ಬಾಹ್ಯಾಕಾಶದಲ್ಲಿ ಗರುಡಾಸನ ಮಾಡುತ್ತಿರುವ ಗಗನಯಾತ್ರಿ, ಅಚ್ಚರಿಗೊಂಡ ನೆಟ್ಟಿಗರು

Garudasana in Space :ನೆಲದ ಮೇಲೆ ಯೋಗಾಸನ ಮಾಡುತ್ತ ಸಮತೋಲನಗೊಳಿಸಿಕೊಳ್ಳಲು ನಮಗೆ ಸಾಕಷ್ಟು ಪರಿಶ್ರಮ ಬೇಕು. ಇನ್ನು ಬಾಹ್ಯಾಕಾಶದಲ್ಲಿ? ಗಗನಯಾತ್ರಿ ಸಮಂತಾ ಇದನ್ನು ಹೇಗೆ ಸಾಧ್ಯವಾಗಿಸಿಕೊಂಡಿದ್ದಾರೆ ನೋಡಿ.

ಬಾಹ್ಯಾಕಾಶದಲ್ಲಿ ಗರುಡಾಸನ ಮಾಡುತ್ತಿರುವ ಗಗನಯಾತ್ರಿ, ಅಚ್ಚರಿಗೊಂಡ ನೆಟ್ಟಿಗರು
ಗರುಡಾಸನ ಮಾಡುತ್ತಿರುವ ಗಗನಯಾನಿ
Follow us
ಶ್ರೀದೇವಿ ಕಳಸದ
|

Updated on:Sep 29, 2022 | 1:06 PM

Viral Video : ದೈಹಿಕವಾಗಿ ಮಾನಸಿಕವಾಗಿ ಶಕ್ತಿ-ಚೈತನ್ಯ ನೀಡುವ ಯೋಗವನ್ನು ಯಾವ ವಯಸ್ಸಿನವರೂ ಮಾಡಬಹುದು. ಯಾವ ಆಸನಗಳಿಂದ ಏನು ಪ್ರಯೋಜನ ಎನ್ನುವುದನ್ನು ತಿಳಿದುಕೊಳ್ಳುತ್ತಾ ರೂಢಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇದಕ್ಕೆ ನಿಯಮಿತವಾದ ಅಭ್ಯಾಸ ಬೇಕಾಗುತ್ತದೆ. ಈ ಅಭ್ಯಾಸದಿಂದ ಸಮತೋಲನ ಸಾಧ್ಯವಾಗುತ್ತದೆ. ಒಮ್ಮೆ ಸಮತೋಲನ ಸಾಧಿಸಿದ ಮೇಲೆ ಯೋಗಾಭ್ಯಾಸ ಸುಲಭ. ಸುಲಭವಾಗುತ್ತಿದ್ದಂತೆ ಮನಸ್ಸು ಆಹ್ಲಾದವನ್ನು ಅನುಭವಿಸಲು ಶುರುಮಾಡುತ್ತದೆ. ಈಗ ನೀವೆಲ್ಲರೂ ನೀರಿನಲ್ಲಿ ಕೂಡ ಯೋಗಾಸನ ಮಾಡಿರುವುದನ್ನು ನೋಡಿದ್ದೀರಿ. ಆದರೆ ಆಕಾಶದಲ್ಲಿ? ಇದು ಬಹಳೇ ಕಠಿಣ! ಆದರೂ ಪ್ರಯತ್ನಿಸಿದ್ದಾರೆ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ.

ಬಹುಮುಖ್ಯವಾಗಿ ಯೋಗಾಸನ ಮಾಡಲು ಬೇಕಿರುವುದು ಗುರುತ್ವಾಕರ್ಷಣ ಬಲ. ಆದರೆ ಇದು ಬಾಹ್ಯಕಾಶದಲ್ಲಿ ಶೂನ್ಯ! ಹೀಗಿದ್ದಾಗಲೂ ಕ್ರಿಸ್ಟೋಫರ್ ಬಾಹ್ಯಾಕಾಶದಲ್ಲಿ ಗರುಡಾಸನ ಮಾಡಿ ತೋರಿಸಿದ್ದಾರೆ. ಕೆಲ ತಂತ್ರಗಳ ಸಹಾಯದಿಂದ ಈ ಆಸನ ಮಾಡಿದ್ದಾರೆ. ಕಾಸ್ಮಿಕ್​ ಕಿಡ್ಸ್​ ಎಂಬ ಯೋಗವನ್ನು ಪ್ರೋತ್ಸಾಹಿಸುವ ಟ್ವಿಟರ್ ಖಾತೆಯು ಈ ಪೋಸ್ಟ್ ಹಂಚಿಕೊಂಡಿದೆ.

ಅತ್ಯಾಶ್ಚರ್ಯದಿಂದ ಈ ವಿಡಿಯೋ ನೋಡುತ್ತಿರುವ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಭೂಮಿಯ ಮೇಲೆ ಗರುಡಾಸನ ಮಾಡಲು ಕೆಲವರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಇದು ಬಹಳ ಸುಂದರವಾಗಿದೆ ಎಂದು ಮತ್ತೊಬ್ಬರು ಪ್ರಶಂಸಿಸಿದ್ದಾರೆ. ಮತ್ತಷ್ಟು ವಿಡಿಯೋಗಳನ್ನು ಯಾವಾಗ ನೋಡುತ್ತೇವೆ ಎಂದು ನನ್ನ ಮಗ ಕೇಳುತ್ತಿದ್ದಾನೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನೀವೇನಂತೀರಿ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:45 pm, Thu, 29 September 22