ನಿಮಗಿದು ಗೊತ್ತೇ?; 73 ವರ್ಷಗಳಿಂದ ಭಾರತದ ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಜನರು!

| Updated By: ಸುಷ್ಮಾ ಚಕ್ರೆ

Updated on: May 11, 2022 | 6:14 PM

ಭಾಕ್ರಾ ರೈಲ್ವೆಯ ರೈಲಿನಲ್ಲಿ ಪ್ರಯಾಣಿಕರು ಕಳೆದ 73 ವರ್ಷಗಳಿಂದ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದಾರೆ. ಏನಿದರ ವಿಶೇಷತೆ? ಯಾಕೆ ಈ ಉಚಿತ ಪ್ರಯಾಣ? ಇಲ್ಲಿದೆ ಮಾಹಿತಿ

ನಿಮಗಿದು ಗೊತ್ತೇ?; 73 ವರ್ಷಗಳಿಂದ ಭಾರತದ ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಜನರು!
ರೈಲು
Follow us on

ನವದೆಹಲಿ: ರೈಲಿನಲ್ಲೇ ಹೆಚ್ಚು ಸಂಚಾರ ಮಾಡಲು ಇಷ್ಟಪಡುವವರು ಆಗಾಗ ಟಿಕೆಟ್ ಇಲ್ಲದೆಯೂ ಪ್ರಯಾಣ ಮಾಡಿರಬಹುದು. ರೈಲಿನಲ್ಲಿ ಟಿಕೆಟ್ (Train Ticket) ಇಲ್ಲದೆ ಪ್ರಯಾಣ ಮಾಡುವುದು ಹೊಸತೇನೂ ಅಲ್ಲ. ಆದರೆ, ಇಲ್ಲೊಂದು ರೈಲು ಭಾರತದಲ್ಲಿ 73 ವರ್ಷಗಳಿಂದ ತನ್ನ ಗ್ರಾಹಕರಿಗೆ ಉಚಿತ ಪ್ರಯಾಣವನ್ನು ಒದಗಿಸುತ್ತಿದೆ. ಈ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಖರೀದಿ ಮಾಡಬೇಕಾಗಿಲ್ಲ. ಇಂತಹ ರೈಲೂ ಇದೆಯೇ? ಇದರಿಂದ ರೈಲ್ವೆ ಇಲಾಖೆಗೆ (Indian Railways) ನಷ್ಟ ಆಗುವುದಿಲ್ಲವೇ? ಎಂಬ ಸಾಕಷ್ಟು ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಭಾಕ್ರಾ ರೈಲ್ವೆಯ ರೈಲಿನಲ್ಲಿ ಪ್ರಯಾಣಿಕರು ಕಳೆದ 73 ವರ್ಷಗಳಿಂದ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಪ್ರಯಾಣಿಕರು ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಗಡಿಗಳ ನಡುವೆ ಈ ವಿಶೇಷ ರೈಲನ್ನು ನಂಗಲ್ ಮತ್ತು ಭಾಕರ್ ನಡುವೆ ಪ್ರಯಾಣಿಸಲು ಬಳಸುತ್ತಾರೆ. ಭಾಕ್ರಾ ರೈಲ್ವೆಯು 25 ಹಳ್ಳಿಗಳಿಂದ ಸುಮಾರು 300 ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಈ ಉಚಿತ ರೈಲಿನಿಂದ ಶಾಲಾ ಮಕ್ಕಳಿಗೆ ಬಹಳಷ್ಟು ಪ್ರಯೋಜನವಾಗಿದೆ.

ಭಾಕ್ರಾ-ನಂಗಲ್ ರೈಲ್ವೆ ಸೇವೆಯನ್ನು 1948ರಲ್ಲಿ ಸ್ಥಾಪಿಸಲಾಯಿತು. ಭಾಕ್ರಾ ನಂಗಲ್ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ನಂಗಲ್ ಮತ್ತು ಭಾಕರ್ ನಡುವೆ ಚಲಿಸಲು ಯಾವುದೇ ಸಾರಿಗೆಯಾಗಲಿ, ಮಾರ್ಗವಾಗಲಿ ಇರಲಿಲ್ಲ. ಹೀಗಾಗಿ ವಿಶೇಷ ರೈಲು ಮಾರ್ಗವನ್ನು ಸ್ಥಾಪಿಸಲಾಯಿತು. ಇದರ ಪರಿಣಾಮವಾಗಿ, ಭಾರತೀಯ ರೈಲ್ವೆ ಇಲಾಖೆ ಭಾರೀ ಯಂತ್ರೋಪಕರಣಗಳು ಮತ್ತು ಜನರ ಸಾಗಣೆಯನ್ನು ಸರಳಗೊಳಿಸಲು ಈ ಮಾರ್ಗದ ಉದ್ದಕ್ಕೂ ರೈಲ್ವೆ ಹಳಿಯನ್ನು ನಿರ್ಮಿಸಲು ನಿರ್ಧರಿಸಿತು.

ಇದನ್ನೂ ಓದಿ
Love Story: ಕತ್ತಲೆಯಲ್ಲಿ ಪ್ರೇಯಸಿಯನ್ನು ಭೇಟಿಯಾಗಲು ಇಡೀ ಗ್ರಾಮದ ಕರೆಂಟ್ ತೆಗೆದ ಭೂಪ; ಕೋಪಗೊಂಡ ಜನರು ಮಾಡಿದ್ದೇನು?
Viral Video: 28 ಹೆಂಡತಿಯರು, 135 ಮಕ್ಕಳು, 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವೃದ್ಧ; ವಿಡಿಯೋ ವೈರಲ್!
Viral Video: ರಸ್ತೆ ಮಧ್ಯೆ ಕೊಳಲಿನಲ್ಲಿ ಸಂದೇಸೆ ಆತೇ ಹೇ ಹಾಡು ನುಡಿಸಿದ ಪೊಲೀಸ್; ವಿಡಿಯೋ ವೈರಲ್
Viral Video: ಮೊದಲ ಬಾರಿ ಅಮ್ಮನ ಪಕ್ಕ ಕುಳಿತು ವಿಮಾನ ಹಾರಿಸಿದ ಮಗ; ಪೈಲಟ್ ವಿಡಿಯೋ ವೈರಲ್

ಈ ರೈಲು ಮೂಲತಃ ಉಗಿ ಇಂಜಿನ್‌ಗಳಿಂದ ಚಲಿಸುತ್ತಿತ್ತು. ಆದರೆ 1953ರಲ್ಲಿ ಈ ರೈಲನ್ನು ಆಧುನೀಕರಿಸಲು ಮೂರು ಆಧುನಿಕ ಎಂಜಿನ್‌ಗಳನ್ನು ಅಮೆರಿಕದಿಂದ ಸ್ವಾಧೀನಪಡಿಸಿಕೊಳ್ಳಲಾಯಿತು. ಭಾರತೀಯ ರೈಲ್ವೆ ಇಂಜಿನ್‌ನ 5 ರೂಪಾಂತರಗಳನ್ನು ಪ್ರಸ್ತಾಪಿಸಿದೆ. ಆದರೆ ವಿಶೇಷ ರೈಲು ಇನ್ನೂ 60 ವರ್ಷ ಹಳೆಯ ಎಂಜಿನ್‌ಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

ಪ್ರತಿದಿನ ಬೆಳಗ್ಗೆ 7.05ಕ್ಕೆ ಈ ಉಚಿತ ರೈಲು ನಂಗಲ್ ರೈಲ್ವೆ ನಿಲ್ದಾಣದಿಂದ ಹೊರಟು 8.20ಕ್ಕೆ ಭಾಕರ್‌ಗೆ ಆಗಮಿಸುತ್ತದೆ. ಇದು ಮಧ್ಯಾಹ್ನ 3.05ಕ್ಕೆ ನಂಗಲ್‌ನಿಂದ ನಿರ್ಗಮಿಸುತ್ತದೆ.

ನಂಗಲ್ ಮತ್ತು ಭಾಕರ್ ನಡುವೆ ಉಚಿತ ಸಂಚಾರವೇಕೆ?:
ಭಾಕರ್-ನಂಗಲ್ ಐತಿಹಾಸಿಕ ರೈಲು ಶಿವಾಲಿಕ್ ಬೆಟ್ಟಗಳ ಮೂಲಕ 13 ಕಿಲೋಮೀಟರ್ ಪ್ರಯಾಣಿಸುತ್ತದೆ. ಇದು ನೆಹ್ಲಾ ನಿಲ್ದಾಣಕ್ಕೆ ಬಂದು ಪಂಜಾಬ್‌ನ ನಂಗಲ್ ಅಣೆಕಟ್ಟಿಗೆ ಪ್ರಯಾಣಿಸುತ್ತದೆ. ರೈಲು ಗಂಟೆಗೆ 18ರಿಂದ 20 ಗ್ಯಾಲನ್ ಡೀಸೆಲ್ ಅನ್ನು ಬಳಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (BBMB) ವೆಚ್ಚದ ಹೊರತಾಗಿಯೂ ಅದನ್ನು ಉಚಿತವಾಗಿ ಇರಿಸಲು ನಿರ್ಧರಿಸಿದೆ. ಇಲ್ಲಿನ ಹೆಚ್ಚಿನ ಪ್ರಯಾಣಿಕರು ಸಹಾಯಕರು, ಪಂಪ್ ಆಪರೇಟರ್‌ಗಳು, ಬಡಗಿಗಳು ಮತ್ತು ಇತರ ಅಣೆಕಟ್ಟಿನ ಕೆಲಸಗಾರರಾಗಿದ್ದು, ಅವರಿಗೆ ಉಚಿತ ಸಂಚಾರಕ್ಕೆ ವ್ಯವಸ್ಥೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

BBMB ಅಧಿಕಾರಿಗಳು ಆರ್ಥಿಕ ನಷ್ಟದ ಕಾರಣದಿಂದ ಈ ಉಚಿತ ಸೇವೆಯನ್ನು 2011ರಲ್ಲಿ ಕೊನೆಗೊಳಿಸಲು ನಿರ್ಧರಿಸಿದರು. ಆದರೂ ಈ ರೈಲನ್ನು ಆದಾಯದ ಮೂಲವಾಗಿಸಲು ರೈಲ್ವೆ ಇಲಾಖೆ ಬಯಸಲಿಲ್ಲ. ಅದರ ಬದಲಿಗೆ ಪರಂಪರೆ ಮತ್ತು ಸಂಪ್ರದಾಯವನ್ನು ಸಂರಕ್ಷಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿತು. ಹೀಗಾಗಿ, ಇಂದಿಗೂ ಉಚಿತವಾಗಿಯೇ ರೈಲ್ವೆ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ