AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

24.73 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ಗಿನ್ನಿಸ್ ದಾಖಲೆ ಮಾಡಿದ ರೋಬೋಟ್

Robot : ಮೊದಲ ನೋಟಕ್ಕೆ ಇದು ಆಸ್ಟ್ರಿಚ್​ ನಂತೆ ಕಾಣುತ್ತದೆ. ಆದರೆ ಇದು ವಿಶ್ವದಾಖಲೆ ಮಾಡಿದ ರೋಬೋಟ್. ಇದರ ಓಟ ಭಯ ಉಂಟುಮಾಡುವಂತಿದೆಯಾ, ಸ್ಫೂರ್ತಿ ಉಂಟುಮಾಡುವಂತಿದೆಯಾ ಎನ್ನುತ್ತಿದ್ದಾರೆ ನೆಟ್ಟಿಗರು.

24.73 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ಗಿನ್ನಿಸ್ ದಾಖಲೆ ಮಾಡಿದ ರೋಬೋಟ್
ಇದು ಆಸ್ಟ್ರಿಚ್ ಅಲ್ಲ ರೋಬೋಟ್
TV9 Web
| Updated By: ಶ್ರೀದೇವಿ ಕಳಸದ|

Updated on:Sep 28, 2022 | 5:07 PM

Share

ಅರೆ ಮನುಷ್ಯರೊಂದಿಗೆ ರನ್ನಿಂಗ್​ ಟ್ರ್ಯಾಕ್​ನಲ್ಲಿ ಓಡುತ್ತಿರುವ ಇದು ಆಸ್ಟ್ರಿಚ್​ ಅಲ್ಲವೆ? ಹೀಗೆಂದು ಮೊದಲ ನೋಟಕ್ಕೆ ಅನ್ನಿಸುವುದು ಸಹಜ. ಹೊರಾಂಗಣದಲ್ಲಿ ತನ್ನ ನಡಿಗೆಯ ವೇಗವನ್ನು ತಾನೇ ನಿಯಂತ್ರಿಸಿಕೊಂಡು ಓಡುವುದನ್ನು ಕಲಿತ ಮೊದಲ ಬೈಪೆಡೆಲ್​ ರೋಬೋಟ್ ಕ್ಯಾಸ್ಸಿ. ಇದು ಮೊಣಕಾಲುಗಳನ್ನು ಹೊಂದಿರುವುದರಿಂದ ನಡೆಯುವಾಗ ಅಥವಾ ಓಡುವಾಗ ಆಸ್ಟ್ರಿಚ್​ನಂತೆ ಬಾಗಬಲ್ಲುದು. ಈ ಹಿಂದೆ 2021 ರಲ್ಲಿ ಇದು 53 ನಿಮಿಷಗಳಲ್ಲಿ 5 ಕಿ.ಮೀ. ಓಡುವ ಸಾಮರ್ಥ್ಯವನ್ನು ಪಡೆದುಕೊಂಡಿತ್ತು. ಇದೀಗ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ತನ್ನ ಹಳೆಯ ದಾಖಲೆಯನ್ನು ಮುರಿದಿದೆ.

‘ಒಂದೊಂದೇ ಹಂತದಲ್ಲಿ ಸಂಶೋಧನೆ ನಡೆಸುತ್ತಿರುವ ನಾವು ಹಲವಾರು ವರ್ಷಗಳಿಂದ ವಿಶ್ವದಾಖಲೆ ಗುರಿ ಇಟ್ಟುಕೊಂಡು ಶ್ರಮಿಸುತ್ತಿದ್ದೇವೆ.’ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿಕೊಂಡ ಪದವಿ ವಿದ್ಯಾರ್ಥಿ ಡೆವಿನ್ ಕ್ರೌಲಿ ಹೇಳಿದ್ದಾರೆ.

‘ನಿಂತುಕೊಂಡಿರುವ ಭಂಗಿಯಿಂದ ಓಟವನ್ನು ಪ್ರಾರಂಭಿಸುವುದು ಮತ್ತು ಓಟದಿಂದ ನಿಲ್ಲುವ ಭಂಗಿಗೆ ಬರುವುದು ಅತ್ಯಂತ ಕಷ್ಟಕರವಾದ ಪ್ರಕ್ರಿಯೆ. ಇದಕ್ಕೆ ಉದಾಹರಣೆಯಾಗಿ ಹೇಳಬೇಕೆಂದರೆ, ವಿಮಾನಿನ ಟೇಕ್​ ಆಫ್​ ಮತ್ತು ಲ್ಯಾಂಡಿಂಗ್​ನಂತೆ’ ಎಂದು ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಪ್ರಾಧ್ಯಾಪಕ ಅಲನ್ ಫರ್ನ್ ಹೇಳಿದ್ದಾರೆ. ‘ಈ 100 ಮೀಟರ್ ಓಟದಲ್ಲಿ ರೋಬೋಟ್​ ಯಶಸ್ವಿಯಾಗಬೇಕೆಂದರೆ ಕೃತಕ ಬುದ್ಧಿಮತ್ತೆಯ ತಾಂತ್ರಿಕತೆಯಲ್ಲಿ ಸಾಕಷ್ಟು ಶ್ರಮ ವಹಿಸಬೇಕಾಯಿತು’ ಎಂದು ಅವರು ಹೇಳಿದ್ದಾರೆ.

3 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಕರನ್ನು ಈ ವಿಡಿಯೋ ಪಡೆದುಕೊಂಡಿದೆ.  ನೆಟ್ಟಿಗರು ಈ ಕುರಿತು ಅಚ್ಚರಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಈ ರೋಬೋಟ್​ ಭಯ ತರುವಂತಿದೆಯಾ, ಸ್ಫೂರ್ತಿ ತರುವಂತಿದೆಯಾ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:05 pm, Wed, 28 September 22

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ