‘ಜೀವನಪೂರ್ತಿ ಹೀಗೆ ಓದ್ತಾ ಓದ್ತಾ ಮುದುಕ ಆಗಿಬಿಡ್ತೀನಿ!’
Homework : ಯಾರಿಗೆ ತಾನೆ ಇಷ್ಟ ಹೀಗೆ ಕುಳಿತಲ್ಲೇ ಕುಳಿತು ಹೋಮ್ವರ್ಕ್ ಮಾಡುವುದು? ಈಗ ಈ ಪುಟ್ಟನಿಗೂ ಕೋಪ ಬಂದಿದೆ. ಮನಸಲ್ಲಿರೋ ಮಾತನ್ನು ಹೇಳಿ ಅತ್ತು, ಪಾಗಲ್ ಮಮ್ಮಾ ಅಂದುಬಿಟ್ಟಿದ್ದಾನೆ.

Viral Video : ಎಷ್ಟಂತ ಮುದ್ದು ಮಾಡುವುದು? ಕೊನೆಗೆ ಸ್ವಲ್ಪ ಗದರಲೇಬೇಕಲ್ಲ ಮಕ್ಕಳು ಹೋಮ್ವರ್ಕ್ ಮಾಡದಿದ್ದರೆ? ಹೀಗೆಲ್ಲ ಗದರಿದಾಗ ಮಕ್ಕಳು ಕೊಡುವ ಉತ್ತರ ಮಾತ್ರ ಭಯಂಕರ! ಇತ್ತ ಅಳಲೂ ಆಗುವುದಿಲ್ಲ ನಗಲೂ ಆಗುವುದಿಲ್ಲ. ಇಂಥ ಸಂದರ್ಭ ಅನುಭವಿಸಿದವರಿಗೇ ಗೊತ್ತು. ಯಾವ ಸ್ಕ್ರಿಪ್ಟ್ ರೈಟರ್, ಕಾಮೆಡಿಯನ್ ಕೂಡ ಊಹಿಸಲು ಅಸಾಧ್ಯವಾದಂಥ ಸ್ಪಾಂಟೆನಿಟಿ. ಪಾಪ ಒತ್ತಡ ಅನ್ನಿಸಿದರೆ ಹೊರಬರುವುದು ನಿಜವಾದದ್ದೇ ತಾನೆ? ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ಮಗು, ‘ಜೀವನಪೂರ್ತಿ ಓದಿ ಓದಿ ನಾನು ಮುದುಕನೇ ಆಗಿಬಿಡ್ತೀನಿ, ಪಾಗಲ್ ಮಮ್ಮಾ’ ಎಂದು ಅಳುತ್ತಿದೆ.
ज़िन्दगी भर पढ़ाई करते करते बुड्ढा हो जाऊंगा ?? pic.twitter.com/D3XNoifVSm
— ज़िन्दगी गुलज़ार है ! (@Gulzar_sahab) September 28, 2022
ತಾಯಿಯ ಗದರುವಿಕೆಗೆ ಮತ್ತಷ್ಟು ದುಃಖ ಉಮ್ಮಳಿಸಿ ಬರುತ್ತಿದೆ ಮಗುವಿಗೆ. ಈ ವಿಡಿಯೋ ಅನ್ನು ಸೆಪ್ಟೆಂಬರ್ 28ರಂದು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 4 ಲಕ್ಷ ಜನರು ವೀಕ್ಷಿಸಿದ್ದಾರೆ. 3,800ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಹತಾಷೆಗೊಂಡಿರುವ ಈ ಮಗುವಿನ ಬಗ್ಗೆ ನೆಟ್ಟಿಗರಿಗೆ ಕರುಣೆ ಉಕ್ಕಿ ಬಂದಿದೆ.
‘ಶಾಲೆಯಲ್ಲಿಯೇ ಮಕ್ಕಳು ಎಲ್ಲ ಅಭ್ಯಾಸವನ್ನೂ ಮುಗಿಸಿಕೊಂಡು ಬರುವಂಥ ಸಿಲಬಸ್, ಕಲಿಕಾ ವಿಧಾನವನ್ನು ಶಾಲೆಗಳು ರೂಪಿಸಬೇಕು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಹೋಮ್ ವರ್ಕ್ ಮಾಡಲು ಕುಳಿತಾಗ ಹೀಗೆ ಮಕ್ಕಳು ಅಳುವುದನ್ನು ನೋಡಲು ಬಹಳ ಬೇಸರವಾಗುತ್ತದೆ. ನನ್ನ ಮಗುವಿಗೆ ಹೋಮ್ವರ್ಕ್ ಮಾಡಿಸುವಲ್ಲಿ ನನ್ನ ತಂದೆ ಸಾಕಷ್ಟು ಮಾರ್ಗದರ್ಶನ ನೀಡಿದರು. ಹಾಗಾಗಿ ನನ್ನ ಮಗು ಹೋಮ್ವರ್ಕ್ ಅನ್ನು ಆಟದಂತೆ ಸಂತೋಷವಾಗಿ ಮಾಡಿ ಮುಗಿಸುತ್ತಿತ್ತು. ಕುಳಿತಲ್ಲೇ ಕುಳಿತು ಹೋಮ್ ವರ್ಕ್ ಮಾಡುವುದಕ್ಕಿಂತ ಮೆಟ್ಟಿಲುಗಳ ಮೇಲೆ ಅಕ್ಷರ, ಅಂಕಿಗಳನ್ನು ಬರೆಯುವುದು, ಸಿಹಿತಿನಿಸುಗಳ ಮೂಲಕ ಮಗ್ಗಿ, ಗಣಿತವನ್ನು ಕಲಿಯಲು ಪ್ರೇರೇಪಿಸುವಂಥ ಅಭ್ಯಾಸಗಳನ್ನು ರೂಢಿಸಿ. ಇದರಿಂದ ಮಕ್ಕಳಲ್ಲಿ ಸ್ವಯಂ ಕಲಿಕೆಗೆ ಸ್ಪೂರ್ತಿಯೂ ಒದಗುತ್ತದೆ’ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಮತ್ತೊಬ್ಬ ನೆಟ್ಟಿಗರು.
ನಿಜಕ್ಕೂ ಇಂಥ ವಿಡಿಯೋಗಳನ್ನು ನೋಡಲು ಬಹಳ ಸಂಕಟವಾಗುತ್ತದೆ. ಮಕ್ಕಳ ಬಾಲ್ಯ ಈ ಹೋಮ್ವರ್ಕ್ ಹೊರೆಯಿಂದ ನಲುಗಬಾರದು. ಅದಕ್ಕಾಗಿ ಏನು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು ಎಂದು ಪೋಷಕರು ಮತ್ತು ಶಿಕ್ಷಕರು ಯೋಚಿಸಬೇಕು.
ನಿಮಗೇನು ಅನ್ನಿಸುತ್ತೆ ಈ ವಿಡಿಯೋ ನೋಡಿದರೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:51 pm, Thu, 29 September 22








