Viral Video: ಬೈಕ್ ಸವಾರನೊಂದಿಗೆ ಜಗಳವಾಡಿ, ನಡುರಸ್ತೆಯಲ್ಲಿ ಡಿಕ್ಕಿ ಹೊಡೆದ ಸ್ಕಾರ್ಪಿಯೋ ಚಾಲಕ; ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ

ದೆಹಲಿಯಲ್ಲಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದ ಆಘಾತಕಾರಿ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Viral Video: ಬೈಕ್ ಸವಾರನೊಂದಿಗೆ ಜಗಳವಾಡಿ, ನಡುರಸ್ತೆಯಲ್ಲಿ ಡಿಕ್ಕಿ ಹೊಡೆದ ಸ್ಕಾರ್ಪಿಯೋ ಚಾಲಕ; ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ
ದೆಹಲಿಯ ರಸ್ತೆಯಲ್ಲಿ ಬಿದ್ದ ಬೈಕ್ ಸವಾರImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 06, 2022 | 2:23 PM

ನವದೆಹಲಿ: ದೆಹಲಿಯ ಅರ್ಜನ್​ಗಢ್ ಮೆಟ್ರೋ ನಿಲ್ದಾಣದ ಬಳಿ ಬೈಕ್ ಸವಾರರ ಗುಂಪಿನೊಂದಿಗೆ ತೀವ್ರ ಮಾತಿನ ಚಕಮಕಿಯ ನಂತರ ವ್ಯಕ್ತಿಯೊಬ್ಬ ತನ್ನ ಸ್ಕಾರ್ಪಿಯೋ ವಾಹನದಿಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯನ್ನು ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರರು ವಿಡಿಯೋ (Video Viral) ಮಾಡಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಪೊಲೀಸರು ಈ ವಿಷಯ ತಿಳಿದು ತನಿಖೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದ ಆಘಾತಕಾರಿ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೆಹಲಿ ರಸ್ತೆಯಲ್ಲಿ ಸ್ಕಾರ್ಪಿಯೋ ಕಾರನ್ನು ಓಡಿಸುವ ವ್ಯಕ್ತಿಯೊಂದಿಗೆ ಬೈಕ್ ಸವಾರರು ವಾಗ್ವಾದಕ್ಕಿಳಿದಾಗ ಸ್ಕಾರ್ಪಿಯೋ ಮತ್ತು ಬೈಕ್​ನ ಮಧ್ಯೆ ರೇಸಿಂಗ್ ಶುರುವಾಗುತ್ತದೆ. ಆಗ ಸ್ಕಾರ್ಪಿಯೋವನ್ನು ಹಿಂದಿಕ್ಕಿ ಮುಂದೆ ಹೋದ ಬೈಕ್ ಅನ್ನು ಓವರ್ ಟೇಕ್ ಮಾಡುವ ಸ್ಕಾರ್ಪಿಯೋ ಸವಾರ ತನ್ನೊಂದಿಗೆ ಜಗಳವಾಡಿದ ಆ ಬೈಕ್ ಸವಾರನ ಬೈಕ್​ಗೆ ಸ್ಕಾರ್ಪಿಯೋದಿಂದ ಗುದ್ದಿ ಮುಂದೆ ಹೋಗುತ್ತಾನೆ.

ಇದನ್ನೂ ಓದಿ: Viral Video: ಅಬ್ಬಬ್ಬಾ ಎಂಥಾ ಬಿಸಿಲು!; ಸ್ಕೂಟಿ ಸೀಟ್ ಮೇಲೆ ಬಿಸಿ ಬಿಸಿ ದೋಸೆ ಬೇಯಿಸಿದ ಯುವಕ

ಇದರಿಂದ ಕೆಳಗೆ ಬಿದ್ದ ಬೈಕ್ ಸವಾರ ಒಂದು ಕಡೆ ಬಿದ್ದರೆ ಆತನ ಬೈಕ್ ಇನ್ನೊಂದು ಕಡೆ ಬೀಳುತ್ತದೆ. ಅದೃಷ್ಟವಶಾತ್ ಆ ಚಾಲಕನಿಗೆ ಪ್ರಾಣಾಪಾಯವಾಗಿಲ್ಲ. ವೇಗವಾಗಿ ಬರುತ್ತಿದ್ದ ವಾಹನಗಳ ಮಧ್ಯೆ ಆ ಬೈಕ್ ಬಿದ್ದಿದ್ದರೆ ಆ ಚಾಲಕ ಉಳಿಯುವ ಚಾನ್ಸೇ ಇರಲಿಲ್ಲ. ಆದರೆ, ರಸ್ತೆಯ ಅಂಚಿನಲ್ಲಿ ಬಿದ್ದಿದ್ದರಿಂದ ತರಚಿದ ಗಾಯಗಳು ಬಿಟ್ಟರೆ ಹೆಚ್ಚೇನೂ ಗಾಯಗಳಾಗಿಲ್ಲ.

ಸ್ಕಾರ್ಪಿಯೋ ಚಾಲಕ ತನ್ನ ವಾಹನವನ್ನು ಉದ್ದೇಶಪೂರ್ವಕವಾಗಿ ತಿರುಗಿಸುವುದು ಮತ್ತು ಬದಿಯಿಂದ ಬೈಕ್ ಸವಾರರಲ್ಲಿ ಒಬ್ಬನಿಗೆ ಡಿಕ್ಕಿ ಹೊಡೆಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಡಿಕ್ಕಿ ಹೊಡೆದ ಕಾರು ವೇಗವಾಗಿ ಹೋಗುವಾಗ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.

ರಾಷ್ಟ್ರ ರಾಜಧಾನಿಯ ಅರ್ಜನ್‌ಗಢ್ ಮೆಟ್ರೋ ನಿಲ್ದಾಣದ ಕೆಳಗೆ ಭಾನುವಾರ ಬೆಳಗ್ಗೆಯಿಂದ ಈ ಘಟನೆ ನಡೆದಿದೆ. ಢಿಕ್ಕಿ ಹೊಡೆದು ಬಿದ್ದ ಬೈಕ್ ಸವಾರನನ್ನು ಸುಮಾರು 20 ವರ್ಷದ ಶ್ರೇಯಾಂಶ್ ಎಂದು ಗುರುತಿಸಲಾಗಿದೆ. ತನ್ನ ಸ್ನೇಹಿತರೊಂದಿಗೆ ಬೈಕಿಂಗ್ ಮುಗಿಸಿ ದೆಹಲಿಗೆ ಹಿಂತಿರುಗುತ್ತಿದ್ದ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್