
ಇಂಡೋನೇಷ್ಯಾ: 210 ಕೆಜಿ ತೂಕವನ್ನು ಎತ್ತಲು ಹೋಗಿ ಕುತ್ತಿಗೆ ಮುರಿದು(Neck Broke) ಸಾವನ್ನಪ್ಪಿರುವ ಘಟನೆ ಬಾಲಿ ಜಿಮ್ನಲ್ಲಿ ನಡೆದಿದೆ. ಜಿಮ್ ತರಬೇತುದಾರರಾಗಿ(Fitness Trainer) ಕೆಲಸ ಮಾಡುತ್ತಿದ್ದ ಜಸ್ಟಿನ್ ವಿಕ್ಕಿ(33) , ಇತ್ತೀಚೆಗಷ್ಟೇ 210 ಕೆಜಿ ತೂಕದ ಬಾರ್ಬೆಲ್ ಎತ್ತುವ ಸಾಹಸಕ್ಕೆ ಇಳಿದಿದ್ದಾರೆ. ಆದರೆ ಈ ಸಾಹಸ ಅವರ ಜೀವವನ್ನೇ ತೆಗೆದಿದೆ. ಈ ಘಟನೆ ಜುಲೈ 15 ರಂದು ನಡೆದಿದೆ ಎಂದು ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ. ವಿಡಿಯೋ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಟ್ವಿಟರ್ ಬಳಕೆದಾರರಾದ ಮಹೇಶ್ ನಾಯರ್ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋ ನಿಮ್ಮ ಎದೆ ನಡುಕ ಹುಟ್ಟಿಸುವುದಂತೂ ಖಂಡಿತಾ.
ಇದನ್ನೂ ಓದಿ: Viral News: ವಾರಪೂರ್ತಿ ಕಣ್ಣೀರು ಸುರಿಸಿ ಗಿನ್ನಿಸ್ ದಾಖಲೆ ಮಾಡಲು ಹೋಗಿ ಕುರುಡನಾದ ಯುವಕ
ವಿಡಿಯೋದಲ್ಲಿ ಜಸ್ಟಿನ್ ವಿಕ್ಕಿ ತನ್ನ ಭುಜದ ಮೇಲೆ ಬಾರ್ಬೆಲ್ ಎತ್ತುತ್ತಿರುವುದನ್ನು ಕಾಣಬಹುದು. ಜೊತೆಗೆ ಸಹಾಯಕ್ಕೆ ಇನ್ನೊಬ್ಬರು ಜೊತೆಗಿರುವುದನ್ನು ಕಾಣಬಹುದು. ಭಾರ ಎತ್ತಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಆದರೆ ಸಾಧ್ಯವಾಗದೇ ಬಾರ್ಬೆಲ್ ಅವನ ಕುತ್ತಿಗೆಯ ಹಿಂಭಾಗಕ್ಕೆ ನೇರವಾಗಿ ಬಿದ್ದಿರುವುದನ್ನು ಕಾಣಬಹುದು. ಅಪಘಾತದ ಪರಿಣಾಮವಾಗಿ ಆತನ ಕುತ್ತಿಗೆ ಮುರಿದು ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಪರ್ಕ ಹೊಂದಿದ ಪ್ರಮುಖ ನರಗಳ ಹಾನಿಯುಂಟಾಗಿ ತುರ್ತು ಶಸ್ತ್ರ ಚಿಕಿತ್ಸೆ ನಡೆಸಿದರೂ ಕೆಲ ಹೊತ್ತಿನಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ದಿ ಡೈಲಿ ಮೇಲ್ ವರದಿ ಮಾಡಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:48 pm, Sun, 23 July 23