Viral Video: ಮೊದಲ ಬಾರಿಗೆ ಭಾರತೀಯ ಶೈಲಿಯ ಆಹಾರ ತಿಂದು ಬಾಯಿ ಚಪ್ಪರಿಸಿದ ವಿದೇಶಿ ಮಹಿಳೆ

ವಿದೇಶಿ ಮಹಿಳೆಯೊಬ್ಬರು ಮೊದಲ ಬಾರಿಗೆ ಭಾರತೀಯ ಆಹಾರ ತಿಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಮೊದಲ ಬಾರಿಗೆ ಭಾರತೀಯ ಶೈಲಿಯ ಆಹಾರ ತಿಂದು ಬಾಯಿ ಚಪ್ಪರಿಸಿದ ವಿದೇಶಿ ಮಹಿಳೆ
ಮೊದಲ ಬಾರಿ ಭಾರತೀಯ ಆಹಾರ ತಿಂದ ಮಹಿಳೆ
Updated By: Pavitra Bhat Jigalemane

Updated on: Feb 05, 2022 | 9:47 AM

ವಿದೇಶಿ ಮಹಿಳೆಯೊಬ್ಬರು (Forign Woman) ಮೊದಲ ಬಾರಿಗೆ ಭಾರತೀಯ ಆಹಾರ ತಿಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಪೇನ್​ ರಾಜಧಾನಿ ಮ್ಯಾಡ್ರಿಡ್​ನ (Madrid) ಉದಯಪುರ್​ ಎನ್ನುವಲ್ಲಿ 20 ವರ್ಷದ ಮಹಿಳೆ ಮೊದಲ ಬಾರಿಗೆ ಭಾರತೀಯ ಆಹಾರವನ್ನು ತಿಂದಿದ್ದಾರೆ. ರುಚಿಕರವಾದ ತಿನಿಸನ್ನು ತಿಂದು ವಾವ್​ ಎಂದು ಉದ್ಘರಿಸಿದ ಮಹಿಳೆ ಬಾಯಿ ಚಪ್ಪರಿಸಿದ್ದಾರೆ. ಮಹಿಳೆಯನ್ನು ಫಾತಿಮಾ ಡಿ ಟೆಟುವಾನ್ (Fatima De Tetuan )ಎಂದು ಗುರುತಿಸಲಾಗಿದೆ. ಉದಯಪುರದ ರೆಸ್ಟೋರೆಂಟ್​​ನಲ್ಲಿ ಮಹಿಳೆ ಚಿಕನ್​ ಟಿಕ್ಕಾವನ್ನು ಟೇಸ್ಟ್​ ಮಾಡಿದ್ದಾರೆ.


ವಿಡಿಯೋದಲ್ಲಿ ಮಹಿಳೆ ರೆಸ್ಟೋರೆಂಟ್​ನಲ್ಲಿ ಕುಳಿತಿರುವುದನ್ನು ಕಾಣಬಹುದು. ಅಲ್ಲಿ ಅವರು ಚಿಕನ್​ ಟಿಕ್ಕಾ ಮತ್ತು ನಾನ್​ ಅನ್ನು ಆರ್ಡರ್​ ಮಾಡಿದ್ದಾರೆ. ಮೊದಲ ತುತ್ತು ತಿನ್ನುತ್ತಲೇ ವಾವ್​ ಎಂದ ಮಹಿಳೆ ಇಷ್ಟು ವರ್ಷ ಈ ಟೇಸ್ಟ್​ ಅನ್ನು ತಿಂದೇ ಇರಲಿಲ್ಲ. 20 ವರ್ಷ ಈ ಫುಡ್​ ತಿನ್ನದೇ ಇದ್ದುಬಿಟ್ಟೆ ಎಂದಿದ್ದಾರೆ. ವಿಡಿಯೋ ಹಂಚಿಕೊಂಡ ಅವರು ಇನ್ನು ವಿವಿಧ ರೀತಿಯ  ಆಹಾರವನ್ನು ಟೇಸ್ಟ್​ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೇನೆ ಎಂದಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ 7 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ವಿದೇಶದಲ್ಲೂ ಭಾರತೀಯರ ಟೇಸ್ಟ್​ನ ಆಹಾರವಿದೆ ಎಂದು ನೆಟ್ಟಿಗರು ಸಂತಸಗೊಂಡಿದ್ದಾರೆ.

ಇದನ್ನೂ ಓದಿ:

Valentines Day: ಕೈಕೊಟ್ಟು ಹೋದ ಪ್ರೇಮಿಯ ಹೆಸರನ್ನು ಜಿರಲೆಗಿಟ್ಟು ಕೋಪ ತೀರಿಸಿಕೊಳ್ಳಿ; ಇದು ವ್ಯಾಲಂಟೈನ್ಸ್ ಡೇ ಆಫರ್!