Viral Video: ಚೆನಾಬ್ ನದಿಯಲ್ಲಿ ಸಿಲುಕಿದ್ದ ಯುವಕರನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಸೈನಿಕರು; ವಿಡಿಯೋ ವೈರಲ್

Viral Video: ಚೆನಾಬ್ ನದಿಯಲ್ಲಿ ಸಿಲುಕಿದ್ದ ಯುವಕರನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಸೈನಿಕರು; ವಿಡಿಯೋ ವೈರಲ್
ಯುವಕರನ್ನು ಭಾರತೀಯ ಸೇನೆ ರಕ್ಷಿಸಿದ ವಿಡಿಯೋ

ಚೆನಾಬ್ ನದಿಯ ಬಲವಾದ ನೀರಿನ ಪ್ರವಾಹದಲ್ಲಿ ಇಬ್ಬರು ಯುವಕರು ಸಿಲುಕಿದ್ದರು. ಅದೃಷ್ಟವಶಾತ್, ಪೊಲೀಸ್ ಸಿಬ್ಬಂದಿ ಯುವಕರನ್ನು ಸುರಕ್ಷಿತವಾಗಿ ಚೆನಾಬ್ ನದಿಯಿಂದ ಹೊರ ತಂದಿದ್ದಾರೆ.

TV9kannada Web Team

| Edited By: Sushma Chakre

May 10, 2022 | 8:14 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ಭಾರತೀಯ ಸೇನೆ (Indian Army) ಜನರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಧೈರ್ಯದಿಂದ ಯುವಕರನ್ನು ರಕ್ಷಿಸಿದ ಫೋಟೋಗಳನ್ನು ಭಾರತೀಯ ಸೇನೆ ಹಂಚಿಕೊಂಡಿದೆ. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ (Viral Video) ಭಾರೀ ವೈರಲ್ ಆಗಿದ್ದು, ಸೇನಾ ಸಿಬ್ಬಂದಿಯ ಧೈರ್ಯ ಮತ್ತು ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಚೆನಾಬ್ ನದಿಯ ಬಲವಾದ ನೀರಿನ ಪ್ರವಾಹದಲ್ಲಿ ಇಬ್ಬರು ಯುವಕರು ಸಿಲುಕಿದ್ದರು. ಅದೃಷ್ಟವಶಾತ್, ಪೊಲೀಸ್ ಸಿಬ್ಬಂದಿ ಯುವಕರನ್ನು ಸುರಕ್ಷಿತವಾಗಿ ಚೆನಾಬ್ ನದಿಯಿಂದ ಹೊರ ತಂದಿದ್ದಾರೆ. ಈ ವಿಡಿಯೋ ಕ್ಲಿಪ್ ಅನ್ನು ಭಾರತೀಯ ಸೇನೆಯ ಉತ್ತರ ಕಮಾಂಡ್‌ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. 16 ಕಾರ್ಪ್ಸ್ ತನ್ನ ಟ್ವೀಟ್‌ನಲ್ಲಿ ನದಿಯಲ್ಲಿ ನೀರಿನ ಮಟ್ಟವು ವೇಗವಾಗಿ ಏರುತ್ತಿದೆ ಎಂದು ಉಲ್ಲೇಖಿಸಿದೆ.

ಕಿಶ್ತ್ವಾರ್ ಜಿಲ್ಲೆಯ ಪದ್ದರ್ ವಿಲ್ ಸೋಹಲ್ ಬಳಿ ಚೆನಾಬ್ ನದಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಯುವಕರನ್ನು ಭಾರತೀಯ ಸೇನೆಯು ಧೈರ್ಯದಿಂದ ರಕ್ಷಿಸಿದೆ. ನೀರಿನ ಮಟ್ಟವು ವೇಗವಾಗಿ ಏರುತ್ತಿದ್ದಂತೆ ಸೈನಿಕರು ನದಿಗೆ ಅಡ್ಡಲಾಗಿ ರ‍್ಯಾಪಲ್ ಮಾಡಿ ಯುವಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಇದರ ಒಂದು ಫೋಟೋದಲ್ಲಿ ನದಿಯ ಮಧ್ಯದಲ್ಲಿ ಅಗೆಯುವ ಯಂತ್ರವನ್ನು ಸಹ ನೋಡಬಹುದಾಗಿದೆ. ಸುತ್ತಲೂ ಇದ್ದ ಜನರು ನದಿಯ ದಡದಿಂದ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದಾರೆ. ಸೇನಾಧಿಕಾರಿಯೊಬ್ಬರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ಮತ್ತೊಂದು ಚಿತ್ರ ತೋರಿಸುತ್ತದೆ.

ನಾಗರಿಕ ಆಡಳಿತದ ಮೂಲಕ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಸೇನಾ ಯೋಧರು ಪೊಲೀಸರೊಂದಿಗೆ ಸೇರಿಕೊಂಡರು. ರಕ್ಷಣಾ ಕಾರ್ಯಾಚರಣೆಯ ವೀಡಿಯೋದಲ್ಲಿ ಸೈನಿಕರು ಇಬ್ಬರನ್ನು ರಕ್ಷಿಸಲು ನದಿಗೆ ಅಡ್ಡಲಾಗಿ ರಂಪಾಟ ಮಾಡುವುದನ್ನು ತೋರಿಸುತ್ತದೆ. ಏಕೆಂದರೆ ಬಲವಾದ ನೀರಿನ ಪ್ರವಾಹವು ಅಬ್ಬರಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ಭಾರತೀಯ ಸೇನೆ ಪ್ರಶಂಸೆಗೆ ಪಾತ್ರವಾಗಿದೆ. ಭಾನುವಾರ ಭಾರತೀಯ ಸೇನೆಯ 16 ನೇ ಕಾರ್ಪ್ಸ್ ಧೈರ್ಯದಿಂದ ರಕ್ಷಿಸುವ ಚಿತ್ರಗಳನ್ನು ಹಂಚಿಕೊಂಡಿದೆ.

ರಕ್ಷಣಾ ಕಾರ್ಯಾಚರಣೆಯ ವೀಡಿಯೋದಲ್ಲಿ ಸೇನೆಯ ಅಧಿಕಾರಿಯೊಬ್ಬರು ಕತ್ತಲೆಯಲ್ಲಿ ನದಿಯನ್ನು ದಾಟುತ್ತಿರುವುದನ್ನು ತೋರಿಸುತ್ತದೆ. ಅದರ ಕೆಳಗೆ ಕೆಲವು ಅಡಿಗಳಷ್ಟು ಬಲವಾದ ನೀರಿನ ತೊರೆ ಕೂಡ ಘರ್ಜಿಸುತ್ತಿರುವುದು ಕಂಡುಬರುತ್ತದೆ. ಅದೃಷ್ಟವಶಾತ್ ಪೊಲೀಸ್ ಸಿಬ್ಬಂದಿ ಚೆನಾಬ್ ನದಿಯಿಂದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ನಾಗರಿಕ ಆಡಳಿತದ ಮೂಲಕ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಸೇನಾ ಸಿಬ್ಬಂದಿ ಪೊಲೀಸರೊಂದಿಗೆ ಸೇರಿಕೊಂಡರು. ಇದೇ ವೇಳೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಇಬ್ಬರನ್ನು ರಕ್ಷಿಸಿದ ಸೇನಾ ಸಿಬ್ಬಂದಿಯ ಶೌರ್ಯವನ್ನು ಟ್ವಿಟರ್ ಶ್ಲಾಘಿಸುತ್ತಿದೆ. “ಒಳ್ಳೆಯ ಕೆಲಸ”, “ಉತ್ತಮ ಕೆಲಸ”, “ಅದ್ಭುತ” ಎಂಬುದಾಗಿ ನೆಟಿಜನ್‌ಗಳು ಕೆಲವು ಟ್ವೀಟ್‌ಗಳ ಮೂಲಕ ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada