32 ವರ್ಷದ ಈ ಯುವಕನ ಹೊಟ್ಟೆಯಿಂದ 62 ಸ್ಟೀಲ್ ಚಮಚಗಳನ್ನು ಹೊರತೆಗೆದ ವೈದ್ಯರು
Steel Spoon Swallowed : ಇತ್ತೀಚೆಗಷ್ಟೇ ಒಬ್ಬ ವ್ಯಕ್ತಿ 65 ನಾಣ್ಯಗಳನ್ನು ನುಂಗಿದ್ದರು, ಒಬ್ಬ ಮಹಿಳೆ 55 ಬ್ಯಾಟರಿ ಸೆಲ್ಗಳನ್ನು ನುಂಗಿದ್ದರು. ಈಗ 32ರ ಈ ಯುವಕ 65 ಚಮಚಗಳನ್ನು! ಎಲ್ಲದಕ್ಕೂ ಕಾರಣ ಖಿನ್ನತೆ.
Viral : ವ್ಯಕ್ತಿಯೊಬ್ಬನ ಹೊಟ್ಟೆಯಿಂದ 62 ಸ್ಟೀಲ್ ಚಮಚಗಳನ್ನು ವೈದ್ಯರು ಹೊರತೆಗೆದ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. 32 ವರ್ಷದ ಈ ವ್ಯಕ್ತಿ ಕಳೆದ ಒಂದು ವರ್ಷದಲ್ಲಿ ಇಷ್ಟೊಂದು ಚಮಚಗಳನ್ನು ನುಂಗಿದ್ದ ಎನ್ನುವುದು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಾಗಲೇ ಗೊತ್ತಾಗಿರುವುದು. ಹೊಟ್ಟೆನೋವು ಬರುವತನಕ ಈ ವ್ಯಕ್ತಿ ಈ ಬಗ್ಗೆ ಯಾರ ಬಳಿಯೂ ಹಂಚಿಕೊಂಡಿಲ್ಲ. ಕೊನೆಗೆ ಆಸ್ಪತ್ರೆಗೆ ದಾಖಲಾದ ಮೇಲೆಯೇ ಈ ವಿಷಯ ಬಹಿರಂಗಗೊಂಡಿದೆ.
UP | 62 spoons have been taken out from the stomach of 32-year-old patient, Vijay in Muzaffarnagar. We asked him if he ate those spoons & he agreed. Operation lasted for around 2 hours, he is currently in ICU. Patient has been eating spoons for 1 year: Dr Rakesh Khurrana (27.09) pic.twitter.com/tmqnfWJ2lY
ಇದನ್ನೂ ಓದಿ— ANI UP/Uttarakhand (@ANINewsUP) September 28, 2022
ಸ್ಥಳೀಯ ಮಾಧ್ಯಮಗಳ ಪ್ರಕಾರ, 32 ವರ್ಷದ ಬೋಪಾಡಾ ಗ್ರಾಮದ ನಿವಾಸಿ ವಿಜಯ್ ಎಂದು ಈ ವ್ಯಕ್ತಿಯನ್ನು ಗುರುತಿಸಲಾಗಿದೆ. ಹೊಟ್ಟೆನೋವು ಎಂದು ಈತ ತೀವ್ರವಾಗಿ ಬಳಲುತ್ತಿದ್ದಂತೆ ಮುಜಾಫರ್‌ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಈತನನ್ನು ಪರೀಕ್ಷಿಸಿದಾಗ, ಹೊಟ್ಟೆಯಲ್ಲಿ ಸ್ಟೀಲ್ ಚಮಚಗಳಿರುವುದು ಪತ್ತೆಯಾಗಿದೆ. ಗಾಬರಿಗೊಂಡ ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕೆಂದು ಈತನ ಕುಟುಂಬಕ್ಕೆ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ವೇಳೆ ಒಂದೊಂದೇ ಚಮಚಗಳನ್ನು ಹೊರತೆಗೆದು ಎಣಿಸಿದರೆ ಒಟ್ಟು 62 ಚಮಚಗಳು! ನೀವು ಚಮಚಗಳನ್ನು ನುಂಗಿದ್ದೀರಾ ಎಂದು ವೈದ್ಯರು ಕೇಳಿದಾಗ ಈತ, ‘ಹೌದು ಒಂದು ವರ್ಷದಿಂದ ನುಂಗುತ್ತಿದ್ದೇನೆ’ ಎಂದಿದ್ದಾನೆ ಎಂದು ಶಸ್ತ್ರಚಿಕಿತ್ಸಕ ಡಾ. ರಾಕೇಶ್ ಖುರಾನಾ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಮೂಲಕ ಎಲ್ಲಾ ಚಮಚಗಳನ್ನೂ ಹೊರತೆಗೆದಿದ್ದೇವೆ. ತಾನು ಚಮಚಗಳನ್ನು ನುಂಗುತ್ತಿದ್ದೆ ಎಂದು ಈ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಸದ್ಯ ಐಸಿಯುನಲ್ಲಿದ್ದಾನೆ’ ಎಂದು ಡಾ. ರಾಕೇಶ್ ತಿಳಿಸಿದ್ದಾರೆ.
ಇದೇ ರೀತಿಯ ಘಟನೆಗಳು ಈ ಹಿಂದೆ ಕೂಡ ನಡೆದಿವೆ. ರಾಜಸ್ಥಾನದ ಜೋಧ್‌ಪುರದಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಖಿನ್ನತೆಯಿಂದಾಗಿ 1 ರೂಪಾಯಿಯ 63 ನಾಣ್ಯಗಳನ್ನು ನುಂಗಿದ್ದರು. ವೈದ್ಯರೂ ಪರೀಕ್ಷಿಸಿದಾಗ ಅದೊಂದು ಲೋಹದ ಗಡ್ಡೆಯಾಗಿ ರೂಪುಗೊಂಡಿತ್ತು. ನಂತರ ವೈದ್ಯರ ತಂಡವು ಎರಡು ದಿನಗಳ ಕಾಲ ಎಂಡೋಸ್ಕೋಪಿ ಮೂಲಕ ಎಲ್ಲಾ ನಾಣ್ಯಗಳನ್ನು ಹೊರತೆಗೆದಿದ್ದರು.
ಇತ್ತೀಚೆಗೆ 65 ವರ್ಷದ ಮಹಿಳೆಯೊಬ್ಬರು ಖಿನ್ನತೆಯಿಂದಾಗಿ 55 ಬ್ಯಾಟರಿ ಸೆಲ್ಗಳನ್ನು ನುಂಗಿದ್ದರು. ವೈದ್ಯರು ಎಲ್ಲಾ ಸೆಲ್ಗಳನ್ನು ಹೊರತೆಗೆದು ಆಕೆಯ ಜೀವ ಉಳಿಸಿದ್ದರು.
ಮಕ್ಕಳು, ಪ್ರಾಣಿಗಳು ಅರಿವಿಲ್ಲದೆ ಇಂಥ ವಸ್ತುಗಳನ್ನು ನುಂಗುತ್ತವೆ. ಆದರೆ ದೊಡ್ಡವರು ಖಿನ್ನತೆಯಿಂದ ವಸ್ತುಗಳನ್ನು ನುಂಗುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಪ್ರತಿಯೊಬ್ಬರೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:09 pm, Thu, 29 September 22