Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರದಕ್ಷಿಣೆ ಕಿರುಕುಳ; ಮದುವೆಯಾದ ಮೂರೇ ತಿಂಗಳಿಗೆ ಯುವತಿ ಕೊಲೆ, ಪರಾರಿಯಾದ ಕುಟುಂಬ

ಯಾದಗಿರಿ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಭೀಮರಾಯನಗುಡಿ ಗ್ರಾಮದಲ್ಲಿ ನಡೆದಿದೆ. ಜರೀನಾ ಬೇಗಂ(22) ಮೃತ ಮಹಿಳೆ. ಮೂರು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ಮದುವೆಯಾಗಿದ್ದ ಯುವತಿ ಕೊಲೆಯಾಗಿದ್ದಾಳೆ. ಕೈಗೆ ಹಾಕಿದ್ದ ಗೋರಂಟಿ ಕೂಡ ಇನ್ನು ಮಾಸಿಲ್ಲ ಆದ್ರೆ ಯುವತಿ ಹೆಣವಾಗಿದ್ದಾಳೆ. ಮದುವೆಗೆ ಖರ್ಚು ಮಾಡಿದ್ದ ಸಾಲ ಕೂಡ ಇನ್ನೂ ತೀರಿಲ್ಲ ಆದ್ರೆ ಕುಟುಂಬಸ್ಥರು ಯುವತಿಯ ಶವ ಪಡೆಯಲು ಆಸ್ಪತ್ರೆ ಮುಂದೆ ನಿಲ್ಲುವಂತ ಪರಿಸ್ಥಿತಿ ಬಂದು ನಿಂತಿದೆ. ಕೊಲೆ ಮಾಡಿದ […]

ವರದಕ್ಷಿಣೆ ಕಿರುಕುಳ; ಮದುವೆಯಾದ ಮೂರೇ ತಿಂಗಳಿಗೆ ಯುವತಿ ಕೊಲೆ, ಪರಾರಿಯಾದ ಕುಟುಂಬ
ಮದುವೆಯಾದ ಮೂರೇ ತಿಂಗಳಿಗೆ ಯುವತಿ ಕೊಲೆ
Follow us
TV9 Web
| Updated By: ಆಯೇಷಾ ಬಾನು

Updated on:Jun 23, 2021 | 3:47 PM

ಯಾದಗಿರಿ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಭೀಮರಾಯನಗುಡಿ ಗ್ರಾಮದಲ್ಲಿ ನಡೆದಿದೆ. ಜರೀನಾ ಬೇಗಂ(22) ಮೃತ ಮಹಿಳೆ. ಮೂರು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ಮದುವೆಯಾಗಿದ್ದ ಯುವತಿ ಕೊಲೆಯಾಗಿದ್ದಾಳೆ. ಕೈಗೆ ಹಾಕಿದ್ದ ಗೋರಂಟಿ ಕೂಡ ಇನ್ನು ಮಾಸಿಲ್ಲ ಆದ್ರೆ ಯುವತಿ ಹೆಣವಾಗಿದ್ದಾಳೆ. ಮದುವೆಗೆ ಖರ್ಚು ಮಾಡಿದ್ದ ಸಾಲ ಕೂಡ ಇನ್ನೂ ತೀರಿಲ್ಲ ಆದ್ರೆ ಕುಟುಂಬಸ್ಥರು ಯುವತಿಯ ಶವ ಪಡೆಯಲು ಆಸ್ಪತ್ರೆ ಮುಂದೆ ನಿಲ್ಲುವಂತ ಪರಿಸ್ಥಿತಿ ಬಂದು ನಿಂತಿದೆ. ಕೊಲೆ ಮಾಡಿದ ಪಾಪಿ ಗಂಡ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ.

ವರದಕ್ಷಿಣೆ ತಂದಿಲ್ಲ ಅಂತ 22 ವರ್ಷದ ಜರೀನಾ ಬೇಗಂ ಎಂಬ ಮಹಿಳೆಯನ್ನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಜರೀನಾ ಬೇಗಂ ಗಂಡ ಚಾಂದ್ ಪಟೇಲ್ ಹಾಗೂ ಕುಟುಂಬಸ್ಥರು ಸೇರಿ ವರದಕ್ಷಿಣೆ ತಂದಿಲ್ಲ ಎನ್ನುವ ಕಾರಣಕ್ಕೆ ಜರೀನಾ ಬೇಗಂ ಜೊತೆ ಜಗಳ ಮಾಡಿದ್ದಾರೆ. ಐದು ಲಕ್ಷ ಹಣ ತೆಗೆದುಕೊಂಡು ಬಾ ಅಂತ ಕಳೆದ ಕೆಲ ದಿನಗಳಿಂದ ಒತ್ತಾಯ ಮಾಡ್ತಾಯಿದ್ದರಂತೆ. ಆದ್ರೆ ನಿನ್ನೆ ಶಹಾಪುರ ತಾಲೂಕಿನ ಭೀಮರಾಯನಗುಡಿ ಬಳಿಯ ಚಾಂದ ಪಟೇಲ್ ಮನೆಯಲ್ಲಿ ವರದಕ್ಷಿಣೆ ತಂದಿಲ್ಲ ಎನ್ನುವ ಕಾರಣಕ್ಕೆ ಜರೀನಾ ಜೊತೆ ಗಂಡ ಮತ್ತು ಮನೆಯವರು ಜಗಳವಾಡಿದ್ದಾರೆ. ಕೊನೆಗೆ ನಿನ್ನೆ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಯಾರಿಗೂ ಸಂಶಯ ಬರಬಾರದೆಂದು ಕೊಲೆ ಮಾಡಿದ ಬಳಿಕ ನೇರವಾಗಿ ಆಂಬ್ಯುಲೆನ್ಸ್ ಮೂಲಕ ಶಹಾಪುರ ನಗರದ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ.

ವರದಕ್ಷಿಣೆ ನೀಡಿದ್ದರು ಹಣದ ದಾಹ ತೀರಲಿಲ್ಲ

ydr murder

ಮೃತ ಜರೀನಾ ಬೇಗಂ ಮತ್ತು ಆರೋಪಿ ಚಾಂದ್ ಪಟೇಲ್

ಅಲ್ಲಿ ವೈದ್ಯರು ಆಸ್ಪತ್ರೆಗೆ ಸೇರಿಸದ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿಯೇ ಆಂಬ್ಯುಲೆನ್ಸ್ನಲ್ಲಿ ಜರಿನಾ ಮೃತದೇಹ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಜರಿನಾ ಸಹೋದರ ಬಂದು ಪ್ರಶ್ನೆ ಮಾಡಿದ್ದಾನೆ. ಇದೆ ಕಾರಣಕ್ಕೆ ಜರಿನಾ ಸಹೋದರ ಹಾಗೂ ಚಾಂದ್ ಪಟೇಲ್ ಕುಟುಂಬಸ್ಥರ ಮದ್ಯ ಜಗಳ ಕೂಡ ಆಗಿದೆ. ಆದ್ರೆ ಜಳಗ ಆಗ್ತಾಯಿದ್ದ ಹಾಗೆ ಚಾಂದ್ ಪಟೇಲ್ ಹಾಗೂ ಕುಟುಂಬಸ್ಥರು ಆಂಬ್ಯುಲೆನ್ಸ್ನಲ್ಲಿ ಮೃತದೇಹ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಜರಿನಾ ಸಹೋದರ ಆಸೀಫ್ ಮೃತದೇಹವನ್ನ ತಾಲೂಕು ಆಸ್ಪತ್ರೆಗೆ ತಂದಿದ್ದಾನೆ.

ಜರಿನಾ ಕುಟುಂಬಸ್ಥರು ಚಾಂದ್ ಪಟೇಲ್ ಒಳ್ಳೇ ಹುಡುಗ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ ಅಂತ ಕಳೆದ ಮೂರು ತಿಂಗಳ ಹಿಂದೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಜರಿನಾ ಕುಟುಂಬಸ್ಥರು ಭೀಮರಾಯನಗುಡಿ ನಿವಾಸಿ ಚಾಂದ್ ಪಟೇಲ್ಗೆ ಕೊಟ್ಟು ಮದುವೆ ಮಾಡಿದ್ರು. ಮದುವೆ ಸಂದರ್ಭದಲ್ಲಿ ಚಾಂದ್ ಪಟೇಲ್ ಕೇಳಿದಷ್ಟು ಚಿನ್ನ ಹಾಗೂ ಹಣ ಜೊತೆ ಬೈಕ್ ಸಹ ಕೊಟ್ಟು 10 ಲಕ್ಷ ಹಣ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿದ್ದರು. ಆದ್ರೆ ಚಾಂದ್ ಪಟೇಲ್ ಅಸಲಿ ಮುಖ ಮದುವೆಯಾದ ಮಾರನೇ ದಿನವೇ ಬಯಲಾಗಿದೆ.

ಇಡೀ ಕುಟುಂಬಸ್ಥರು ಸೇರಿ ಮದುವೆಯಾದ ಮಾರನೇ ದಿನದಿಂದ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಸಾಕಷ್ಟು ಬಾರಿ ಜರಿನಾ ತನ್ನ ತವರು ಮನೆಗೆ ಫೋನ್ ಮಾಡಿ ಸಹ ಕಿರುಕುಳ ಬಗ್ಗೆ ತಿಳಿಸಿದ್ದಾಳೆ. ಆರಂಭದಲ್ಲಿ ಜರಿನಾ ಕುಟುಂಬಸ್ಥರು 1 ಲಕ್ಷ ವರದಕ್ಷಿಣೆ ಹಣವನ್ನ ತಂದು ಕೊಟ್ಟಿದ್ದಾರೆ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಚಾಂದ್ ಮತ್ತೆ ಮತ್ತೆ ಹಣಕ್ಕಾಗಿ ಕಿರುಕುಳ ನೀಡ್ತಾಯಿದ್ದ ಅಂತ ಜರಿನಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇನ್ನು ಚಾಂದ್ ಪಟೇಲ್ ಹಣಕ್ಕಾಗಿ ಪತ್ನಿಯನ್ನ ಕಿರುಕುಳ ನೀಡುವುದ್ದಕ್ಕೆ ಬಲವಾದ ಕಾರಣವಿದೆ. ಯಾಕೆಂದ್ರೆ ಮದುವೆಯಾದ್ರು ಚಾಂದ್ ಪರ ಸ್ತ್ರೀ ಸಾಹವಾಸ ಮಾಡಿದ್ದ ಅಂತ ಆರೋಪಿಸಲಾಗುತ್ತಿದೆ. ಪರಸ್ತ್ರೀಯ ಸಾಹವಾಸ ಮಾಡಿದ್ದಕ್ಕೆ ಮದುವೆಯಾದ ಮಾರನೇ ದಿನದಿಂದ ಪತ್ನಿ ಬೇಡವಾಗಿದ್ದಾಳೆ. ಇದೆ ಕಾರಣದಿಂದ ಸುಖಾಸುಮ್ಮನೆ ಹಣಕ್ಕಾಗಿ ಪೀಡಿಸುತ್ತಿದ್ದ ಅಂತ ಹೇಳಲಾಗುತ್ತಿದೆ. ಆದ್ರೆ ಕೊನೆಗೆ ಹಣ ತಂದುಕೊಟ್ಟಿಲ್ಲ ಎನ್ನುವ ಕಾರಣಕ್ಕೆ ತನ್ನನ್ನ ನಂಬಿ ಮದುವೆಯಾದ ಯುವತಿಯನ್ನ ಮೂರೇ ತಿಂಗಳಲ್ಲಿ ಕೊಲೆ ಮಾಡಿ ಕುಟುಂಬ ಸಮೇತ ಪರಾರಿಯಾಗಿದ್ದಾರೆ.

ಇದನ್ನೂ ಓದಿ: KSP Recruitment 2021: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 4000 ಸಿಪಿಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Published On - 3:43 pm, Wed, 23 June 21