Wild Animal Fight Video: ಸಿಂಹಗಳು ಆನೆಗಳ ಮೊದಲ ನೈಸರ್ಗಿಕ ಶತ್ರು ಎಂದು ಹೇಳಲಾಗುತ್ತದೆ. ಅವು ಗುಂಪು ಗುಂಪ್ಪಾಗಿರುತ್ತವೆ ಮತ್ತು ಬೇಟೆಯಾಡುತ್ತವೆ. ಸಿಂಹಗಳು ಎಲ್ಲ ಪ್ರಾಣಿಗಳಿಗಿಂತ ಹೆಚ್ಚಿಗೆ ಬೇಟೆ ಮಾಡುತ್ತವೆ. ಮನುಷ್ಯರನ್ನು ಹೊರತುಪಡಿಸಿ, ಸಿಂಹಗಳು ಮಾತ್ರ ಆನೆಯನ್ನು ಕೊಲ್ಲುವಷ್ಟು ಶಕ್ತಿಯುತವಾದ ಪರಭಕ್ಷಕಗಳಾಗಿವೆ. ಗಂಡು, ಹೆಣ್ಣುಗಿಂತ 50% ತೂಕವಿರುತ್ತದೆ. ವಿಶೇಷವಾಗಿ ಈ ಕಾರ್ಯಕ್ಕೆ ಸೂಕ್ತವಾಗಿರುತ್ತದೆ. ಆನೆಯನ್ನು ಕೊಲ್ಲಲು ಸಾಮಾನ್ಯವಾಗಿ ಏಳು ಸಿಂಹಿಣಿಗಳು ಬೇಕಾಗುತ್ತವೆ. ಆದರೆ ಕೇವಲ ಎರಡು ಗಂಡು ಸಿಂಹಗಳು ಆನೆಯನ್ನು ಭೇಟಿಯಾಡುತ್ತವೆ. ಒಂದು ಗಂಡು ಕೂಡ ಎಳೆಯ ಆನೆಯನ್ನು ಸೋಲಿಸಬಲ್ಲದು. ಈಗ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆನೆಯನ್ನು ಬೇಟೆಯಾಡಲು ಸಿಂಹಿಣಿಯೊಂದು ಕಷ್ಟಪಡುತ್ತಿರುವಂತಹ ವಿಡಿಯೋ ವೈರಲ್ ಆಗಿದೆ. ವನ್ಯಜೀವಿ ಛಾಯಾಗ್ರಾಹಕರಿಂದ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಮತ್ತು ಬಳಕೆದಾರರು ಟ್ವಿಟರ್‌ನಲ್ಲಿ ಮರುಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್ ವನ್ಯಜೀವಿ ಛಾಯಾಗ್ರಾಹಕ ತನ್ನ ಜೀಪ್ ಬಳಿ ಆನೆ ಮತ್ತು ಸಿಂಹಿಣಿಗಳ ನಡುವಿನ ತೀವ್ರವಾದ ಕಾಳಗವನ್ನು ರೆಕಾರ್ಡ್ ಮಾಡುವುದನ್ನು ಕಾಣಬಹುದಾಗಿದೆ.
— Life and nature (@afaf66551) June 24, 2021
ವಿಡಿಯೋ ಪ್ರಾರಂಭವಾಗುತ್ತಿದ್ದಂತೆ, ನೀವು ಆನೆಯ ಮೇಲೆ ಸಿಂಹಿಣಿಯೊಂದು ಕುಳಿತಿರುವುದನ್ನು ನೋಡಬಹುದು. ಆನೆಯ ಕಿವಿಯನ್ನು ಸಿಂಹ ತನ್ನ ಹಲ್ಲುಗಳಿಂದ ಬಲವಾಗಿ ಹಿಡಿದುಕೊಂಡಿದೆ. ಆನೆಯು ಸಿಂಹಿಣಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸಿಂಹ ಆನೆ ಮೇಲೆ ನೇತಾಡುತ್ತದೆ. ಮತ್ತು ಆನೆಯ ಕಿವಿಯನ್ನು ಕಚ್ಚಲು ಪ್ರಯತ್ನಿಸುತ್ತದೆ. ಇಬ್ಬರ ನಡುವೆ ಕಾಳಗ ಹೆಚ್ಚಾಗುತ್ತಿದ್ದಂತೆ ಸಿಂಹದ ದಾಳಿಗೆ ಗಾಯಗೊಂಡ ಆನೆ ಜೋರಾಗಿ ಚೀರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಆದಾಗ್ಯೂ, ಆನೆ ಇನ್ನೂ ಸಿಂಹಿಣಿಯನ್ನು ಸೋಲಿಸಲು ಪ್ರಯತ್ನಿಸುತ್ತೆ. ಆನೆ ಮೇಲಿಂದ ಸಿಂಹವನ್ನು ಕೇಳಗಿಸಿ ಪೊದೆಗಳಲ್ಲಿ ಎಸೆಯುತ್ತದೆ. ಸದ್ಯ ಈ ವಿಡಿಯೋ 3,100 ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ:
ಕ್ಯಾಲಿಫೋರ್ನಿಯಾ: ಮಂಚದಲ್ಲಿ 7 ಅಡಿ ಉದ್ದದ ಹಾವು ಮಲಗಿದ್ದನ್ನು ನೋಡಿ ಹೌಹಾರಿದ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ