ಪ್ರತೀ ಮಗುವಿಗೂ ತಂದೆಯೇ ಸೂಪರ್ ಹೀರೋ. ಅವರ ತ್ಯಾಗ, ತಾಳ್ಮೆ, ಧೈರ್ಯ ಎಲ್ಲವೂ ಪ್ರತೀ ಮಗುವಿಗೂ ಆದರ್ಶ. ಅವರೊಬ್ಬರು ಜೊತೆಯಿದ್ದರೆ ಮಕ್ಕಳಿಗೆ ಅದೇನೊ ವಿಶ್ವಾಸ. ತನ್ನ ಇಡೀ ಜೀವನವನ್ನು ಕುಟುಂಬಕ್ಕಾಗಿ ಮುಡುಪಾಗಿಟ್ಟು, ತನ್ನ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ಜೀವ ಎಂದರೆ ಅದು ಅಪ್ಪ. ಇಂತಹ ಅಪ್ಪ ತನ್ನ ಮಗುವಿಗೆ ಯಾವುದೇ ಅಪಾಯ ಬಾರದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಇದಕ್ಕೆ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಂದೆಯೊಬ್ಬರು ಸೂಪರ್ ಹೀರೋನಂತೆ ಬಂದು ತನ್ನ 2 ವರ್ಷ ವಯಸ್ಸಿನ ಪುಟ್ಟ ಮಗಳನ್ನು ತೋಳದ ದಾಳಿಯಿಂದ ರಕ್ಷಣೆ ಮಾಡಿದ್ದಾರೆ.
ಈ ಘಟನೆ ಒಂದುವರೆ ವರ್ಷಗಳ ಹಿಂದೆ ಅಮೇರಿಕಾದ ಲಾಸ್ ಏಂಜಲೀಸ್ ಅಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ತುಣುಕೊಂದು ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋವನ್ನು @crzyclipsonly ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “2 ವರ್ಷ ವಯಸ್ಸಿನ ಮಗುವಿನ ಮೇಲೆ ತೋಳದ ದಾಳಿ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
2-year-old girl attacked by a coyote 😳 pic.twitter.com/GGb2bfgxGk
— Crazy Clips (@crazyclipsonly) March 22, 2024
ವೈರಲ್ ವಿಡಿಯೋದಲ್ಲಿ ಮನೆಯ ಹೊರಗಡೆ ಕಾರಿನಿಂದ ಇಳಿಯುತ್ತಿದ್ದಂತೆ 2 ವರ್ಷ ವಯಸ್ಸಿನ ಮಗುವಿನ ಮೇಲೆ ಕೊಯೆಟಾ ಒಂದು ಜಾತಿಯ ತೋಳ ಇದ್ದಕ್ಕಿದ್ದಂತೆ ದಾಳಿ ಮಾಡುವ ದೃಶ್ಯವನ್ನು ಕಾಣಬಹುದು. ತೋಳ ತನ್ನನ್ನು ಎಳೆದುಕೊಂಡು ಹೋಗುತ್ತಿದ್ದಂತೆ ಮಗು ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಆ ತಕ್ಷಣ ಕಾರಿನ ಈ ಬದಿಯಲ್ಲಿದ್ದ ತಂದೆ ಸೂಪರ್ ಹೀರೋನಂತೆ ಓಡಿ ಬಂದು ತೋಳಕ್ಕೆ ಗದರಿಸುವ ಮೂಲಕ ಮಗುವನ್ನು ರಕ್ಷಿಸಿ ಮನೆಯ ಒಳಗೆ ಕರೆದುಕೊಂಡು ಹೋಗುತ್ತಾರೆ. ನಂತರ ನನ್ನ ಮಗಳ ಮೇಲೆ ದಾಳಿ ಮಾಡಲು ನಿನಗೆಷ್ಟು ಧೈರ್ಯ ಎನ್ನುತ್ತಾ ಆ ವ್ಯಕ್ತಿ ಕೈಯಲ್ಲೊಂದು ದೊಣ್ಣೆ ಹಿಡಿದುಕೊಂಡು ಬಂದು ತೋಳವನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಯರಿಬ್ಬರ ಹೋಳಿ ಆಚರಣೆ; ಅಸಭ್ಯ ವರ್ತನೆಗೆ ಪ್ರಯಾಣಿಕರು ಕಿಡಿ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕೊಯೊಟೆಗಳು ವಿಶೇಷವಾಗಿ ಪುಟ್ಟ ಮಕ್ಕಳಿಗೆ ತುಂಬಾನೇ ಅಪಾಯಕಾರಿ. ಆದ್ದರಿಂದ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿʼ ಎಂದು ಸಲಹೆ ನೀಡಿದ್ದಾರೆ. ಇನ್ನೂ ಅನೇಕರು ತಂದೆ ತನ್ನ ಸಮಯಪ್ರಜ್ಞೆಯಿಂದ ಮಗಳನ್ನು ತೋಳದ ದಾಳಿಯಿಂದ ರಕ್ಷಿಸಿದ ಪರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ