‘ಪಪಾನ್’ನ ಹುಮ್ನಾವಾ ಹಾಡಿಗೆ ದೆಹಲಿಯ ಬೀದಿಯಲ್ಲಿ ಹೆಜ್ಜೆ ಹಾಕಿದ ಕಲಾವಿದನ ವಿಡಿಯೋ ವೈರಲ್
Street Performer : ಕಲೆ ಎಲ್ಲಿಯೂ ಅರಳುತ್ತದೆ, ಎಲ್ಲಿಯೂ ಪ್ರದರ್ಶನಗೊಳ್ಳುತ್ತದೆ ಮತ್ತು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಬಯಸುತ್ತದೆ. ಅದು ಏಕಾಗ್ರಚಿತ್ತದಿಂದ ಕಲಿಯಲು ಉತ್ಸಾಹ ತೋರುವವರನ್ನು ತಾನಾಗಿಯೇ ಆಯ್ಕೆ ಮಾಡಿಕೊಳ್ಳುತ್ತದೆ.
Viral Video : ಅನೇಕ ಭಾರತೀಯರು ಪರಂಪರಾಗತ ಕಲೆಗಳ ತರಬೇತಿಯನ್ನು ಪಡೆಯದೆಯೂ ಕಲೆಯಲ್ಲಿ ಸಾಧನೆಗೈಯುತ್ತಿದ್ದಾರೆ ಎನ್ನುವುದಕ್ಕೆ ನಮ್ಮೆದುರು ಇಂದು ಆನ್ಲೈನ್ನಲ್ಲಿರುವ ಲಕ್ಷಾಂತರ ವಿಡಿಯೋಗಳೇ ಸಾಕ್ಷಿ. ಇತ್ತೀಚೆಗೆ, ದೆಹಲಿಯ ರಾಜೀವ್ ಚೌಕ್ಬಳಿ ಕಲಾವಿದರೊಬ್ಬರು ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿ ನೆಟ್ಟಿಗರ ಮನಗೆದ್ದಿದ್ದಾರೆ. ಗಾಯಕ ಪಪಾನ್ನ ಹುಮ್ನಾವಾ ಹಾಡಿಗೆ ಹೆಜ್ಜೆ ಹಾಕಿದ ಕಲಾವಿದರೇ ದೀಪಕ್ ಉಪಾಧ್ಯಾಯ. ಕಪ್ಪು ಟೀಶರ್ಟ್, ತೆಳುಬಣ್ಣದ ಪ್ಯಾಂಟ್ ಧರಿಸಿದ ಈ ಕಲಾವಿದರು ತನ್ಮಯರಾಗಿ ನೃತ್ಯಗೈದಿದ್ದಾರೆ.
View this post on Instagram
ಹಮಾರಿ ಅಧೂರಿ ಕಹಾನಿ ಸಿನೆಮಾದ ಈ ಹಾಡಿನಲ್ಲಿ ಇಮ್ರಾನ್ ಹಶ್ಮಿ ಮತ್ತು ವಿದ್ಯಾ ಬಾಲನ್ ಅಭಿನಯಿಸಿದ್ದಾರೆ. ಈ ಹಾಡನ್ನು ಹೀಗೆ ಬೀದಿಯಲ್ಲಿ ನರ್ತಿಸುವ ಮೂಲಕ ಜನಮನಗೆದ್ದ ಈ ಕಲಾವಿದ ದೀಪಕ್, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮನ್ನು ತಾವು ಸ್ಟ್ರೀಟ್ ಪರ್ಫಾರ್ಮರ್ ಎಂದು ಹೇಳಿಕೊಂಡಿದ್ದಾರೆ.
ಇವರ ಈ ಚಮತ್ಕಾರಿಕ ನೃತ್ಯವನ್ನು ವೀಕ್ಷಿಸಿದ ನೆಟ್ಟಿಗರು ಅನೇಕ ರೀತಿಯಲ್ಲಿ ಸ್ಪಂದಿಸಿ ಹುರಿದುಂಬಿಸಿದ್ದಾರೆ. ‘ತಮ್ಮಾ ನೀ ಇಷ್ಟೊಂದು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀ. ಒಂದು ದಿನ ಸೂಪರ್ ಸ್ಟಾರ್ ಆಗುತ್ತೀ’ ಎಂದು ಒಬ್ಬರು ಹೇಳಿದ್ದಾರೆ. ‘ಬಹಳ ಚೆನ್ನಾಗಿ ನರ್ತಿಸಿದ್ದೀರಿ, ನಿಮಗೆ ಉಜ್ವಲ ಭವಿಷ್ಯವಿದೆ’ ಎಂದಿದ್ಧಾರೆ ಮತ್ತೊಬ್ಬರು.
ಕಲೆ ಎಲ್ಲಿಯೂ ಅರಳುತ್ತದೆ, ಎಲ್ಲಿಯೂ ಪ್ರದರ್ಶನಗೊಳ್ಳುತ್ತದೆ ಮತ್ತು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಬಯಸುತ್ತದೆ. ಅದು ವಿನಯವಂತರನ್ನು, ಏಕಾಗ್ರಚಿತ್ತದಿಂದ ಕಲಿಯಲು ಉತ್ಸಾಹ ತೋರುವವರನ್ನು ತಾನಾಗಿಯೇ ಆಯ್ಕೆ ಮಾಡಿಕೊಳ್ಳುತ್ತದೆ. ಇಂಥವರಿಗೆ ಸಾಮಾಜಿಕ ಜಾಲತಾಣಗಳು ಒಳ್ಳೆಯ ವೇದಿಕೆಯನ್ನೇ ಕಲ್ಪಿಸಿವೆ.
ನೀವೇನಂತೀರಿ ಇವರ ನೃತ್ಯಕ್ಕೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:30 pm, Thu, 29 September 22