ವಿಮಾನದಲ್ಲಿ ತಯಾರಾಯ್ತು ರೆಸ್ಟೋರೆಂಟ್; ಗುಜರಾತ್​ನ ಫ್ಲೈಟ್ ಥೀಮ್ ರೆಸ್ಟೋರೆಂಟ್ ವಿಶೇಷತೆ ಏನು ಗೊತ್ತಾ?

| Updated By: shruti hegde

Updated on: Oct 28, 2021 | 11:39 AM

ರೆಸ್ಟೋರೆಂಟ್​ನೊಳಕ್ಕೆ ಪ್ರವೇಶಿಸಿದಾಗ ವಿಮಾನದಲ್ಲಿ ಹತ್ತಿರುವ ಅನುಭವ ನೀಡುತ್ತದೆ. ವಿಮಾನದಲ್ಲಿ ಕುಳಿತು ನಿಮಗೆ ಬೇಕಾದ ತಿಂಡಿಯನ್ನು ಸವಿಯಬಹುದು.

ವಿಮಾನದಲ್ಲಿ ತಯಾರಾಯ್ತು ರೆಸ್ಟೋರೆಂಟ್; ಗುಜರಾತ್​ನ ಫ್ಲೈಟ್ ಥೀಮ್ ರೆಸ್ಟೋರೆಂಟ್ ವಿಶೇಷತೆ ಏನು ಗೊತ್ತಾ?
ವಿಮಾನದಲ್ಲಿ ತಯಾರಾದ ರೆಸ್ಟೋರೆಂಟ್​
Follow us on

ಹೊಸದಾದ, ವಿಭಿನ್ನವಾದ ರೆಸ್ಟೋರೆಂಟ್​ಗೆ ಭೇಟಿ ನೀಡಬೇಕು ಎಂದು ಯೋಚಿಸುತ್ತಿದ್ದರೆ ಗುಜರಾತ್​ಗೆ ನೀವೊಮ್ಮೆ ಭೇಟಿ ನೀಡಬಹುದು. ಗ್ರಾಹಕರು ಹಾರಾಟ ಮಾಡದೇ ವಿಮಾನದಲ್ಲಿ ಕುಳಿತು ವಿವಿಧ ಬಗೆಯ ತಿಂಡಿಗಳನ್ನು ಸವಿಯಬಹುದು. ಈ ರೆಸ್ಟೋರೆಂಟ್​ನ ವಿಶೇಷವೆಂದರೆ ವಿಮಾನದಲ್ಲಿಯೇ ರೆಸ್ಟೋರೆಂಟ್​ ತಯಾರಿಸಲಾಗಿದೆ. ಫ್ಲೈಟ್ ಥೀಮ್​ನೊಂದಿಗೆ ತಯಾರಾದ ರೆಸ್ಟೋರೆಂಟ್ ಗುಜರಾತ್​ನ ವಡೋದರಾ ನಗರದ ಹೆದ್ದಾರಿಯ ಮುಖ್ಯ ರಸ್ಯೆಯ ಬಳಿಯಿದೆ.

ರೆಸ್ಟೋರೆಂಟ್ ನಿಜವಾದ ವಿಮಾನದಿಂದ ಮಾಡಲ್ಪಟ್ಟಿದೆ. ಒಂದೇ ಬಾರಿಗೆ ಸುಮಾರು 106 ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ವೇಟರ್​ಅನ್ನು ಕರೆತರಲು ವಿಮಾನದಂತೆಯೇ ಸೆನ್ಸಾರ್​ಗಳನ್ನು ಅಳವಡಿಸಲಾಗಿದೆ. ಸಿಬ್ಬಂದಿ ಕೆಲಸ ಮಾಡುವಾಗ ಸಮವಸ್ತ್ರವನ್ನು ಧರಿಸಿರುತ್ತಾರೆ. ನಿಜವಾದ ವಿಮಾನ ಹತ್ತುವ ರೀತಿಯಲ್ಲಿಯೇ ಈ ರೆಸ್ಟೋರೆಂಟ್ ಪ್ರವೇಶ ಮಾಡಬಹುದು. ವಿಮಾನ ಟಿಕೆಟ್​ನಂತೆ ಬೋರ್ಡಿಂಗ್ ಪಾಸ್ ಪಡೆದು ವಿಮಾನ ರೆಸ್ಟೋರೆಂಟ್​ಗೆ ಪ್ರವೇಶ ಪಡೆಯಬಹುದಾಗಿದೆ.

ಈ ರೆಸ್ಟೋರೆಂಟ್ ನಿರ್ಮಿಸಲಲು ಏರ್​ಬಸ್​ 320ಅನ್ನು ಬೆಂಗಳೂರಿನ ಕಂಪನಿಯಿಂದ ಖರೀದಿಸಲಾಗಿದೆ. ವಿಮಾನದ ಪ್ರತಿಯೊಂದು ಭಾಗವೂ ವಡೋದರಾಕ್ಕೆ ತಂದು ನಿರ್ಮಿಸಲಾಗಿದೆ. ವಿಮಾನದ ಒಳಗೆ ರೆಸ್ಟೋರೆಂಟ್​ನಂತೆ ಅನುಭವ ನೀಡುವಂತೆ ತಯಾರು ಮಾಡಲಾಗಿದೆ ಎಂದು ರೆಸ್ಟೋರೆಂಟ್ ಮಾಲೀಕ, ವ್ಯವಸ್ಥಾಪಕ ನಿರ್ದೇಶಕ ಮುಖಿ ಅವರು ಹೇಳಿದ್ದಾರೆ.

ರೆಸ್ಟೋರೆಂಟ್​ನೊಳಕ್ಕೆ ಪ್ರವೇಶಿಸಿದಾಗ ವಿಮಾನದಲ್ಲಿ ಹತ್ತಿರುವ ಅನುಭವ ನೀಡುತ್ತದೆ. ವಿಮಾನದಲ್ಲಿ ಕುಳಿತು ನಿಮಗೆ ಬೇಕಾದ ತಿಂಡಿಯನ್ನು ಸವಿಯಬಹುದು. ಪಂಜಾಬಿ, ಚೈನೀಸ್, ಇಟಾಲಿಯನ್, ಮೆಕ್ಸಿಕನ್​ ಮತ್ತು ಥಾಯ್ ಸೇರಿದಂತೆ ವಿವಿಧ ರೀತಿಯ ಫುಡ್​ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಎಂದು ರೆಸ್ಟೋರೆಂಟ್ ಮಾಲೀಕರು ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ರೆಸ್ಟೋರೆಂಟ್​ಗೆ ಭೇಟಿ ನೀಡುವುದನ್ನು ತುಂಬಾ ಇಷ್ಟಪಟ್ಟಿದ್ದೇನೆ. ವಿಮಾನದೊಳಕ್ಕೆ ಪ್ರವೇಶಿಸಿದಂತೆಯೇ ಅನುಭವ ಕೊಡುತ್ತದೆ. ಇದು ನಿಜವಾಗಿಯೂ ವಿಶಿಷ್ಟ ಪರಿಕಲ್ಪನೆ ಎಂದು ಗ್ರಾಹಕ ಎಸ್. ಅಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral News: ಫ್ಲಿಪ್​ ಕಾರ್ಟ್​ನಲ್ಲಿ ಇಯರ್ ಫೋನ್ ಆರ್ಡರ್ ಮಾಡಿದ್ದ ನಟ; ಸಿಕ್ಕಿದ್ದು ಮಾತ್ರ ಖಾಲಿ ಬಾಕ್ಸ್!

Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ