಡಿಯಲ್ಲಿ ಉತ್ತರ ಕೊರಿಯಾ ಮತ್ತು ಜಪಾನ್‌ನಂತಹ ಪೂರ್ವ ಏಷ್ಯಾದ ಕೆಲ ದೇಶಗಳಲ್ಲಿಯೂ ಆತ್ಮ ವಿವಾಹದ ಸಂಪ್ರದಾಯ/ ವಾಡಿಕೆ ಪ್ರಚಲಿತವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Thu, 20 June 24