AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 4 ವರ್ಷದ ಈ ಪುಟ್ಟ ಕಂದಮ್ಮನ ಹಾಡಿಗೆ ಎಲ್ಲರೂ ತಲೆದೂಗಲೇಬೇಕು! ನೀವು ಕೇಳಿ, ಆನಂದಿಸಿ

4 ವರ್ಷದ ಶಾಲ್ಮಲೀ ಹಾಡನ್ನು ಕೇಳಿಸಿಕೊಂಡಲ್ಲಿ ನೀವು ಅವಳ ಫ್ಯಾನ್ ಆಗುತ್ತೀರಿ, ಇದರಲ್ಲಿ ಸಂಶಯವೇ ಇಲ್ಲ. ಈಗ ಆಕೆಯ ಇನ್ನೊಂದು ವಿಡಿಯೋ ವೈರಲ್ ಆಗಿದ್ದು ಹೇಗಿದೆ ನೀವೇ ನೋಡಿ.

Viral Video: 4 ವರ್ಷದ ಈ ಪುಟ್ಟ ಕಂದಮ್ಮನ ಹಾಡಿಗೆ ಎಲ್ಲರೂ ತಲೆದೂಗಲೇಬೇಕು! ನೀವು ಕೇಳಿ, ಆನಂದಿಸಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Jul 22, 2023 | 1:41 PM

ಶಾಲ್ಮಲೀ, ಎನ್ನುವ ಹೆಸರು ಈಗಂತೂ ಚಿರಪರಿಚಿತ. ಏಕೆಂದರೆ ಆಕೆಯ ಗಾಯನವೇ ಅಂತದ್ದು. ಮುಗ್ದ ನಗು, ಹಾವ- ಭಾವ ಎಲ್ಲವೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ನಾನು ಯಾರ ಬಗೆಗೆ ಮಾತನಾಡುತ್ತಿದ್ದೇನೆ ಎಂಬುದು ನಿಮಗೆ ತಿಳಿದಿರಬಹುದು. ಈಗಾಗಲೇ “ಹತ್ತೂರ ಒಡೆಯ “, ದಾಸಾಮೃತಸಾರ ಎನ್ನುವ ಹಾಡಿನ ಮೂಲಕ ಮತ್ತು ಪ್ರಖ್ಯಾತ ಗಾಯಕ ಮಹೇಶ್ ಕಾಳೆ ಅವರ ರಿಲ್ಸ್ ಗೆ ರಿಮಿಕ್ಸ್ ಮಾಡುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಳು. ಜೊತೆಗೆ ಕೀಬೋರ್ಡ್ ವಾದನದಿಂದ ಜನರ ಪ್ರೀತಿಗೆ ಪಾತ್ರಳಾಗಿದ್ದ ಈ ಪುಟ್ಟ ಹುಡುಗಿ ಈಗ ಅಮ್ಮನಿಗೆ ಸಂಗೀತ ಹೇಳಿಕೊಡುತ್ತಿರುವ ವಿಡಿಯೋ ಒಂದು ವೈರೆಲ್ ಆಗಿದ್ದು ಆಕೆಯ ಪ್ರತಿಭೆಗೆ ಜನ ಭೇಷ್ ಅಂದಿದ್ದಾರೆ.

ಈಗಾಗಲೇ ಈ ವಿಡಿಯೋ ವನ್ನು ಸಾವಿರಾರು ಜನರು ವೀಕ್ಷಣೆ ಮಾಡಿದ್ದು ಆಕೆಯ ಸಂಗೀತ ಜ್ಞಾನಕ್ಕೆ ದೊಡ್ಡ ದೊಡ್ಡ ಸಂಗೀತಗಾರರು ಕೆಮೆಂಟ್ ಮಾಡಿ ಆಕೆಗೆ ಮೆಚ್ಚುಗೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಶಾಲ್ಮಲೀ ತಾನು ಹಾಡುತ್ತಾ ತಾಯಿಗೂ ಹೇಳಿಕೊಡುತ್ತಿದ್ದಾಳೆ. ಯಾವ ರೀತಿಯಲ್ಲಿ ಹಮ್ಮಿಂಗ್ ಕೊಟ್ಟು ಹೇಳಬೇಕು ಎನ್ನುವುದನ್ನು ತಾನು ಹಾಡುವ ಮೂಲಕ ತಿಳಿಸುತ್ತಿದ್ದಾಳೆ. ಅಮ್ಮ ತಪ್ಪು ಮಾಡಿದ್ದನ್ನು ಸರಿಪಡಿಸಿ, ಈ ರೀತಿ ಹಾಡು ಎಂದು ತನ್ನ ಮಧುರ ಕಂಠದಿಂದ ಹಾಡಿ ತೋರಿಸುತ್ತಿರುವ ವಿಡಿಯೋ ಈಗಾಗಲೇ ಜನರ ಮನ ಗೆದ್ದಿದೆ.

ಇದನ್ನೂ ಓದಿ: ರಜೆಯ ಮಜೆ; ಮಕ್ಕಳೊಂದಿಗೆ ಬೋಟಿಂಗ್ ಹೊರಟ ನಾಯಿ

ಇನ್ನು ಇದನ್ನು ನೋಡಿದ ನೆಟ್ಟಿಗರು ಪುಟ್ಟ ಶಾರದೆ ಎಂದು ಆಕೆಯನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಆಕೆಯ ವಯಸ್ಸಿಗಿರುವ ಸ್ಪಷ್ಟತೆ, ಸ್ವರ ಸ್ಥಾನಗಳ ಬಗೆಗಿನ ಆಕೆಯ ಪಾಂಡಿತ್ಯವನ್ನು ಕೊಂಡಾಡಿದ್ದಾರೆ. ಮತ್ತೆ ಕೆಲವರು ಜೂನಿಯರ್ ಸೂರ್ಯಗಾಯತ್ರಿ ಸಿಕ್ಕಿದ್ದಾಳೆ ಎಂದು ತಮ್ಮ ಸಂತೋಷ ವ್ಯಕ್ತ ಪಡಿಸಿದ್ದಾರೆ. ಕೆಲವರು ಆಕೆಯ ವಿಡಿಯೋಗಳು ಮತ್ತಷ್ಟು ಬರಲಿ ಎಂದು ಆಕೆಯ ತಂದೆ ತಾಯಿಯಲ್ಲಿ ಕೇಳಿಕೊಂಡಿದ್ದಾರೆ. ಇನ್ನು ನೂರಾರು ಜನ ಅವಳಿಗೆ ಆಶೀರ್ವಾದ ಮಾಡುವ ಮೂಲಕ ಹರಸಿದ್ದಾರೆ. ಏನೇ ಆಗಲಿ ಆಕೆಯ ಹಾಡು ಎಲ್ಲರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:24 am, Sat, 22 July 23