Viral Video: ಮೀನಿನ ಹೊಟ್ಟೆಯೊಳಗಿತ್ತು ವಿಸ್ಕಿ ಬಾಟಲ್​​! ವಿಡಿಯೋ ನೋಡಿ

| Updated By: shruti hegde

Updated on: Jun 23, 2021 | 12:50 PM

ವಿಶಾಲವಾದ ಸಾಗರದಲ್ಲಿ ಇಬ್ಬರು ಮೀನುಗಾರರು ಮೀನು ಕತ್ತರಿಸುತ್ತುರುವ ವಿಡಿಯೋವನ್ನು ನೋಡಬಹುದು. ಜತೆಗೆ ಮೀನಿನ ಹೊಟ್ಟೆಯೊಳಗಿದ್ದ ವಿಸ್ಕಿ ಬಾಟಲಿಯನ್ನು ಹೊರ ತೆಗೆದು ಕ್ಯಾಮರಾದ ಮುಂದೆ ತೋರಿಸುತ್ತಿರುವುದು ಕಾಣಿಸುತ್ತದೆ.

Viral Video: ಮೀನಿನ ಹೊಟ್ಟೆಯೊಳಗಿತ್ತು ವಿಸ್ಕಿ ಬಾಟಲ್​​! ವಿಡಿಯೋ ನೋಡಿ
ಮೀನಿನ ಹೊಟ್ಟೆಯೊಳಗಿತ್ತು ವಿಸ್ಕಿ ಬಾಟಲ್​!
Follow us on

ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲಿಯೊಂದು ಪತ್ತೆಯಾಗಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ವಿಡಿಯೋ ನೋಡಿದ ನೆಟ್ಟಿಗರು ಪ್ಲಾಸ್ಟಿಕ್​ ಜತೆಗೆ ಗಾಜಿನ ಬಾಟಲಿಗಳನ್ನು ಎಸೆಯುತ್ತಿರುವುದರಿಂದ ಅದೆಷ್ಟೋ ಜಲಚರಗಳು ಸಾಯುತ್ತಿವೆ ಎಂದು ಹೇಳಿದ್ದಾರೆ. ಇನ್ನು ಕೆಲವರು, ನಿಜಕ್ಕೂ ಆಶ್ಚರ್ಯವಾಗುತ್ತಿದೆ, ಮೀನು ಇಡೀ ಬಾಟಲಿಯನ್ನೇ ನುಂಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ವಿಶಾಲವಾದ ಸಾಗರದಲ್ಲಿ ಇಬ್ಬರು ಮೀನುಗಾರರು ಮೀನು ಕತ್ತರಿಸುತ್ತುರುವ ವಿಡಿಯೋವನ್ನು ನೋಡಬಹುದು. ಜತೆಗೆ ಮೀನಿನ ಹೊಟ್ಟೆಯೊಳಗಿದ್ದ ವಿಸ್ಕಿ ಬಾಟಲಿಯನ್ನು ಹೊರ ತೆಗೆದು ಕ್ಯಾಮರಾದ ಮುಂದೆ ತೋರಿಸುತ್ತಿರುವುದು ಕಾಣಿಸುತ್ತದೆ. ಕೆಲವರಿಗೆ ಆಶ್ಚರ್ಯವನ್ನುಂಟು ಮಾಡಿದ್ದರೆ ಇನ್ನು ಕೆಲವರಿಗೆ ನಿಜವಾಗಿಯೂ ಆ ಮೀನು ಇಡೀ ಬಾಟಲಿಯನ್ನೇ ನುಂಗಿದೆಯೇ? ಎಂಬ ಸಂಶಯ ಮೂಡಿದೆ.

ವಿಡಿಯೋವನ್ನು ಯೂಟ್ಯೂಬ್​ ಮತ್ತು ಇತರ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಸಾಗರದಲ್ಲಿನ ಜಲಚರಗಳು ಗಾಜಿನ ವಸ್ತುಗಳನ್ನು ಮತ್ತು ಪ್ಲಾಸ್ಟಿಕ್​ಗಳನ್ನು ನುಂಗುವುದು ಅಸಾಮಾನ್ಯವೇನಲ್ಲ ಎಂಬ ಪ್ರತಿಕ್ರಿಯೆಗಳು ಕೇಳಿ ಬಂದಿವೆ.

ಈ ವರ್ಷದ ಆರಂಭದಲ್ಲಿ ಮೀನಿನ ಹೊಟ್ಟೆಯಲ್ಲಿ ಜೀವಂತವಿರುವ ಆಮೆಯೊಂದು ಪತ್ತೆಯಾಗಿತ್ತು. ಈ ಕುರಿತಂತೆ ಫ್ಲೋರಿಡಾದ ವನ್ಯಜೀವಿ ಸಂಶೋಧನಾ ಕೇಂದ್ರದ ಜೀವಶಾಸ್ತ್ರಜ್ಞರು ಮಾಹಿತಿ ನೀಡಿದ್ದರು.

ನೀರಿನಲ್ಲಿ ಬಿಸಾಡುವ ಕರಗದ ಪ್ಲಾಸ್ಟಿಕ್​ಗಳನ್ನು ಅಥವಾ ಗಾಜಿನ ಚೂರುಗಳನ್ನು ನುಂಗಿ ಜಲಚರಗಳು ಸಾಯುತ್ತಿರುವ ವಿಷಯ ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ. ಹೀಗಿರುವಾಗ ಆದಷ್ಟು ಪೃಕೃತಿಯನ್ನು ಉಳಿಸಿಕೊಳ್ಳುವತ್ತ ನಾವು ಗಮನಹರಿಸಬೇಕಿದೆ. ಕೆಲವರು ಬಾರಿ ನಿರ್ಲಕ್ಷ್ಯದಿಂದ ಮಾಡಿರುವ ಇಂತಹ ತಪ್ಪುಗಳು ಜೀವಿಗಳನ್ನು ಬಲಿ ತೆಗೆದುಕೊಂಡು ಬಿಡುತ್ತವೆ. ಹಾಗಾಗಿ ನೀರಿನಲ್ಲಿ ಅಥವಾ ಮಣ್ಣಿನಲ್ಲಿ ಪ್ಲಾಸ್ಟಿಕ್​ ಬಿಸಾಡುವುದು ಅಥವಾ ಗಾಜಿನ ಚೂರುಗಳನ್ನು ಬಿಸಾಡುವುದನ್ನು ತಪ್ಪಿಸಿ.

ಇದನ್ನೂ ಓದಿ:

ಮತ್ಸ್ಯ ಬೇಟೆಯಲ್ಲಿ ಗಣನೀಯ ಇಳಿಕೆ; ಕರಾವಳಿಯ ಮೀನುಗಾರರಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ

ಮೀನು ಕೃಷಿಗೆ ಕೈ ಹಾಕಿ ಯಶಸ್ವಿಯಾದ ಕೊಡಗು ರೈತ; ಗ್ರಾಹಕರ ಎದುರೇ ಹಿಡಿದು ತಾಜಾ ಮೀನು ಮಾರಾಟ