Viral Video: ಮಂಟಪದಲ್ಲಿ ವಧುವಿನ ಹೆಗಲ ಮೇಲೆ ಕೈ ಹಾಕಿ ನಗುತ್ತಾ ಕುಳಿತಿದ್ದ ವರನಿಗೆ ಬೈದ ಪುರೋಹಿತರು

ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ 14 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ಹಲವಾರು ಕಾಮೆಂಟ್ಸ್​ಗಳು ಕೂಡಾ ಲಭಿಸಿವೆ.

Viral Video: ಮಂಟಪದಲ್ಲಿ ವಧುವಿನ ಹೆಗಲ ಮೇಲೆ ಕೈ ಹಾಕಿ ನಗುತ್ತಾ ಕುಳಿತಿದ್ದ ವರನಿಗೆ ಬೈದ ಪುರೋಹಿತರು
ಮಂಟಪದಲ್ಲಿ ವಧುವಿನ ಹೆಗಲ ಮೇಲೆ ಕೈ ಹಾಕಿ ನಗುತ್ತಾ ಕುಳಿತಿದ್ದ ವರ
Follow us
TV9 Web
| Updated By: shruti hegde

Updated on:Jun 23, 2021 | 4:20 PM

ಮೊದಲೆಲ್ಲಾ ಮದುವೆ ಅಂದ್ರೆ ಗುರುಹಿರಿಯರು ತಮ್ಮ ಮಗಳನ್ನು ಧಾರೆಯೆರೆದು ಕೊಡುವ ಸಂಪ್ರದಾಯ. ಬಹಳ ಶಿಸ್ತು ಬದ್ಧವಾಗಿ ನಡೆಯುವ ಆಚರಣೆ. ಗುರುಹಿರಿಯರು ಹೇಳಿದಂತೆ ಗೌರವಯುತವಾಗಿ ನಡೆಸಿಕೊಂಡು ಬರುವ ಆಚಣೆಯೂ ಹೌದು. ಆದರೆ ಈಗೆಲ್ಲಾ ಕಾಲಮಾನ ಬದಲಾಗಿದೆ. ವರ-ವಧು ಮೊದಲೇ ಒಬ್ಬರನ್ನೊಬ್ಬರು ನೋಡಿರುತ್ತಾರೆ. ಸಲುಗೆಯೂ ಬೆಳೆದಿರುತ್ತದೆ. ಹೀಗಿರುವಾಗ ವಿವಾಹದ ಸಮಯದಲ್ಲಿ ನಗುತ್ತಾ ವರನು ವಧುವಿನ ಹೆಗಲ ಮೇಲೆ ಕೈ ಹಾಕುತ್ತಾನೆ. ಈ ಸಂದರ್ಭದಲ್ಲಿ ಪುರೋಹಿತರು ಬೈದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿವಾಹ, ಸಾಂಪ್ರದಾಯ ಬದ್ಧ ಕಾರ್ಯ. ಬಹಳ ಶಿಸ್ತಿನಿಂದ ನಡೆಯುವ ಆಚರಣೆ. ನಮ್ಮ ಅಜ್ಜ-ಅಜ್ಜಿಯರ ಕಾಲದಲ್ಲಿ ವಧು ಮೊದಲ ಬಾರಿಗೆ ಮಂಟಪದಲ್ಲೇ ವರನ್ನು ನೋಡಿದ ಕಥೆಗಳನ್ನೆಲ್ಲಾ ಕೇಳಿ ಆಶ್ಚರ್ಯಪಟ್ಟ ಕ್ಷಣಗಳೂ ಇವೆ. ಆದರೆ ಈಗಿನ ಕಾಲದ ಯುವಕ ಹಸೆಮಣೆಯಲ್ಲಿ ತಮಾಷೆಯಾಗಿ ವರ್ತಿಸಿದ್ದನ್ನು ಕಂಡ ಪುರೋಹಿತರು ಆತನಿಗೆ ಗದರಿದ್ದಾರೆ. ಪಕ್ಕದಲ್ಲಿ ಕೂತ ವಧುವಿನ ಹೆಗಲ ಮೇಲೆ ಕೈ ಹಾಕಿ ಹಾಸ್ಯ ಮಾಡುತ್ತಿದ್ದುದನ್ನು ನೋಡಿದ ಪುರೋಹಿತರು ಕೈ ಕೆಳಗಿಳಿಸುವಂತೆ ಹೇಳಿದ್ದಾರೆ.

ಮಧುಮಗಳ ಕಡೆಯ ನೆಂಟರೆಲ್ಲ ನವಜೋಡಿಗಳಾಗಲಿರುವ ವಧು ಮತ್ತು ವರನ ಪಕ್ಕದಲ್ಲಿ ಕುಳಿತಿದ್ದಾರೆ. ಭಾರತೀಯ ಸಂಪ್ರದಾಯದ ಪ್ರಕಾರ  ಮಂಟಪದಲ್ಲಿ ಹುಡುಗಾಟದ ಸಂಗತಿಗಳಿಗೆಲ್ಲಾ ಆಸ್ಪದವಿಲ್ಲ. ಹೀಗಿರುವಾಗ ಪುರೋಹಿತರು ವರನಿಗೆ ಬೈದಿರುವುದು ಸುತ್ತಲು ಕುಳಿತಿರುವವರಿಗೆ ತಮಾಷೆ ಅನಿಸಿದೆ.

ವಿಡಿಯೋದಲ್ಲಿ ನೀವು ಗಮನಿಸುವಂತೆ, ಮದುವೆ ಸಮಾರಂಭ ನಡೆಯುತ್ತಿರುತ್ತದೆ. ಮದುವೆ ಮಂಟಪದಲ್ಲಿ ವಧು ಮತ್ತು ವರ ಕುಳಿತಿದ್ದಾರೆ. ವರ ನಗುತ್ತಾ ವಧುವಿನ ಹೆಗಲ ಮೇಲೆ ಕೈ ಹಾಕಿದ್ದಾನೆ. ಇದ್ನು ನೋಡಿದ ಪುರೀಹಿತರು ಆತನಿಗೆ ಕೈ ಕೆಳಗಿಳಿಸುವಂತೆ ಗದರಿದ್ದಾರೆ. ವರನು ತನ್ನ ಕೈಗಳನ್ನು ಹಿಂದಕ್ಕೆ ತೆಗೆದುಕೊಂಡು ಮದುವೆ ಸಮಾರಂಭ ಮುಂದುವರೆಯುವಂತೆ ನಗುತ್ತಾನೆ.

ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ 14 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ಹಲವಾರು ಕಾಮೆಂಟ್ಸ್​ಗಳು ಕೂಡಾ ಲಭಿಸಿವೆ. ಓರ್ವರು ‘ಅದ್ಭುತ ಪುರೋಹಿತರೇ..’ ಎಂದು ಪ್ರತಿಕ್ರಿಯೆ ನೀಡಿದರೆ ಇನ್ನು ಕೆಲವರು ನಗುಮುಖದ ಇಮೊಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

ವರದಕ್ಷಿಣೆ ಕಿರುಕುಳ; ಮದುವೆಯಾದ ಮೂರೇ ತಿಂಗಳಿಗೆ ಯುವತಿ ಕೊಲೆ, ಪರಾರಿಯಾದ ಕುಟುಂಬ

Viral Video: ವರ ಪಕ್ಕದಲ್ಲಿರುವಾಗಲೇ ಸ್ನೇಹಿತ ಕೊಟ್ಟ ಗಿಫ್ಟ್​ ನೋಡಿ ವಧು ಕಂಗಾಲು! ಏನದು ಕುತೂಹಲ ಕೆರಳಿಸಿದ ಉಡುಗೊರೆ?

Published On - 4:14 pm, Wed, 23 June 21

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ