ಹಾರಿಕೊಂಡು ಬಂದ ಸೌದಿ ಅರೇಬಿಯಾದ ಈ ಫುಡ್​ ಡೆಲಿವರಿ ಏಜೆಂಟ್

Food Delivery Agent : ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಫುಡ್​ ಡೆಲಿವರಿ ಮಾಡುತ್ತಿರುವ ಈ ವಿಡಿಯೋ ವೈರಲ್ ಆಗಿದೆ. 4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದು, ಇದು ನಿಜಕ್ಕೂ ಹೌದಾ!? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹಾರಿಕೊಂಡು ಬಂದ ಸೌದಿ ಅರೇಬಿಯಾದ ಈ ಫುಡ್​ ಡೆಲಿವರಿ ಏಜೆಂಟ್
ಎತ್ತರದ ಕಟ್ಟಡದಿಂದ ಕಟ್ಟಡಕ್ಕೆ ಹಾರುತ್ತಿರುವ ಫುಡ್​ ಡೆಲಿವರಿ ಏಜೆಂಟ್
ಶ್ರೀದೇವಿ ಕಳಸದ | Shridevi Kalasad

|

Sep 29, 2022 | 6:48 PM

Viral Video : ಇತ್ತೀಚಿನ ಜೀವನಶೈಲಿಗೆ ವರದಾನವೆಂಬಂತೆ ಆಹಾರೋದ್ಯಮವು ತನ್ನನ್ನು ತಾನು ಮಾರ್ಪಾಡು ಮಾಡಿಕೊಂಡು ಶರವೇಗದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದೆ. ಗ್ರಾಹಕರು ಹೇಳಿದ ಜಾಗಕ್ಕೆ ಹೇಳಿದ ಸಮಯಕ್ಕೆ ಬಿಸಿಬಿಸಿ ಆಹಾರವನ್ನು ತಲುಪಿಸುವ ಕ್ರಮದಿಂದಾಗಿ ಮತ್ತಷ್ಟು ಜನಪ್ರಿಯಗೊಂಡಿದೆ. ರೆಸ್ಟೋರೆಂಟ್​ನಲ್ಲಿ ಸರ್ವ್ ಮಾಡಲು, ಆಹಾರ ತಯಾರಿಸಲು ರೋಬೋಟ್​ಗಳಿವೆ. ಫುಡ್ ಡೆಲಿವರಿ ಮಾಡಲು ದ್ವಿಚಕ್ರವಾಹನವುಳ್ಳ ಡೆಲಿವರಿ ಏಜೆಂಟರುಗಳಿದ್ದಾರೆ. ಅದರಲ್ಲೂ ಕೊರೊನಾ ನಂತರದದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಇಂಥ ಆವಿಷ್ಕಾರಗಳು ಹೆಚ್ಚುತ್ತಲೇ ಹೋಗುತ್ತಿವೆ. ಈಗ ಈ ‘ವೇಗ’ದ ಸಾಲಿಗೆ ಸೇರ್ಪಡೆ ಈ ಜೆಟ್​ಪ್ಯಾಕ್​ ಹಾಕಿಕೊಂಡು ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಫುಡ್ ಡೆಲಿವರಿ ಮಾಡುತ್ತಿರುವ ಸೌದಿ ಅರೇಬಿಯಾದ ಈ ವ್ಯಕ್ತಿ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು, ಹೀಗೆ ನಮ್ಮ ಮನೆಗೆ ಯಾವಾಗ ಆಹಾರ ತಲುಪುತ್ತದೆಯೋ ಎಂದು ಕನಸು ಕಾಣುತ್ತ ಕುಳಿತಿದ್ದಾರೆ.

First flying man delivering food in Saudi Arabia‼️😳 pic.twitter.com/sQuBz0MHQZ

— Daily Loud (@DailyLoud) September 26, 2022

ಆರ್ಡರ್ ಮಾಡಿದಾಗ ನಮ್ಮ ಮನೆಗೆ ಡೆಲಿವರಿ ಏಜೆಂಟರುಗಳು ದ್ವಿಚಕ್ರವಾಹನದ ಮೇಲೆ ಬರುವುದು ಮಾಮೂಲಿ. ಆದರೆ ಸೌದಿ ಅರೇಬಿಯಾದಲ್ಲಿ ಫುಡ್ ಡೆಲಿವರಿ ಏಜೆಂಟ್​ ಒಬ್ಬರು ಜೆಟ್​ಪ್ಯಾಕ್​ ಮೂಲಕ ಎತ್ತರವಾದ ಕಟ್ಟಡದಿಂದ ಹಾರಿ ಫುಡ್​ ಡೆಲಿವರಿ ಮಾಡುತ್ತಿರುವ ಈ ವಿಡಿಯೋ ಅಚ್ಚರಿ ತರುವಂತಿಲ್ಲವೆ? ಹೀಗೆ ಡ್ರೋನ್​ಗಳ ಮೂಲಕ ನಿಮ್ಮ ಮನೆ ಬಾಗಿಲಿಗೆ ಹಾರಿಕೊಂಡು ಆಹಾರ ತಲುಪಿಸುವ ದಿನಗಳು ದೂರವಿಲ್ಲ ಎನ್ನಬಹುದು.

ಈ ವ್ಯಕ್ತಿ ಎತ್ತರದ ಕಟ್ಟಡದಿಂದ ಹಾರಿ ಇನ್ನೊಂದು ಕಟ್ಟಡಕ್ಕೆ ಹೋದಾಗ, ಆಹಾರ ಪೊಟ್ಟಣವನ್ನು ಸ್ವೀಕರಿಸಲು ಮಹಿಳೆಯೊಬ್ಬಳು ಕಾಯುತ್ತ ನಿಂತಿರುತ್ತಾಳೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು 4 ಮಿಲಿಯನ್ ಜನರು ನೋಡಿದ್ದಾರೆ. 80 ಸಾವಿರಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಕಮೆಂಟ್​ ಮಾಡಿದ್ದಾರೆ.

ಈ ವಿಡಿಯೋ ನಿಜಕ್ಕೂ ಬೆರಗುಗೊಳಿಸುವಂತಿದೆ. ಇದು ಯಾಕೋ ಸ್ವಲ್ಪ ಸತ್ಯಕ್ಕೆ ದೂರವಾದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಕೆಲ ನೆಟ್ಟಿಗರು. ಸಾಗಾಣಿಕೆಯ ವೆಚ್ಚದ ಬಗ್ಗೆ ಯೋಚಿಸಿ, ವಾಸ್ತವದಲ್ಲಿ ಇದು ಸಾಧ್ಯವೇ ಎಲ್ಲ ವರ್ಗದ ಜನರಿಗೆ? ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವ್ಯವಸ್ಥೆಯಿಂದಾಗಿ ಆಹಾರ ಬೆಲೆಗಳು ಗಗನಕ್ಕೇರಬಹುದೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಈ ವಿಡಿಯೋ ಅಸಲಿಯೋ ನಕಲಿಯೋ ನಮಗಂತೂ ತಿಳಿಯುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಹೀಗೆ ಆಹಾರ ಪೂರೈಸುವ ಈ ವಿಧಾನ ಒಳ್ಳೆಯದೇ ಎಂದು ತೋರುತ್ತಿದೆ. ಏಕೆಂದರೆ ತುಂಬಾ ಹಸಿವಾದಾಗ ತಡೆದುಕೊಳ್ಳಲಾಗುವುದಿಲ್ಲ ಎಂದು ಮಗದೊಬ್ಬರು ಅಭಿಪ್ರಾಯಿಸಿದ್ದಾರೆ.

ಆರ್ಡರ್ ಮಾಡಿದಾಗ ನಮ್ಮ ಮನೆಗೆ ಡೆಲಿವರಿ ಏಜೆಂಟರುಗಳು ದ್ವಿಚಕ್ರವಾಹನದ ಬದಲಾಗಿ ಹೀಗೆ ಜೆಟ್​ಪ್ಯಾಕ್​ ಹಾರಿಕೊಂಡು ಬಂದರೆ? ಎಂದು ಕಲ್ಪಿಸಿಕೊಳ್ಳುತ್ತಿದ್ದೀರಾ? ನೋಡೋಣ ಆ ಕಾಲವೂ ಬಂದೀತು.

ಇದನ್ನೂ ಓದಿ

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada