‘ಕತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ’ ಭಟ್ರು ಸುಮ್ಮನೇ ಬರೆದಿಲ್ಲ ನೋಡಿ

Bear enters chocolate factory : ರಾತ್ರಿವೇಳೆ ಕೂನೂರಿನ ಚಾಕೋಲೇಟ್​ ಫ್ಯಾಕ್ಟರಿ ಹೊಕ್ಕ ಕರಡಿಯೊಂದು ಚಾಕೋಲೇಟ್​ ತಿಂದು ಹೋದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ಕತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ’ ಭಟ್ರು ಸುಮ್ಮನೇ ಬರೆದಿಲ್ಲ ನೋಡಿ
ಚಾಕೊಲೇಟ್​ ಫ್ಯಾಕ್ಟರಿ ಹೊಕ್ಕ ಕರಡಿ
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Sep 29, 2022 | 6:48 PM

Viral : ಮೊನ್ನೆಯಷ್ಟೇ ಅಮೆರಿಕದ ಅಂಗಡಿಗೆ ರಾತ್ರಿಹೊತ್ತು ಕಂದುಬಣ್ಣದ ಕರಡಿಯೊಂದು ನುಗ್ಗಿ ತನಗೆ ಬೇಕಾದ ತಿಂಡಿ, ತಿನಿಸು, ಕ್ಯಾಂಡಿಯನ್ನೆಲ್ಲ ತಿಂದು ತೇಗಿ ಅರ್ಧಗಂಟೆಯ ನಂತರ ಹೊರಬಂದ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದೀರಿ. ಇದೀಗ ತಮಿಳುನಾಡಿನ ಕೂನೂರು ಸಮೀಪದ ಹೈಫೀಲ್ಡ್ ಚಾಕೊಲೇಟ್ ಕಾರ್ಖಾನೆಗೆ ಮಧ್ಯರಾತ್ರಿ ಕರಡಿಯೊಂದು ನುಗ್ಗಿದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ಫ್ಯಾಕ್ಟರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ನೀಲಗಿರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಾಗಿರುವ ಕರಡಿ, ಕಾಡೆಮ್ಮೆ, ಚಿರತೆಗಳಂಥ ಕಾಡುಪ್ರಾಣಿಗಳು ಹೀಗೆ ಆಹಾರ, ನೀರು ಹುಡುಕಿಕೊಂಡು ಕಾಡಿನ ಸರಹದ್ದು ದಾಟಿಕೊಂಡು ಅಲೆದಾಡುವುದು ಸಾಮಾನ್ಯ. ಆದರೆ ಈತನಕ ಯಾವ ಪ್ರಾಣಿಯೂ ಹೀಗೆ ಚಾಕೋಲೇಟ್ ರುಚಿ ನೋಡಲು ಹೋದ ಸಾಕ್ಷಿಗಳಿರಲಿಲ್ಲ.

ಇದನ್ನು ಓದುತ್ತಿರುವ ನಮಗೇನೋ ಇದು ಮಜವೆನ್ನಿಸುತ್ತಿದೆ. ಆದರೆ, ವಸತಿ ಗೃಹಗಳಲ್ಲಿರುವ ಫ್ಯಾಕ್ಟರಿ ಕಾರ್ಮಿಕರ ಕುಟುಂಬದವರಿಗೆ ಈ ದೃಶ್ಯ ಭಯ ಹುಟ್ಟಿಸಿದೆ. ಕಾಡುಪ್ರಾಣಿಗಳಿಂದ ಈ ಪ್ರದೇಶದ ಜನರನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೂನೂರು ಅರಣ್ಯಾಧಿಕಾರಿಗಳಿಗೆ ಈಗಾಗಲೇ ಆದೇಶ ನೀಡಲಾಗಿದೆ.

ಯೋಗರಾಜ ಭಟ್ಟರು ಕರಡಿಗೆ ಜಾಮೂನು ತಿನ್ನಿಸಿದರೆ, ಕೂನೂರಿನ ಜನರು ಅಂತೂ ಚಾಕೋಲೇಟು ತಿನ್ನಿಸಿ ಕಳಿಸಿದರು ಎಂಬಲ್ಲಿಗೆ…

ಇದನ್ನೂ ಓದಿ

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada