
ಅಪ್ಪ (father) ಅಂದ್ರೆ ಆಕಾಶ, ತನ್ನ ಮಕ್ಕಳ ಸಂತೋಷಕ್ಕಾಗಿ ತನಗೆ ಎಷ್ಟೇ ಕಷ್ಟ ಬಂದರೂ ಸರಿಯೇ, ಎಲ್ಲವನ್ನು ಸಹಿಸಿಕೊಳ್ಳುವ ಜೀವವೊಂದಿದ್ದರೆ ಅದು ತಂದೆ ಮಾತ್ರ. ಒಂದು ವೇಳೆ ಹೆಣ್ಣು ಮಗಳಿದ್ದರೆ ತಂದೆಗೆ ಆಕೆಯೇ ತನ್ನ ಪ್ರಪಂಚವಾಗಿರುತ್ತಾಳೆ. ತಂದೆಯಾದವನು ತನ್ನ ಮಗ ಹಾಗೂ ಮಗಳಿಗಾಗಿ ತನ್ನ ಪ್ರಾಣ ಬೇಕಾದ್ರೂ ಕೊಡಲು ಸಿದ್ಧವಿರುತ್ತಾನೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಂತಿದೆ. ಚಲಿಸುವ ರೈಲಿನ ಕೆಳಗೆ ಬಿದ್ದ ತನ್ನ ಮಗಳನ್ನು ತಂದೆಯೊಬ್ಬನು ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ (social media) ಹರಿದಾಡುತ್ತಿದೆ. ತನ್ನ ಪ್ರಾಣವನ್ನು ಲೆಕ್ಕಿಸದೇ ಮಗಳನ್ನು ರಕ್ಷಿಸಿದ ಈ ವ್ಯಕ್ತಿಯ ಧೈರ್ಯವಂತಿಕೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
@awkwardgoogle ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಪುಟಾಣಿಯೊಬ್ಬಳು ರೈಲು ಹಾಗೂ ಫ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಜಾಗದಲ್ಲಿ ಬಿದ್ದು ಅಪಾಯದಲ್ಲಿ ಸಿಲುಕಿಕೊಂಡಿದ್ದಾಳೆ. ಇತ್ತ ರೈಲೊಂದು ನಿಲ್ದಾಣದ ಕಡೆಗೆ ವೇಗವಾಗಿ ಬರುತ್ತಿದ್ದು, ಈ ಪುಟ್ಟ ಹುಡುಗಿಯನ್ನು ನೋಡಿ ಅಲ್ಲಿದ್ದ ಜನರು ಕಿರುಚಲು ಪ್ರಾರಂಭಿಸಿದ್ದಾರೆ. ಆದರೆ ಈ ಪುಟಾಣಿಯ ತಂದೆಯೂ ಮಾತ್ರ ಹಿಂದೆ ಮುಂದೆ ನೋಡದೇ ರೈಲಿನ ಹಳಿಗೆ ಜಿಗಿದು ಮಗಳನ್ನು ತಬ್ಬಿಕೊಂಡು ಅಲ್ಲೇ ಮಲಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಘಟನೆಯಲ್ಲಿ ತಂದೆ ಮಗಳಿಗೆ ಯಾವುದೇ ಗಾಯಗಳಾಗಿಲ್ಲ. ಈ ದೃಶ್ಯವನ್ನು ತಮ್ಮ ಕಣ್ಣಾರೆ ನೋಡಿದ ಪ್ರಯಾಣಿಕರು ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲೇ ಇದ್ದ ಪ್ರಯಾಣಿಕರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
Dad shields his daughter with his body after she stepped into a train’s pathpic.twitter.com/Blqs1UISc8
— Interesting things (@awkwardgoogle) June 16, 2025
ಜೂನ್ 16 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು 20.1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಪೋಷಕರು ತಮ್ಮ ಮಕ್ಕಳಿಗಾಗಿ ಏನು ಬೇಕಾದರೂ ಮಾಡುತ್ತಾರೆ, ಸಾವಿನೊಂದಿಗೆ ಹೋರಾಡಲು ಸಿದ್ಧವಿರುತ್ತಾರೆ ಎಂದಿದ್ದಾರೆ. ಇನ್ನೊಬ್ಬರು, ಇಂತಹ ತಂದೆಯನ್ನು ಪಡೆದ ಆಕೆಯೇ ಪುಣ್ಯವಂತೆ, ನಿಜವಾದ ಈ ಹೀರೋ ಈ ಅಪ್ಪ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪ್ರತಿಯೊಬ್ಬ ತಂದೆಯೂ ನಿಜವಾದ ಹೀರೋ ಆಗಿರುತ್ತಾನೆ ಎಂದು ಕಾಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ. ಕೆಲವರೂ ನಿಜವಾದ ತಂದೆ ಇವನು, ಈತನ ಧೈರ್ಯವನ್ನು ಮೆಚ್ಚಿಕೊಳ್ಳುವ ಮೂಲಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:19 pm, Sun, 22 June 25