Viral News: ಹಾಲಿಗೆ ಆಲ್ಕೋಹಾಲ್ ಬೆರೆಸಿದ ಅಜ್ಜಿ;ಕೋಮಾಗೆ ಜಾರಿದ 4 ತಿಂಗಳ ಮೊಮ್ಮಗು

|

Updated on: May 04, 2024 | 5:19 PM

ಮೊಮ್ಮಗು ಕುಡಿಯುವ ಹಾಲಿಗೆ ಅಜ್ಜಿ ತಪ್ಪಾಗಿ ಆಲ್ಕೋಹಾಲ್ ಬೆರೆಸಿದ್ದು, ಅರ್ಧ ಹಾಲು ಕುಡಿದ ಮಗು ಅಳಲು ಆರಂಭಿಸಿದೆ. ಈ ವೇಳೆ ಉಳಿದ ಹಾಲಿನ ವಾಸನೆ ನೋಡಿದಾಗ ವೃದ್ಧೆಗೆ ಹಾಲಿನಲ್ಲಿ ಆಲ್ಕೋಹಾಲ್ ಮಿಶ್ರಣವಾಗಿರುವುದು ತಿಳಿದುಬಂದಿದೆ.

Viral News: ಹಾಲಿಗೆ ಆಲ್ಕೋಹಾಲ್ ಬೆರೆಸಿದ ಅಜ್ಜಿ;ಕೋಮಾಗೆ ಜಾರಿದ  4 ತಿಂಗಳ ಮೊಮ್ಮಗು
ಹಾಲಿಗೆ ಆಲ್ಕೋಹಾಲ್ ಬೆರೆಸಿದ ಅಜ್ಜಿ;ಕೋಮಾಗೆ ಜಾರಿದ 4 ತಿಂಗಳ ಮೊಮ್ಮಗು
Follow us on

ಇಟಲಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವೃದ್ಧೆ ಮಾಡಿದ ಒಂದು ತಪ್ಪು ನಾಲ್ಕು ತಿಂಗಳ ಮಗುವಿನ ಜೀವಕ್ಕೆ ಕಂಟಕವಾಗಿದೆ. ಮೊಮ್ಮಗು ಕುಡಿಯುವ ಹಾಲಿಗೆ ಅಜ್ಜಿ ತಪ್ಪಾಗಿ ಆಲ್ಕೋಹಾಲ್ ಬೆರೆಸಿದ್ದು, ಅರ್ಧ ಹಾಲು ಕುಡಿದ ಮಗು ಅಳಲು ಆರಂಭಿಸಿದೆ. ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಅನುಮಾನಗೊಂಡು ಉಳಿದ ಹಾಲಿನ ವಾಸನೆ ನೋಡಿದಾಗ ವೃದ್ಧೆಗೆ ಹಾಲಿನಲ್ಲಿ ಆಲ್ಕೋಹಾಲ್ ಮಿಶ್ರಣವಾಗಿರುವುದು ತಿಳಿದುಬಂದಿದೆ. ಇದರಿಂದ ಅಘಾತಕೊಳಗಾದ ವೃದ್ಧೆ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯಿಂದ ಕೋಮಾ ಸ್ಥಿತಿಗೆ ತಲುಪಿದ್ದ ಮಗು ನಂತರ ಬೇತರಿಸಿಕೊಂಡಿದ್ದು, ಸದ್ಯ ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಮಗುವಿನ ಅಜ್ಜಿ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ತಡವಾಗಿ ಬಂದ ಶಿಕ್ಷಕಿಯ ಬಟ್ಟೆ ಹಿಡಿದೆಳೆದು ಥಳಿಸಿದ ಪ್ರಿನ್ಸ್ ಪಾಲ್

ಇದೇ ವೇಳೆ ಕಳೆದ ವರ್ಷ ಬ್ರಿಟನ್ ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಇಬ್ಬರು ಯುವತಿಯರು ತಮಾಷೆಯಾಗಿ 18 ತಿಂಗಳ ಮಗುವಿನ ಬಾಯಿಗೆ ಮದ್ಯದ ಬಾಟಲಿ ಇಟ್ಟು ವಿಡಿಯೋ ರೆಕಾರ್ಡ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಷಯ ಕೋರ್ಟ್​​ ಮೆಟ್ಟಿಲೇರಿತ್ತು. ಆದರೆ, ಇಬ್ಬರೂ ತಮಾಷೆಗಾಗಿ ಮಾಡಿದ್ದನ್ನು ಒಪ್ಪಿಕೊಂಡಿದ್ದರಿಂದ ಮತ್ತು ಮಗು ಆರೋಗ್ಯವಾಗಿದ್ದರಿಂದ ನ್ಯಾಯಾಲಯ ಜೈಲು ಶಿಕ್ಷೆಗೆ ಬದಲಾಗಿ ಸ್ವಲ್ಪ ದಂಡ ವಿಧಿಸಿತ್ತು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ