ಲೇಡಿ ಬ್ರೂಸ್ ಲೀ ಎಂದೇ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್ ಆದ ಮಹಿಳೆ

ಮಹಿಳೆಯೊಬ್ಬಳು ಲೇಡಿ ಬ್ರೂಸ್ ಲೀ ಎಂದೇ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದ್ದಾಳೆ. ಹೌದು ಈಕೆ ಪುರುಷರಿಬ್ಬರ ಜೊತೆ ಹೊಡೆದಾಡಿಕೊಂಡಿದ್ದು, ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಭಾರೀ ವೈರಲ್​ ಆಗಿದೆ.

ಲೇಡಿ ಬ್ರೂಸ್ ಲೀ ಎಂದೇ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್ ಆದ ಮಹಿಳೆ
Female Bruce Lee

Updated on: Apr 21, 2023 | 12:27 PM

ಮುಖ್ಯಾಂಶಗಳು

  • ಇಲ್ಲೊಂದು ಮಹಿಳೆ ಲೇಡಿ ಬ್ರೂಸ್ ಲೀ ಎಂದೇ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದ್ದಾಳೆ.
  • ಮಹಿಳೆಯರಿಗೆ ತಮ್ಮ ಆತ್ಮರಕ್ಷಣೆಗಾಗಿ ಸಾಕಷ್ಟು ಕರಾಟೆ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ.
  • ಇಲ್ಲೊಬ್ಬಳು ಸರಿಯಾದ ಸಮಯದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ವಿಡಿಯೋ ಇಲ್ಲಿದೆ ನೋಡಿ.

ಸಾಮಾನ್ಯ ಹೆಣ್ಣು ತಗ್ಗಿ ಬಗ್ಗಿ ನಡೆಯುವುದನ್ನು ಬಿಟ್ಟು ಸಮಾಜದಲ್ಲಿ ಧ್ವನಿ ಎತ್ತಲು ಪ್ರಾರಂಭಿಸಿದರೆ ಆಕೆಯನ್ನು ಗಂಡು ಬೀರಿ, ಜಗಳಗಂಟಿ, ರೌಡಿ ಬೇಬಿ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುವುದುಂಟು. ಇದೇ ರೀತಿ ಇಲ್ಲೊಂದು ಮಹಿಳೆ ಲೇಡಿ ಬ್ರೂಸ್ ಲೀ ಎಂದೇ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದ್ದಾಳೆ. ಹೌದು ಈಕೆ ಪುರುಷರಿಬ್ಬರ ಜೊತೆ ಹೊಡೆದಾಡಿಕೊಂಡಿದ್ದು, ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಭಾರೀ ವೈರಲ್​ ಆಗಿದೆ.

ಮಹಿಳೆಯರಿಗೆ ತಮ್ಮ ಆತ್ಮರಕ್ಷಣೆಗಾಗಿ ಸಾಕಷ್ಟು ಕರಾಟೆ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ. ಇಲ್ಲೊಬ್ಬಳು ಸರಿಯಾದ ಸಮಯದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ಪಿಂಚಣಿ ಪಡೆಯಲು ಈ ಬಿಸಿಲ ಝಳದಲ್ಲಿ ಮುರಿದ ಕುರ್ಚಿಯ ಸಹಾಯ ಪಡೆಯುತ್ತಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವೃದ್ಧೆ

ಹೋಟೆಲು ಒಂದರಲ್ಲಿ ಪುರುಷರಿಬ್ಬರು ಗ್ರಾಹಕರಂತೆ ಬಂದು ಕುಳಿತಿರುವುದನ್ನು ಕಾಣಬಹುದು. ಮಹಿಳೆಯೊಬ್ಬಳು ಗ್ರಾಹಕರಿಗೆ ಆಹಾರವನ್ನು ಸರ್ವ್​ ಮಾಡುತ್ತಿದ್ದಂತೆ ಕಂಡುಬರುತ್ತಿದೆ. ಒಬ್ಬ ಹಠಾತ್ತನೆ ಎದ್ದು ಆಕೆಯ ಕೈಯನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆಗ ಆಕೆ ತನ್ನ ಬಲಗೈಯಿಂದ ಎರಡು ಅಪ್ಪರ್‌ಕಟ್‌ಗಳನ್ನು ನೀಡುತ್ತಾಳೆ ಮತ್ತು ಎಡಗೈಯಿಂದ ಅವನ ಬಲಗೈಯನ್ನು ಲಾಕ್ ಮಾಡುವಾಗ ತೊಡೆಸಂದು ಪ್ರದೇಶಕ್ಕೆ ಒದೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೀಡಿಯೊವನ್ನು @cctvidiots ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್​​​ ಮಾಡಲಾಗಿದೆ. ಜೊತೆಗೆ “ಲೇಡಿ ಬ್ರೂಸ್ ಲೀ” ಎಂಬ ಶೀರ್ಷಿಕೆ ನೀಡಲಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 12:27 pm, Fri, 21 April 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us