Viral Video: ರಸ್ತೆ ಮಧ್ಯೆ ಕೊಳಲಿನಲ್ಲಿ ಸಂದೇಸೆ ಆತೇ ಹೇ ಹಾಡು ನುಡಿಸಿದ ಪೊಲೀಸ್; ವಿಡಿಯೋ ವೈರಲ್

ರಸ್ತೆಯ ಮಧ್ಯೆ ಚಿತ್ರೀಕರಿಸಲಾದ ವಿಡಿಯೋದಲ್ಲಿ ಪೋಲೀಸ್ ಒಬ್ಬರು ಕೊಳಲಿನ ಮೂಲಕ ಈ ಪ್ರಸಿದ್ಧ ಹಾಡನ್ನು ಸಲೀಸಾಗಿ ನುಡಿಸುತ್ತಿರುವುದನ್ನು ನೋಡಬಹುದು.

Viral Video: ರಸ್ತೆ ಮಧ್ಯೆ ಕೊಳಲಿನಲ್ಲಿ ಸಂದೇಸೆ ಆತೇ ಹೇ ಹಾಡು ನುಡಿಸಿದ ಪೊಲೀಸ್; ವಿಡಿಯೋ ವೈರಲ್
ಬಾರ್ಡರ್ ಸಿನಿಮಾದ ಹಾಡನ್ನು ನುಡಿಸುತ್ತಿರುವ ಪೊಲೀಸ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 11, 2022 | 1:37 PM

ಸೋಷಿಯಲ್ ಮೀಡಿಯಾದಲ್ಲಿ ಸುಮ್ಮನೆ ಕಣ್ಣಾಡಿಸಿದರೂ ಸಾಕು ನೂರಾರು ಮನಸಿಗೆ ತಾಕುವ ವಿಡಿಯೋಗಳು ಕಾಣಸಿಗುತ್ತವೆ. 1997ರಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ ಬಾರ್ಡರ್‌ (Border Movie) ಈಗಲೂ ತನ್ನ ಪ್ರಸಿದ್ಧಿಯನ್ನು ಕಳೆದುಕೊಂಡಿಲ್ಲ. ಈ ಸಿನಿಮಾ ನೋಡಿದರೆ ಈಗಲೂ ಮೈ ನವಿರೇಳುತ್ತದೆ. ಮುಂಬೈನ ಪೊಲೀಸ್ ಕಾನ್​ಸ್ಟೆಬಲ್ ಇದೇ ಬಾರ್ಡರ್ ಸಿನಿಮಾದ ‘ಸಂದೇಸೆ ಆತೇ ಹೇ’ ನುಡಿಸುತ್ತಿರುವ ಹೃದಯಸ್ಪರ್ಶಿ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ರಸ್ತೆಯ ಮಧ್ಯೆ ಚಿತ್ರೀಕರಿಸಲಾದ ವಿಡಿಯೋದಲ್ಲಿ ಪೋಲೀಸ್ ಒಬ್ಬರು ಕೊಳಲಿನ ಮೂಲಕ ಈ ಪ್ರಸಿದ್ಧ ಹಾಡನ್ನು ಸಲೀಸಾಗಿ ನುಡಿಸುತ್ತಿರುವುದನ್ನು ನೋಡಬಹುದು. ಒಬ್ಬ ಟ್ರಾಫಿಕ್ ಪೋಲೀಸ್ ಕೂಡ ಅವರ ಪಕ್ಕದಲ್ಲಿ ನಿಂತಿದ್ದಾರೆ. ಮೂಲ ಹಾಡು ಪ್ಲೇ ಆಗುತ್ತಿರುವ ರಸ್ತೆಯಲ್ಲಿ ಫೋನ್ ಮತ್ತು ಬ್ಲೂಟೂತ್ ಸ್ಪೀಕರ್ ಅನ್ನು ಸಹ ಇರಿಸಲಾಗುತ್ತದೆ.

ಈ ವಿಡಿಯೋವನ್ನು ವಡಾಲಾ ಮಾಟುಂಗಾ ಸಿಯಾನ್ ಫೋರಮ್ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದೆ. ಈ ಪೋಸ್ಟ್‌ನ ಶೀರ್ಷಿಕೆಯ ಪ್ರಕಾರ, ಮುಂಬೈನ ವಡಾಲಾದ ರಫಿ ಅಹ್ಮದ್ ಕಿದ್ವಾಯಿ ಮಾರ್ಗದಲ್ಲಿ ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ.

ಈ ವಿಡಿಯೋ ವೈರಲ್ ಆಗಿದೆ. ಈ ಮ್ಯೂಸಿಕ್ ಅನ್ನು ಜನರು ಕೂಡ ಬಹಳ ಇಷ್ಟಪಟ್ಟಿದ್ದಾರೆ. ಪೊಲೀಸ್​ ಯೂನಿಫಾರಂನಲ್ಲಿರುವವರು ಕೃಷ್ಣನಂತೆ ಕೊಳಲಿನಲ್ಲಿ ಮ್ಯೂಸಿಕ್ ನುಡಿಸುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ