Smriti Irani: ವೈರಲ್ ವಿಡಿಯೋ ಹಂಚಿಕೊಂಡು ಕುತೂಹಲಕಾರಿ ಕ್ಯಾಪ್ಶನ್ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

Viral Video: ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ವಿವಿಧ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುವ ಅವರು ಜನರ ಗಮನಸೆಳೆಯುತ್ತಾರೆ. ಇತ್ತೀಚೆಗೆ ಕೇಂದ್ರ ಸಚಿವೆ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.

Smriti Irani: ವೈರಲ್ ವಿಡಿಯೋ ಹಂಚಿಕೊಂಡು ಕುತೂಹಲಕಾರಿ ಕ್ಯಾಪ್ಶನ್ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಸ್ಮೃತಿ ಇರಾನಿ (ಸಂಗ್ರಹ ಚಿತ್ರ)
Image Credit source: Image Instagrammed by Mouni Roy
Edited By:

Updated on: May 11, 2022 | 3:18 PM

ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ವಿಶೇಷ ಪೋಸ್ಟ್​ಗಳನ್ನು ಹಂಚಿಕೊಳ್ಳುವ ಅವರು, ಅದಕ್ಕೆ ವಿಭಿನ್ನ ಶೀರ್ಷಿಕೆಗಳನ್ನು ನೀಡಿ ಜನರ ಗಮನ ಸೆಳೆಯುತ್ತಾರೆ. ತಮ್ಮ ಇಲಾಖೆಯ ಕೆಲಸಗಳ ನಡುವೆಯೂ ಅವರು ನೆಟ್ಟಿಗರೊಂದಿಗೆ ಇಂತಹ ಸಂವಾದ ನಡೆಸುವುದು ಮಾಮೂಲು. ವೈರಲ್ ವಿಡಿಯೋಗಳಿಂದ ಹಿಡಿದು, ಪ್ರೇರಣಾದಾಯಿ ಪೋಸ್ಟ್​ಗಳವರೆಗೆ ಸ್ಮೃತಿ ಹಲವು ವಿಚಾರಗಳನ್ನು ಶೇರ್ ಮಾಡುತ್ತಾರೆ. ಇತ್ತೀಚೆಗೆ ಅವರು ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ (Viral) ಆಗಿದೆ. ಅದಕ್ಕೆ ಅವರು ನೀಡಿದ ಕ್ಯಾಪ್ಶನ್ ಕೂಡ ಗಮನಸೆಳೆದಿದೆ. ‘ಜೀವನದಲ್ಲಿ ಮಜಾ ಅಂದರೆ ಇದು’ ಎಂದು ಶೀರ್ಷಿಕೆ ನೀಡಿ ಮುದ್ದಾದ ವಿಡಿಯೋ ಹಂಚಿಕೊಂಡಿದ್ದಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ.

ಸ್ಮೃತಿ ಇರಾನಿ ಹಂಚಿಕೊಂಡ ವಿಡಿಯೋದಲ್ಲೇನಿದೆ?

ಇದನ್ನೂ ಓದಿ
Viral Video: 28 ಹೆಂಡತಿಯರು, 135 ಮಕ್ಕಳು, 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವೃದ್ಧ; ವಿಡಿಯೋ ವೈರಲ್!
Viral Video: ರಸ್ತೆ ಮಧ್ಯೆ ಕೊಳಲಿನಲ್ಲಿ ಸಂದೇಸೆ ಆತೇ ಹೇ ಹಾಡು ನುಡಿಸಿದ ಪೊಲೀಸ್; ವಿಡಿಯೋ ವೈರಲ್
Viral News: ಮದುವೆಯಲ್ಲಿ ಹಾಡಿನ ವಿಚಾರಕ್ಕೆ ಗಲಾಟೆ; ಅತಿಥಿಗೆ ಶೂಟ್ ಮಾಡಿ ಕೊಂದ ಮದುಮಗ!

ಸ್ಮೃತಿ ಇರಾನಿ ಹಂಚಿಕೊಂಡಿರುವ ವಿಡಿಯೋದಲ್ಲಿ ಗುಡ್ಡಗಾಡಿನ ಪ್ರದೇಶದ ಸುಂದರ ಹಳ್ಳಿಯ ನಡುವೆ ವ್ಯಕ್ತಿಯೊಬ್ಬ ಹಸುವೊಂದನ್ನು ನೇವರಿಸುತ್ತಿದ್ದಾನೆ. ಉದ್ದನೆಯ ರೋಮಗಳನ್ನು ಹೊಂದಿರುವ ಆ ಹಸು ತನ್ನ ಒಡೆಯನ ನೇವರಿಸುವಿಕೆಗೆ ಸಂತಸದಿಂದ ಮೈಯೊಡ್ಡಿ ನಿಂತಿದೆ. ಆ ವ್ಯಕ್ತಿ ಮೈಯನ್ನು ತಿಕ್ಕುವುದನ್ನು ನಿಲ್ಲಿಸಿದರೂ ಕೂಡ ಆ ಹಸು ನಿಂತ ಭಂಗಿಯಲ್ಲೇ ನಿಂತಿದೆ. ಹಸುವಿನ ಪ್ರತಿಕ್ರಿಯೆ ನೋಡಲು ಬಹಳ ಸುಂದರವಾಗಿದೆ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ.

ಹೀಗಾಗಿಯೇ ಈ ವಿಡಿಯೋ ಸ್ಮೃತಿ ಇರಾನಿಯವರಿಗೂ ಪ್ರಿಯವಾಗಿದೆ. ಆದ್ದರಿಂದಲೇ ‘ಜೀವನದಲ್ಲಿ ಮಜವೆಂದರೆ ಇದು’ ಎಂಬರ್ಥದಲ್ಲಿ ಬರೆದುಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಮೊದಲಿಗೆ ಟಿಕ್​ಟಾಕ್​ನಲ್ಲಿ ಹಂಚಿಕೊಳ್ಳಲಾಗಿತ್ತು.

ಸ್ಮೃತಿ ಇರಾನಿ ಶೇರ್ ಮಾಡಿರುವ ವಿಡಿಯೋ ಇಲ್ಲಿದೆ:

ಈ ವಿಡಿಯೋವನ್ನು ಸ್ಮೃತಿ ಇರಾನಿ ಮಂಗಳವಾರ ಹಂಚಿಕೊಂಡಿದ್ದು, ಈಗಾಗಲೇ 1.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಬಹಳಷ್ಟು ಜನರು ಕಾಮೆಂಟ್​ಗಳ ಮೂಲಕ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಒಂದಷ್ಟು ಜನರು ವಿಡಿಯೋವನ್ನು ಹೊಗಳಿದ್ದರೆ, ಮತ್ತಷ್ಟು ಜನರು ಸ್ಮೃತಿ ಇರಾನಿ ನೀಡಿರುವ ಕ್ಯಾಪ್ಶನ್​ಗೆ ಮೆಚ್ಚುಗೆ ಸೂಚಿಸಿದ್ದಾರೆ. ಮತ್ತಷ್ಟು ಜನರು ಸ್ಮೃತಿ ಇರಾನಿಯವರನ್ನು ಟೀಕಿಸಿದ್ದು, ಪ್ರಸ್ತುತದ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚದ ನೀವು, ಇದನ್ನು ಹಂಚಿಕೊಳ್ಳುತ್ತೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ