Flight Take off : ವಿಮಾನವು ಅಮೆರಿಕದಿಂದ ಲಂಡನ್ಗೆ ಹಾರಲೆಂದು ರನ್ವೇನಲ್ಲಿ (Run Way) ಚಲಿಸುತ್ತಿರುವಾಗ ಲಂಡನ್ನ (UK) 27 ವರ್ಷದ ವ್ಯಕ್ತಿ ವಿಮಾನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ಆತಂಕಕಾರಿ ಘಟನೆ ನಡೆದಿದೆ. ಆಗ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೆಲ ಪ್ರಯಾಣಿಕರು ಈ ವ್ಯಕ್ತಿಯನ್ನು ಬಾಗಿಲು ತೆರೆಯದಂತೆ ತಡೆದಿದ್ದಾರೆ. ಆನಂತರ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
???? A British tourist tried to open the door on a crowded Ryanair plane flying from Zadar in Croatia.
ಇದನ್ನೂ ಓದಿWhen he ran to the door, two young men jumped on him and threw him to the floor. pic.twitter.com/taUp4nzkpD
— Winnie Pooh (@WinniePooh14466) July 3, 2023
ಈ ವಿಮಾನದಲ್ಲಿದ್ದ ಬಹುಪಾಲು ಪ್ರಯಾಣಿಕರು ಅಮೆರಿಕದ ಪಾಗ್ ದ್ವೀಪದಲ್ಲಿ ನಡೆದ ಹೈಡ್ ಔಟ್ ಕ್ರೊಯೇಷಿಯಾದ ಸಂಗೀತ ಉತ್ಸವದಿಂದ ಲಂಡನ್ಗೆ ಮರಳುತ್ತಿದ್ದರು. ವಿಮಾನವು ರನ್ವೇನಲ್ಲಿ ಚಲಿಸುತ್ತಿದ್ದಂತೆ ಈ ವ್ಯಕ್ತಿ ಇದ್ದಕ್ಕಿದ್ದಂತೆ ಸೀಟು ಬಿಟ್ಟು ಬಂದು ಬಾಗಿಲು ತೆರೆಯಿರಿ ಎಂದು ಕೂಗಲಾರಂಭಿಸಿದ. ಜೊತೆಗೆ ಏನೋ ಸನ್ನೆ ಮಾಡತೊಡಗಿದ. ಅಲ್ಲಿದ್ದ ಪ್ರಯಾಣಿಕರು ಅವನನ್ನು ತಡೆಯಲು ಹರಸಾಹಸಪಟ್ಟರು. ಅವನ ಆರ್ಭಟ ಜೋರಾಗುತ್ತಿದ್ದಂತೆ ಇಬ್ಬರು ಗಂಡಸರು ಅವನನ್ನು ಕೆಳಕ್ಕೆ ಬೀಳಿಸಿ ಗಟ್ಟಿಯಾಗಿ ಹಿಡಿದು ಬಾಗಿಲು ತೆರೆಯುವುದನ್ನು ತಪ್ಪಿಸಿದರು.
ಇದನ್ನೂ ಓದಿ : Viral: ”ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ”; ಹೆಂಡತಿ ಗಂಡನಿಗೆ ಹೇಳಿದಾಗ…
ನಂತರ ಈತನನ್ನು ವಿಮಾನದಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ ಪ್ರಯಾಣಿಕರು ಅದೇ ವಿಮಾನದಲ್ಲಿ ತಮ್ಮ ದೇಶ ತಲುಪಿದರು. ”ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸದ್ಯ ಈತ ಬಂಧನದಲ್ಲಿದ್ದಾನೆ. ಅಲ್ಲದೆ ಈ ವ್ಯಕ್ತಿಯಿಂದ ಉಂಟಾದ ಅನಾನುಕೂಲತೆಗೆ ಪ್ರಯಾಣಿಕರಲ್ಲಿ ಕ್ಷಮೆ ಕೇಳುತ್ತೇವೆ” ಎಂದು ವಿಮಾನಸಂಸ್ಥೆಯು (Ryanair Airlines) ತಿಳಿಸಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:25 am, Wed, 5 July 23