ಅಬ್ಬಬ್ಬಾ! ಒಂದು ಹಾಡು ವಿದೇಶಿಗರಲ್ಲೂ ಇಷ್ಟೊಂದು ಹುಚ್ಚು ಹಿಡಿಸಬಲ್ಲದು ಎಂದು ಯಾರೂ ಊಹಿಸಿರಲ್ಲ. ಭಾರತದ ಒಂದು ಹಾಡು ಇಂದು ಖವಿದೇಶಗಳಲ್ಲೂ ಡ್ಯಾನ್ಸ್ ಪ್ರಿಯರ ನೆಚ್ಚಿನ ಹಾಡಾಗಿದೆ. ಹೌದು, ಅದುವೇ ಕಚ್ಚಾ ಬಾದಾಮ್ (Kacha Badam) ಹಾಡು, ಈ ಹಿಂದೆ ದಕ್ಷಿಣ ಕೊರಿಯಾದ ಅಮ್ಮ ಮಗಳ ಜೋಡಿ ಈ ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿ ಕಮಾಲ್ ಮಾಡಿತ್ತು. ಅಷ್ಟೇ ಯಾಕೆ ಪೋರ್ಚುಗೀಸ್ನ ಅಪ್ಪ ಮಗಳ ಜೋಡಿ, ಹಾಗೆಯೇ ಖಾಲಿ ವಿಮಾನದಲ್ಲಿ ಗಗನ ಸಖಿಯ ಸಖತ್ ಸ್ಟೆಪ್ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿತ್ತು. ಇದೀಗ ಕಚ್ಚಾ ಬಾದಾಮ್ ಹಾಡು ಫ್ರೆಂಚ್ ಡ್ಯಾನ್ಸರ್ (French Dancers) ಗುಂಪಿಗೆ ಹುಚ್ಚು ಹಿಡಿಸಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ (Viral) ಆಗಿದೆ.
ಪ್ರೆಂಚ್ ಡ್ಯಾನ್ಸರ್ಸ್ಗಳ ಗುಂಪೊಂದು ಕಚ್ಚಾ ಬಾದಾಮ್ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದೆ. ಬಣ್ಣದ ಬಣ್ಣದ ಉಡುಗೆ ತೊಟ್ಟು, ಕಲರ್ಫುಲ್ ಕನ್ನಡಕ ಹಾಕಿಕೊಂಡು ಲೈಟ್ ತುಂಬಿದ ಬೀದಿ ಮಧ್ಯೆ ನಿಂತು ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಜಿಕಾಮನು ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಬಳಿಕ 41 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ಕಚ್ಚಾ ಬಾದಾಮ್ ಹಾಡನ್ನು ಪಶ್ವಿಮ ಬಂಗಾಳದ ಬ್ರಿಬುರ್ಮ್ ಎನ್ನುವ ಹಳ್ಳಿಯೊಂದರಲ್ಲಿ ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿಯೊಬ್ಬ ಹೇಳಿದ್ದನು. ಬೂಬನ್ ಬಡ್ಯಾಕರ್ ಎನ್ನುವ ವ್ಯಕ್ತಿ ಬರಿಗಾಲಿನಲ್ಲಿ ಸೈಕಲ್ ತುಳಿದುಕೊಂಡು ಮನೆಮನೆಗೆ ತೆರಳಿ ಕಡಲೆಕಾಯಿ ಮಾರುತ್ತಾನೆ. ಹೀಗೆ ಕಡಲೆಕಾಯಿ ಮಾರುವ ವೇಳೆ ಹಾಡುತ್ತಿದ್ದ ಹಾಡನ್ನು ಕಚ್ಚಾ ಬಾದಾಮ್ ಹಾಡು ಎಂದೇ ವೈರಲ್ ಆಗಿದೆ. ವಿದೇಶಗಳಲ್ಲೂ ಈ ಕಚ್ಚಾ ಬಾದಾಮ್ ಹಾಡಿನ ಖ್ಯಾತಿ ಹಬ್ಬಿದ್ದು, ಭಾರತೀಯರು ಕೂಡ ಸಾವಿರಾರು ರೀಲ್ಸ್ಗಳನ್ನು ಮಾಡಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಮೊಬೈಲ್ ನೋಡುತ್ತಾ ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Published On - 6:35 pm, Sun, 6 February 22