Viral Video: ಮೊದಲ ಬಾರಿ ಅಮ್ಮನ ಪಕ್ಕ ಕುಳಿತು ವಿಮಾನ ಹಾರಿಸಿದ ಮಗ; ಪೈಲಟ್ ವಿಡಿಯೋ ವೈರಲ್

Indigo Airlines: ಆನ್‌ಲೈನ್‌ನಲ್ಲಿ 7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ ಈ ವಿಡಿಯೋ ವೈರಲ್ ಆಗಿದೆ. ಅಮ್ಮನ ವೃತ್ತಿಯನ್ನೇ ಮಗನೂ ಆಯ್ಕೆ ಮಾಡಿಕೊಂಡಿದ್ದು ಆತ ಆಕೆಗೆ ನೀಡುವ ಅತ್ಯುತ್ತಮ ಉಡುಗೊರೆಯಾಗಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

Viral Video: ಮೊದಲ ಬಾರಿ ಅಮ್ಮನ ಪಕ್ಕ ಕುಳಿತು ವಿಮಾನ ಹಾರಿಸಿದ ಮಗ; ಪೈಲಟ್ ವಿಡಿಯೋ ವೈರಲ್
ಅಮ್ಮನನ್ನು ಬರಮಾಡಿಕೊಂಡ ಪೈಲಟ್ ಮಗ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 10, 2022 | 5:40 PM

ಹೆತ್ತವರಿಗೆ ತಮ್ಮ ಮಕ್ಕಳು ತಮಗಿಂತ ದೊಡ್ಡ ಸಾಧನೆ ಮಾಡುವುದನ್ನು, ಅವರು ದಿನದಿಂದ ದಿನಕ್ಕೆ ಉನ್ನತ ಮಟ್ಟಕ್ಕೆ ಬೆಳೆಯುವುದನ್ನು ನೋಡುವಾಗ ಆಗುವ ಸಂತೋಷ ಕೋಟಿ ಕೊಟ್ಟರೂ ಸಿಗಲಾರದು. ಪ್ರತಿಯೊಬ್ಬ ತಂದೆ-ತಾಯಿಯೂ ತಮ್ಮ ಮಕ್ಕಳ ಖುಷಿಯ ಬಗ್ಗೆಯೇ ಸದಾ ಯೋಚನೆ ಮಾಡುತ್ತಾರೆ. ಅದರಲ್ಲೂ ತಮ್ಮ ಮಕ್ಕಳು ತಾವು ನಡೆದ ಹಾದಿಯಲ್ಲೇ ನಡೆಯುತ್ತಿದ್ದಾರೆ, ತಮ್ಮ ಹೆಜ್ಜೆಯನ್ನೇ ಅನುಸರಿಸುತ್ತಿದ್ದಾರೆ ಎಂದರೆ ಅಪ್ಪ-ಅಮ್ಮನಿಗೆ ಅದಕ್ಕಿಂತ ದೊಡ್ಡ ಹೆಮ್ಮೆ ಮತ್ತೊಂದಿಲ್ಲ. ಎರಡು ದಿನಗಳ ಹಿಂದಷ್ಟೇ ತಾಯಂದಿರ ದಿನವನ್ನು ಆಚರಿಸಲಾಗಿದೆ. ಇದೀಗ ತಾಯಂದಿರ ದಿನದಂದು (Mother’s Day) ಇಂಡಿಗೋ (Indigo) ವಿಮಾನದಲ್ಲಿ ಮಗನೇ ತನ್ನ ತಾಯಿಗೆ ಮೊದಲ ಬಾರಿಗೆ ಕೋ -ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ಯುವಕರೊಬ್ಬರು ತನ್ನ ತಾಯಿಯಂತೆಯೇ ಪೈಲಟ್ ವೃತ್ತಿಯಲ್ಲಿ ಮುಂದುವರೆಯಬೇಕೆಂಬ ಉದ್ದೇಶದಿಂದ ಅಮ್ಮನನ್ನೇ ಆದರ್ಶವಾಗಿಟ್ಟುಕೊಂಡು ಪೈಲಟ್ ಆಗಿ ನೇಮಕವಾಗಿದ್ದರು. ಆದರೆ, ಇದುವರೆಗೂ ಅವರಿಬ್ಬರೂ ಎಂದೂ ಒಟ್ಟಿಗೇ ಕೆಲಸ ಮಾಡಲು ಅವಕಾಶ ಒದಗಿಬಂದಿರಲಿಲ್ಲ. ಆದರೆ, ವಿಶ್ವ ಅಮ್ಮಂದಿರ ದಿನದ ಪ್ರಯುಕ್ತ ಇಂಡಿಗೋ ವಿಮಾನ ತನ್ನ ಸಿಬ್ಬಂದಿಯಾದ ತಾಯಿ- ಮಗನಿಗೆ ಒಟ್ಟಿಗೇ ವಿಮಾನ ಹಾರಾಟ ಮಾಡಲು ಅವಕಾಶ ನೀಡಿತ್ತು. ಹೀಗಾಗಿ, ಅಮ್ಮನಿಗೆ ಮಗನೇ ಕೋ ಪೈಲಟ್ ಆದ ಅಮ್ಮ-ಮಗನ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ
Image
Guinness World Record: ವಿಶ್ವದ ಅತಿ ದೊಡ್ಡ ಪೆನ್ ನಿರ್ಮಿಸಿದ ಗಿನ್ನೆಸ್ ದಾಖಲೆ ಬರೆದ ಭಾರತೀಯ; ಏನಿದರ ವಿಶೇಷತೆ?
Image
Viral News: ಕರೆಂಟ್ ಹೋಗಿದ್ದರಿಂದ ಮಂಟಪದಲ್ಲಿ ಮದುಮಗಳೇ ಅದಲು-ಬದಲು; ಮದುವೆಯಾದ ಮೇಲೆ ಸತ್ಯ ಬಯಲು!
Image
Viral Video: ಮಳೆ ನೀರು ತುಂಬಿದ್ದ ಮಂಟಪದಲ್ಲೇ ಸಪ್ತಪದಿ ತುಳಿದ ದಂಪತಿ; ವೈರಲ್ ಆಯ್ತು ವಿಡಿಯೋ
Image
Viral News: ಮದುಮಗ ಶೇರ್ವಾನಿ ಧರಿಸಿದ್ದೇ ತಪ್ಪಾಯ್ತು!; ಮಂಟಪದಲ್ಲಿ ಕಲ್ಲಿನಿಂದ ಹೊಡೆದು ವಧುವಿನ ಮನೆಯವರ ಗಲಾಟೆ

ತಾಯಂದಿರ ದಿನದ ಸಂದರ್ಭದಲ್ಲಿ, ಇಂಡಿಗೋ ಪೈಲಟ್ ತನ್ನ ತಾಯಿಗಾಗಿ ವಿಮಾನದಲ್ಲಿ ವಿಶೇಷ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ. ಇಂಡಿಗೋ ವಿಮಾನದ ಫಸ್ಟ್ ಆಫೀಸರ್ ಅಮರ್ ಠಾಕೂರ್ ಅವರು ತಮ್ಮ ತಾಯಿಯನ್ನು ಪೈಲಟ್ ಸಮವಸ್ತ್ರದಲ್ಲಿ ಹೂವುಗಳೊಂದಿಗೆ ಸ್ವಾಗತಿಸುತ್ತಿರುವ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 24 ವರ್ಷದ ಠಾಕೂರ್ ಅವರು ನನ್ನ ತಾಯಿಯ ಅನೇಕ ವಿಮಾನಗಳಲ್ಲಿ ನಾನು ಪ್ರಯಾಣಿಕನಾಗಿ ಹಾರಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ಆಕೆಯ ಪಕ್ಕದಲ್ಲೇ ಕುಳಿತು ಪೈಲಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ.

ಈ ವಿಮಾನದಲ್ಲಿ ಪ್ರಯಾಣಿಸುತ್ತಿರುವವರೆಲ್ಲರಿಗೂ ನಮಸ್ಕಾರ. ಇದು ನಿಮ್ಮ ಫಸ್ಟ್​ ಆಫೀಸರ್ ಅಮನ್ ಠಾಕೂರ್. ದಯವಿಟ್ಟು ನಾನು ಸ್ವಲ್ಪ ಸಮಯದವರೆಗೆ ನಿಮ್ಮ ಗಮನವನ್ನು ಇತ್ತ ಹರಿಸಿ ಎಂದು ಕೋರುತ್ತೇನೆ. ನಮಗೆಲ್ಲರಿಗೂ ತಿಳಿದಿರುವಂತೆ ತಾಯಂದಿರ ದಿನವು ಅತ್ಯಂತ ವಿಶೇಷವಾದ ದಿನವಾಗಿದೆ. ನೀವು ನಿಮ್ಮ ಎಲ್ಲಾ ಪ್ರೀತಿ ಮತ್ತು ಗೌರವಗಳನ್ನು ನಿಮ್ಮ ತಾಯಿಗೆ ಸುರಿಯಬೇಕು. ತಾಯಂದಿರ ದಿನದಂದು ನನ್ನ ಅಮ್ಮನಿಗೆ ಸಣ್ಣ ನಮನ ಸಲ್ಲಿಸಲು ನಾನು ಬಯಸುತ್ತೇನೆ. ಅಮ್ಮಾ, ನೀವು ನನಗಾಗಿ ಮಾಡಿದ ಎಲ್ಲ ತ್ಯಾಗಕ್ಕೂ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ 7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ ಈ ವಿಡಿಯೋ ವೈರಲ್ ಆಗಿದೆ. ಅಮ್ಮನ ವೃತ್ತಿಯನ್ನೇ ಮಗನೂ ಆಯ್ಕೆ ಮಾಡಿಕೊಂಡಿದ್ದು ಆತ ಆಕೆಗೆ ನೀಡುವ ಅತ್ಯುತ್ತಮ ಉಡುಗೊರೆಯಾಗಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ವಾವ್! ಎಂತಹ ಸುಂದರ ದೃಶ್ಯ. ಹೆಮ್ಮೆಯ ತಾಯಿಯ ಹೊಳೆಯುವ ಮುಖವನ್ನು ನೋಡಲು ಖುಷಿಯಾಗುತ್ತಿದೆ. ದೇವರು ನಿಮ್ಮಿಬ್ಬರನ್ನು ಆಶೀರ್ವದಿಸಲಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Tue, 10 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ