ಆರ್ಡರ್​ ಮಾಡಿದ್ದು ತಮಿಳು ಭಾಷೆಯಲ್ಲಿ, ಸಿಕ್ಕಿತು ಉಚಿತ ಊಟ! ಎಲ್ಲಿ ಗೊತ್ತಾ?

| Updated By: Rakesh Nayak Manchi

Updated on: Jun 06, 2022 | 3:58 PM

ತಮಿಳು ಭಾಷೆಯಲ್ಲಿ ಆಹಾರ ಆರ್ಡರ್ ಮಾಡಿದ್ದಕ್ಕೆ ಅಂಗಡಿ ಮಾಲೀಕ ಅಮೆರಿಕನ್ ಯೂಟ್ಯೂಬರ್​ಗೆ ಉಚಿತವಾಗಿ ಆಹಾರ ನೀಡಿದ್ದಾರೆ. ಇದರ ವಿಡಿಯೋವನ್ನು ಸ್ವತಃ ಯೂಟ್ಯೂಬರ್ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ.

ಆರ್ಡರ್​ ಮಾಡಿದ್ದು ತಮಿಳು ಭಾಷೆಯಲ್ಲಿ, ಸಿಕ್ಕಿತು ಉಚಿತ ಊಟ! ಎಲ್ಲಿ ಗೊತ್ತಾ?
ಅಮೇರಿಕನ್ ಯೂಟ್ಯೂಬರ್ ಅರೀಹ್ ಸ್ಮಿತ್
Image Credit source: Youtube
Follow us on

ಭಾರತದ ಸಂಸ್ಕೃತಿ ಮಾತ್ರವಲ್ಲದೆ ಕೆಲವು ಭಾಷೆಗಳು ಕೂಡ ವಿದೇಶಿಗರನ್ನು ಆಕರ್ಷಿಸುತ್ತದೆ, ಅಂಥ ಭಾಷೆಗಳಲ್ಲಿ ಕನ್ನಡ, ತಮಿಳು ಕೂಡ ಒಂದಾಗಿದೆ. ಅದರಂತೆ ಅಮೆರಿಕನ್ ಯೂಟ್ಯೂಬರ್ ಒಬ್ಬರು ತಮಿಳು (Tamil) ಭಾಷೆಯಲ್ಲಿ ಆಹಾರ ಆರ್ಡರ್ (Food Order)​ ಮಾಡಿದ್ದಕ್ಕೆ ಅವರಿಗೆ ರೆಸ್ಟೋರೆಂಟ್​ನಲ್ಲಿ ಉಚಿತವಾಗಿ ಊಟ (Free Meal) ನೀಡಲಾಗಿದೆ. ಇದನ್ನು ಸ್ವತಃ ಅವರೇ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಎಚ್ಚರ… ಸಾರ್ವಜನಿಕ ಸ್ಥಳದಲ್ಲಿ ಪ್ರಪೋಸ್ ಮಾಡುವಾಗ ಹೀಗೂ ಆದಿತು!

ಅಮೇರಿಕನ್ ಯೂಟ್ಯೂಬರ್ ಅರೀಹ್ ಸ್ಮಿತ್ ಅವರು ತಮಿಳು ಭಾಷೆಯಿಂದ ಆಕರ್ಷಿತರಾಗಿದ್ದಾರೆ. ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ Xiaomanyc ನಲ್ಲಿ ನ್ಯೂಯಾರ್ಕ್ ನಗರದ ಅತ್ಯಂತ ಪ್ರಸಿದ್ಧ ದೋಸೆ ಸ್ಟಾಲ್‌ಗೆ ಹೋಗುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರ ನಂತರ ಅವರು ತಮಿಳು ಆಹಾರದ ಅಂಗಡಿಗೆ ಭೇಟಿ ನೀಡುತ್ತಾರೆ ಮತ್ತು ತಮಿಳು ಭಾಷೆಯಲ್ಲಿ ಆರ್ಡರ್ ಮಾಡುತ್ತಾರೆ. ಇದೇ ಕಾರಣಕ್ಕಾಗಿ ಆ ಅಂಗಡಿ ಮಾಲೀಕ ಅರೀಗ್ ಅವರಿಗೆ ಉಚಿತ ಊಟವನ್ನು ನೀಡಿದ್ದಾರೆ.

ಯೂಟ್ಯೂಬರ್ ಅವರು ತಮ್ಮ ಅನುಭವವನ್ನು ವಿವರಿಸುತ್ತಾ, “ನಾನು ತಮಿಳು ಭಾಷೆಯಲ್ಲಿ ಆಕರ್ಷಿತನಾಗಿದ್ದೇನೆ. ಇದು ಇನ್ನೂ ಬಳಕೆಯಲ್ಲಿರುವ ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಭಾರತ ಮತ್ತು ಶ್ರೀಲಂಕಾ ಎರಡರಲ್ಲೂ ಮಾತನಾಡುವಾಗ ಇದು ವಾಸ್ತವವಾಗಿ ಅಮೇರಿಕಾದಲ್ಲಿ ಅಪರೂಪವಾಗಿದೆ. ಆದರೆ ನಾನು ನ್ಯೂಯಾರ್ಕ್ ನಗರದಲ್ಲಿ ಮತ್ತು ತಮಿಳು ಭಾಷಿಗರು ನಡೆಸುತ್ತಿರುವ ಕೆಲವು ರೆಸ್ಟೋರೆಂಟ್‌ಗಳನ್ನು ಹುಡುಕಿದ್ದೇನೆ” ಎಂದೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದು ವೈರಲ್

ವಿಡಿಯೋ (Video) ಅಪ್‌ಲೋಡ್ ಮಾಡಿದ ನಂತರ ಭಾರಿ ವೈರಲ್ (Viral) ಆಗಿದ್ದು, 900K ವೀಕ್ಷಣೆಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ವಿಡಿಯೋ ನೋಡಿದ ಕೆಲವರು ಅವರ ತಮಿಳು ಭಾಷೆಯನ್ನು ಹೊಗಳುತ್ತಿದ್ದಾರೆ.

ಇತರರು ಅರೀಹ್ ಸ್ಮಿತ್ ಪ್ರಯತ್ನಗಳಿಂದ ಪ್ರಭಾವಿತರಾಗಿದ್ದಾರೆ. ತಮಿಳು (ಮತ್ತು ಇತರ ದ್ರಾವಿಡ ಭಾಷೆಗಳು) ವಾಕ್ಯ ರಚನೆಯಿಂದ ವ್ಯಾಕರಣದಿಂದ ಎಲ್ಲಾ ರೀತಿಯಲ್ಲೂ ಸಂಪೂರ್ಣವಾಗಿ ವಿಭಿನ್ನವಾಗಿವೆ” ಎಂದು ಯೂಟ್ಯೂಬ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಿ:

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ