ನಿಮಗೆ ಬಣ್ಣಗುರುಡುತನ ಇದೆಯೇ? ಪರೀಕ್ಷಿಸಿಕೊಳ್ಳಿ

Test for Color Blindness : ಬಣ್ಣಗುರುಡುತನದ ಸಮಸ್ಯೆ ಇಲ್ಲವೆಂದಾದಲ್ಲಿ ಈ ವೃತ್ತದಲ್ಲಿರುವ ಅಂಕಿಗಳನ್ನು ನೀವು ಸ್ಪಷ್ಟವಾಗಿ ಗುರುತಿಸುತ್ತೀರಿ.

ನಿಮಗೆ ಬಣ್ಣಗುರುಡುತನ ಇದೆಯೇ? ಪರೀಕ್ಷಿಸಿಕೊಳ್ಳಿ
ಈ ಬಣ್ಣಗಳಲ್ಲಿ ಅಡಗಿರುವ ಅಂಕಿಗಳನ್ನು ಗುರುತಿಸಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 29, 2022 | 11:13 AM

Color Blind : ನಮ್ಮನ್ನು ನಾವು ಅರಿತುಕೊಳ್ಳಲು ಮನೋವಿಜ್ಞಾನದ ಆಧಾರದಡಿ ಸಾಕಷ್ಟು ಪರೀಕ್ಷೆಗಳನ್ನು ಮನೋಶಾಸ್ತ್ರಜ್ಞರು ರೂಪಿಸಿದ್ದಾರೆ. ಈಗಾಗಲೇ ಇಂಥ ಸ್ವಯಂಪರೀಕ್ಷೆಗಳ ಕುರಿತು ಈ ತಾಣದಲ್ಲಿಯೇ ನೀವು ಓದಿದ್ದೀರಿ, ಪ್ರಯೋಗಿಸಿದ್ದೀರಿ. ಮೈಂಡ್​ ರೀಡಿಂಗ್, ಫೇಸ್​ ರೀಡಿಂಗ್​ನಂಥ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಂಡಿರುತ್ತೀರಿ. ಜೊತೆಗೆ ಸ್ವಯಂ ಅವಲೋಕನ ಕೂಡಿ ಮಾಡಿಕೊಂಡಿರುತ್ತೀರಿ. ಈ ಮೂಲಕ ನಿಮ್ಮ ಸ್ವಭಾವ, ಗುಣ, ಬುದ್ಧಿವಂತಿಕೆ, ಭಾವನಾತ್ಮಕ ಮಟ್ಟ ಮುಂತಾದವನ್ನು ಪರೀಕ್ಷಿಸಿಕೊಂಡಿರುತ್ತೀರಿ. ಈಗಿಲ್ಲಿ ಇನ್ನೊಂದು ಪರೀಕ್ಷೆ ಇದೆ. ಇದು ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ್ದು. ಅಂದರೆ ಬಣ್ಣಗುರುಡು ಸಮಸ್ಯೆಗೆ ಸಂಬಂಧಿಸಿದ್ದು.

ಸಾಕಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರ ಕಣ್ಣುಗಳನ್ನು ನೋಡಿದಾಗ ಅಂಥ ವ್ಯತ್ಯಾಸವೇನೂ ತೋರದು. ಆದರೆ, ಇತರರಿಗೆ ಕಾಣುವ ಬಣ್ಣಗಳು ಅವರ ಗ್ರಹಿಕೆಯಲ್ಲಿ ಬೇರೆಯ ಬಣ್ಣಗಳನ್ನೇ ಸೂಚಿಸುತ್ತಿರುತ್ತವೆ. ಇದು ಸಾಮಾನ್ಯವಾಗಿ ಆನುವಂಶಿಕ ಸಮಸ್ಯೆ ಎಂದು ಹೇಳಲಾಗುತ್ತದೆ. ನೀವು ಈ ಸಮಸ್ಯೆಗೆ ಒಳಗಾಗಿದ್ದೀರೋ ಇಲ್ಲವೋ ಎನ್ನುವುದನ್ನು ಇಲ್ಲಿರುವ ಸಣ್ಣ ಪರೀಕ್ಷಾ ವಿಧಾನದಿಂದ ಕಂಡುಕೊಳ್ಳಬಹುದು.

1917 ರಲ್ಲಿ ಜಪಾನಿನ ವೈದ್ಯ ಶಿನೋಬು ಇಶಿಹರಾ ಅವರು ಬಣ್ಣಗುರುಡುತನವನ್ನು ಪತ್ತೆಹಚ್ಚಲು ಈ ಪರೀಕ್ಷಾ ವಿಧಾನವನ್ನು ರೂಪಿಸಿದರು. ಇಲ್ಲಿ ವಿವಿಧ ಬಣ್ಣಗಳನ್ನುಳ್ಳ ಆರು ವೃತ್ತಾಕಾರಗಳಿವೆ. ಈ ವೃತ್ತಗಳಲ್ಲಿ ಕೆಲ ಸಂಖ್ಯೆಗಳು ಅಡಗಿವೆ. ಅವುಗಳನ್ನು ಗುರುತಿಸಲು ಸಾಧ್ಯವಾಗುವಂತೆ ಈ ವೃತ್ತಗಳ ವಿನ್ಯಾಸ ಮಾಡಲಾಗಿದೆ. ಹಾಗಾಗಿ ಈ ವೃತ್ತಗಳಲ್ಲಿರುವ ಅಂಕಿಗಳನ್ನು ಗುರುತಿಸಲು ನಿಮಗೆ ಸಾಧ್ಯವಾಗದಿದ್ದರೆ ನಿಮಗೆ ಬಣ್ಣಗುರು ಸಮಸ್ಯೆ ಇದೆ ಎಂದರ್ಥ. ನೀವು ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಉತ್ತರ ಹೀಗಿದೆ : 7, 13, 16, 8, 12 ಮತ್ತು 9

(ವಿ. ಸೂ. ಅಂತರ್ಜಾಲದ ಆಧಾರದಿಂದ ಪಡೆದ ಮಾಹಿತಿ ಇದಾಗಿದೆ. ನಿಖರತೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಒಳಿತು)

 ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:11 am, Thu, 29 September 22