Viral Video : ಫ್ರೆಂಚ್ ಸ್ಪೈಡರ್ ಮ್ಯಾನ್; 60ರ ವಯಸ್ಸಿನಲ್ಲಿ 48 ಅಂತಸ್ತಿನ ಕಟ್ಟಡವನ್ನೇರಿದ ಸಾಹಸಿ

| Updated By: ಶ್ರೀದೇವಿ ಕಳಸದ

Updated on: Sep 20, 2022 | 12:41 PM

Climber : 60 ವರ್ಷದ ಆರೋಹಿ ಅಲೈನ್ ರಾಬರ್ಟ್ ಶನಿವಾರದಂದು ಪ್ಯಾರಿಸ್‌ನಲ್ಲಿರುವ ಗಗನಚುಂಬಿ ಕಟ್ಟಡವನ್ನು ಏರಿ ಗುರಿಸಾಧನೆ ಮಾಡಿದ್ಧಾರೆ. 

Viral Video : ಫ್ರೆಂಚ್ ಸ್ಪೈಡರ್ ಮ್ಯಾನ್; 60ರ ವಯಸ್ಸಿನಲ್ಲಿ 48 ಅಂತಸ್ತಿನ ಕಟ್ಟಡವನ್ನೇರಿದ ಸಾಹಸಿ
48 ಅಂತಸ್ತಿನ ಕಟ್ಟಡವನ್ನು ಏರುತ್ತಿರುವ ರಾಬರ್ಟ್
Follow us on

Viral Video : ಅಲೈನ್​ ರಾಬರ್ಟ್ ಎಂಬ ಪರ್ವತಾರೋಹಿ ಫ್ರಾನ್ಸ್​ನಲ್ಲಿರುವ, 48 ಅಂತಸ್ತುಗಳುಳ್ಳ, 187 ಮೀಟರ್​ ಎತ್ತರದ ಟೂರ್​ ಟೋಟಲ್ ಎನರ್ಜೀಸ್​ ಕಟ್ಟಡವನ್ನು ಏರುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ‘ನನಗೆ ಅರವತ್ತಾದಾಗ ಈ ಕಟ್ಟಡವನ್ನು ಏರುತ್ತೇನೆ ಎಂದು ಹಲವಾರು ವರ್ಷಗಳ ಹಿಂದೆಯೇ ಅಂದುಕೊಂಡಿದ್ದೆ. ಏಕೆಂದರೆ ಅರವತ್ತು ನಿವೃತ್ತಿಯ ವಯಸ್ಸು. ಇದೊಂದು ವಿಶೇಷ  ಹಂತ, ಸುಂದರ ನೆನಪಾಗಿ ಇದು ಉಳಿಯಬೇಕು. ಅಂತೆಯೇ ಇದೀಗ ಅದನ್ನು ಸಾಧಿಸಿದ್ದೇನೆ. ನೀವೂ ಕೂಡ ಇಂಥ ಅಸಾಧಾರಣ ಚಟುವಟಿಕೆಯಲ್ಲಿ ಖಂಡಿತ ತೊಡಗಿಕೊಳ್ಳಬಹುದು’  ಎಂದು ರಾಬರ್ಟ್​ ರಾಯಿಟರ್ಸ್​ಗೆ ತಿಳಿಸಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಆರೋಹವನ್ನು ಅವರು ಕೈಗೊಂಡಿದ್ದರು. ಈ ಹಿಂದೆ ಕೂಡ ಹಲವಾರು ಸಂದರ್ಭಗಳಲ್ಲಿ ಟೋಟಲ್ ಎನರ್ಜಿಸ್ ಟವರ್ ಅನ್ನು ಇವರು ಏರಿದ್ದಾರೆ.

ದಕ್ಷಿಣ ಫ್ರಾನ್ಸ್‌ನಲ್ಲಿರುವ ಇವರ ಊರು ವೇಲೆನ್ಸ್ ಬಳಿ ಇರುವ ಬಂಡೆಗಳನ್ನೇರುವುದರ ಮೂಲಕ ಪ್ರಾಥಮಿಕ ತರಬೇತಿ ಪಡೆದುಕೊಂಡರು. ನಂತರ 1975 ರಲ್ಲಿ ಪರ್ವತಾರೋಹಣಕ್ಕೆ ತೆರೆದುಕೊಂಡರು. 1977 ರಲ್ಲಿ ಮೊದಲ ಏಕವ್ಯಕ್ತಿ ಪರ್ವತಾರೋಣವನ್ನು ಕೈಗೊಂಡು  ಯಶಸ್ವಿಯಾದರು.

ಈತನಕ ದುಬೈನ ಬುರ್ಜ್ ಖಲೀಫಾ ಐಫೆಲ್ ಟವರ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಸೇತುವೆ ಒಳಗೊಂಡಂತೆ ಪ್ರಪಂಚದಾದ್ಯಂತ 150 ಕ್ಕೂ ಹೆಚ್ಚು ಎತ್ತರದ ಕಟ್ಟಡಗಳನ್ನು, ಗೋಪುರಗಳನ್ನು ಏರಿದ್ದಾರೆ.

ಒಂದು ಜೊತೆ ಕ್ಲೈಂಬಿಂಗ್​ ಶೂಸ್​ ಮತ್ತು ಬೆವರು ಒರೆಸಿಕೊಳ್ಳಲು ವಿಶಿಷ್ಟ ವೈಪ್ ಮಾತ್ರ ಇವರೊಂದಿಗಿರುತ್ತವೆ. ಉಳಿದಂತೆ ಬರಿಗೈಯಲ್ಲೇ ಕಟ್ಟಡವನ್ನು ಏರುವುದು ಇವರ ವೈಶಿಷ್ಟ್ಯ. ಆದರೆ ಅನುಮತಿ ಇಲ್ಲದೆ ಆರೋಹಣ ಮಾಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಲ ಬಂಧನಕ್ಕೂ ಒಳಗಾಗಿದ್ದಾರೆ. ಸಾಹಸಿಗ ಮನಸ್ಥಿತಿಗೆ ಇಂತ ಖಯಾಲಿಗಳು ಮಾಮೂಲಿ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:38 pm, Tue, 20 September 22