Video: ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ ಆ್ಯಂಕರ್; ಕಾರಣ ಏನು ಗೊತ್ತಾ?
ಇಸ್ರೇಲ್ನ ನಿರಂತರ ಬಾಂಬ್ ದಾಳಿಯಿಂದ ಲೆಬನಾನ್‌ನ ಹೆಜ್ಬೊಲ್ಲಾ ಉಗ್ರ ಸಂಘಟನೆ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದು, ಈ ಕುರಿತು ಸುದ್ದಿ ಓದುವ ಹೊತ್ತಿನಲ್ಲಿ ನೋವು ತಾಳಲಾರದೇ ಸುದ್ದಿ ನಿರೂಪಕಿ ನೇರ ಪ್ರಸಾರದಲ್ಲೇ ಅಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ಕಳೆದ ಕೆಲ ದಿನಗಳಿಂದ ಇಸ್ರೇಲ್ ಲೆಬನಾನ್ ರಾಜಧಾನಿ ಬೈರುತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದ್ದು, ಬಾಂಬ್ ದಾಳಿಗೆ ಲೆಬನಾನ್‌ನ ಹೆಜ್ಬೊಲ್ಲಾ ಉಗ್ರ ಸಂಘಟನೆ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ. ಈ ಕುರಿತು ಬನಾನ್‌ನ ಅಲ್-ಮಯಾದೀನ್ ನ್ಯೂಸ್ ಚಾನೆಲ್ ಸುದ್ದಿ ನೀಡಿದ್ದು, ಈ ವೇಳೆ ನಾಯಕ ಹಸನ್ನ ಸಾವಿನ ನೋವು ತಾಳಲಾರದೇ ಸುದ್ದಿ ನಿರೂಪಕಿ ನೇರ ಪ್ರಸಾರದಲ್ಲೇ ಅಳುತ್ತಾ ವಾರ್ತೆ ವಾಚಿಸಿದ್ದಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ನೋಡಿ: ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ
Loading...
Unable to load recommendations.
Follow Us