ಎಚ್ಚರ… ಸಾರ್ವಜನಿಕ ಸ್ಥಳದಲ್ಲಿ ಪ್ರಪೋಸ್ ಮಾಡುವಾಗ ಹೀಗೂ ಆದಿತು!

ಪ್ರೇಮಿಯೊಬ್ಬನು ತನ್ನ ಗೆಳತಿಗೆ ಪ್ರಪೋಸ್ ಮಾಡುವಾಗ ವ್ಯಕ್ತಿಯೊಬ್ಬರು ಅಡ್ಡಿಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಎಚ್ಚರ... ಸಾರ್ವಜನಿಕ ಸ್ಥಳದಲ್ಲಿ ಪ್ರಪೋಸ್ ಮಾಡುವಾಗ ಹೀಗೂ ಆದಿತು!
ಪ್ರಪೋಸ್ ಮಾಡುವಾಗ ಪ್ರೇಮಿಗಳಿಗೆ ಅಡ್ಡಿಪಡಿಸಿದ ಸಿಬ್ಬಂದಿ
Follow us
TV9 Web
| Updated By: Rakesh Nayak Manchi

Updated on:Jun 06, 2022 | 3:23 PM

ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ವಿಶೇಷ ಸ್ಥಳದಲ್ಲಿ ವಿಶೇಷವಾಗಿ ಪ್ರಪೋಸ್ ಮಾಡಲು ಬಯಸುತ್ತಾರೆ. ಅದರಂತೆ ಪ್ರೇಮಿಯೋರ್ವ ತನ್ನ ಗೆಳತಿಗೆ ಬೆಸ್ಟ್ ಪ್ಲೇಸ್​ನಲ್ಲಿ ಪ್ರಪೋಸ್ (Propose) ಮಾಡಲು ಮುಂದಾಗಿದ್ದಾನೆ. ಈ ವೇಳೆ ವೇಗವಾಗಿ ಓಡಿಬಂದ ವ್ಯಕ್ತಿಯೊಬ್ಬ  ಉಂಗುರ ತೊಡಿಸಲು ಅಡ್ಡಿಪಡಿಸಿದ್ದಾನೆ. ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.

ಇದನ್ನೂ ಓದಿ: Viral Video: ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದು ವೈರಲ್

ವೈರಲ್ ವಿಡಿಯೋ ನೋಡಿದಂತೆ, ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ವೇದಿಕೆಯಂತಿರುವ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಮೊಣಕಾಲಿನಲ್ಲಿ ಕುಳಿತುಕೊಂಡು ತನ್ನ ಗೆಳತಿಗೆ ಉಂಗುರು ಹಾಕಲು ಮುಂದಾಗಿದ್ದಾನೆ. ಈ ವೇಳೆ ಸ್ವಲ್ಪ ದೂರದಲ್ಲೇ ಇದ್ದ ಪಾರ್ಕ್​ ಸಿಬ್ಬಂದಿ ಓಡಿ ಬಂದು ಉಂಗುರವನ್ನು ಕಿತ್ತುಕೊಂಡು ಕೆಳಗೆ ಬಂದಿದ್ದಾರೆ. ಅಲ್ಲದೆ ಅಲ್ಲಿಂದ ಕೆಳಗೆ ಇಳಿಯುವಂತೆ ಪ್ರೇಮಿಗಳಿಗೆ ನಾಜೂಕಾಗಿ ಸೂಚಿಸಿರುವುದು ಬಹಳ ಚೆನ್ನಾಗಿತ್ತು. ಸಿಬ್ಬಂದಿಯ ಈ ನಡೆಯಿಂದ ಬೆರಗಾದ ಪ್ರೇಮಿಗಳು ಅಚ್ಚರಿಯಂತೆ ನೋಡಿಕೊಂಡು ಕೆಳಗೆ ಇಳಿದಿದ್ದಾರೆ. ಈ ವೇಳೆ ಸಿಬ್ಬಂದಿ ಉಂಗುರವನ್ನು ಮರಳಿ ನೀಡಿದ್ದಾರೆ.

ಇದನ್ನೂ ಓದಿ: Trending News: ಅಪರೂಪದ ಮರಿಗೆ ಜನ್ಮ ನೀಡಿದ ಆಮೆ, ಎಲ್ಲಿ ಗೊತ್ತಾ?

ಖುಷಿಯ ಸಂದರ್ಭದಲ್ಲಿ ಯಾರಾದರೂ ಅಡ್ಡಿಪಡಿಸಿದಾಗ ಸಂತೋಷ ಕಿತ್ತುಕೊಂಡಂತ್ತಾಗುತ್ತದೆ. ಅದರಂತೆ ಸಿಬ್ಬಂದಿಯು ಉಂಗುರ ಕಿತ್ತು ಕೆಳಗಿಳಿಯುವಂತೆ ಸೂಚಿಸಿರುವುದು ಪ್ರೇಮಿಗಳ ಪ್ರಪೋಸ್ ಮಾಡುವ ಮೂಡ್​ ಹಾಳು ಮಾಡಿರುವ ಸಾಧ್ಯತೆಯೂ ಇದೆ. ವೈರಲ್ ಕ್ಲಿಪ್ ಅನ್ನು ಮೂಲತಃ ರೆಡ್ಡಿಟರ್ ವಾಸ್ಗೆಟ್ಲಾನ್ ಅವರು ಪೋಸ್ಟ್ ಮಾಡಿದ್ದಾರೆ.

“ಸಿಬ್ಬಂದಿಯು ನನ್ನ ಉತ್ತಮ ಸ್ನೇಹಿತರ ಕ್ಷಣವನ್ನು ನಾಶಮಾಡಿದ್ದಾರೆ. ಅವರು ಮುಂಚಿತವಾಗಿ ಅನುಮತಿ ಕೇಳಿದ್ದರು” ಎಂದು ಬಳಕೆದಾರರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ವಿಡಿಯೋ ವೀಕ್ಷಿಸಿ: 

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Mon, 6 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ