ಹೊಸ ಹೊಸ ರೀತಿಯ ಆಹಾರಗಳನ್ನು ಟೇಸ್ಟ್ ಮಾಡುವ ಮೂಲಕ ಈಗಾಗಲೆ ಹಲವು ಫುಡ್ ಬ್ಲಾಗರ್ಗಳ ವೀಡಿಯೋ ಶಅಂಅಝೀಖ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ಮಿರಿಂಡಾ ಗೋಲಗಪ್ಪಾ, ಸೇಬುಹಣ್ಣಿನ ಪ್ರೈ ಸೇರಿದಂತೆ ಹಲವು ರೀತಿಯ ರುಚಿಗಳನ್ನು ನೆಟ್ಟಿಗರು ನೋಡಿದ್ದಾರೆ. ಕೆಲವರು ಕೆಲವು ವೀಡಿಯೋಗಳನ್ನು ಮೆಚ್ಚಿಕೊಂಡರೆ ಇನ್ನೂ ಕೆಲವರು ಚಿತ್ರ ವಿಚಿತ್ರ ರೀತಿಯ ಮಿಶ್ರಣದ ಆಹಾರವನ್ನು ನೋಡಿ ಮುಖಮುರಿದಿದ್ದಾರೆ. ಈಗ ಮತ್ತೊಬ್ಬ ಫುಡ್ ಬ್ಲಾಗರ್ ಸಮೋಸಕ್ಕೆ ಜಾಮೂನ್ ಸೇರಿಸಿಕೊಂಡು ತಿಂದಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಮೊದಲು ಒಂದು ಜಾಮೂನನ್ನು ಹಿಡಿದು, ಅದನ್ನು ಸಮೋಸಾ ಹಿಟ್ಟಿನೊಳಗೆ ಇಡುತ್ತಾರೆ. ನಂತರ ಅದನ್ನು ಕಾದ ಎಣ್ಣೆಯೊಳಗೆ ಹಾಕಿ ಬೇಯಿಸುತ್ತಾರೆ. ಫುಡ್ ಬ್ಲಾಗರ್ ನಂತರ ಅದನ್ನು ಎಣ್ಣೆಯಿಂದ ತೆಗೆದು ಬಾಯಿಗೆ ಹಾಕಿ ತಿನ್ನುತ್ತಾನೆ. ನಂತರ ರುಚಿ ಕೆಟ್ಟದಾಗಿದೆ ಎನ್ನುವ ರೀತಿ ಮುಖದ ಭಾವನೆಯನ್ನು ತೋರಿಸುತ್ತಾನೆ.
ವೀಡಿಯೋದಲ್ಲಿರುವ ಫುಡ್ ಬ್ಲಾಗರ್ಅನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ 2 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದಿದೆ. ಜಾಮೂನ್ ಸಮೋಸಾ ತಿಂದ ಫುಡ್ ಬ್ಲಾಗರ್ ನ ಮುಖ ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಂದಿಗೂ ಈ ಕಾಂಬಿನೇಷನ್ನ ಆಹಾರವನ್ನು ಪ್ರಯತ್ನಿಸಬೇಡಿ. ಫುಡ್ ಬ್ಲಾಗರ್ಮುಖವೇ ಟೇಸ್ಟ್ ಕೆಟ್ಟದಾಗಿದೆ ಎನ್ನುವ ರೀತಿ ಇದೆ ಎಂದಿದ್ದಾರೆ.
ಇದನ್ನೂ ಓದಿ:
Viral Video: ಸಾಂತಾಕ್ಲಾಸ್ ಟೋಪಿ ಧರಿಸಿ ತಿರುಗಾಡಿದ ಹಾವು; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು