ಯಮನಿಗೆ ಸಡ್ಡು ಹೊಡೆದ ಸ್ನೇಹ! ಕಣ್ಣೆದುರೇ ಇಳಿಜಾರಿನಲ್ಲಿ ಜಾರಿದ ಕಾರು, ಗೆಳೆಯನನ್ನು ಉಳಿಸಿಕೊಳ್ಳಲು ಉಳಿದವರು ಮಾಡಿದ್ದೇನು?

ಯಮನಿಗೆ ಸಡ್ಡು ಹೊಡೆದ ಸ್ನೇಹ! ವೈರಲ್ ಆಗಿರುವ ಈ ವಿಡಿಯೋಗೆ ಜನ ಸಖತ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. "ಇದು ಸ್ನೇಹದ ಶಕ್ತಿ" ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಇದೊಂದು ಆಘಾತಕಾರಿ ವೀಡಿಯೊ ಎಂದಿದ್ದಾರೆ.

ಯಮನಿಗೆ ಸಡ್ಡು ಹೊಡೆದ ಸ್ನೇಹ! ಕಣ್ಣೆದುರೇ ಇಳಿಜಾರಿನಲ್ಲಿ ಜಾರಿದ ಕಾರು, ಗೆಳೆಯನನ್ನು ಉಳಿಸಿಕೊಳ್ಳಲು ಉಳಿದವರು ಮಾಡಿದ್ದೇನು?
ಯಮನಿಗೆ ಸಡ್ಡು ಹೊಡೆದ ಸ್ನೇಹ! ಗೆಳೆಯನ ಉಳಿಸಿಕೊಳ್ಳಲು ಅವರು ಮಾಡಿದ್ದೇನು?
Follow us
ಸಾಧು ಶ್ರೀನಾಥ್​
|

Updated on: Dec 09, 2023 | 10:44 AM

ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಏನೇ ನಡೆದರೂ ಅದು ಕ್ಷಣಾರ್ಧದಲ್ಲಿ ನಮ್ಮ ಕಣ್ಣೆದುರು ಗೋಚರಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ವಿಡಿಯೋಗಳು (Viral Video) ಹೆಚ್ಚಾಗಿ ಕಣ್ಣಿಗೆ ಬೀಳುತ್ತವೆ. ಅಂತಹ ಕೆಲವು ವೀಡಿಯೊಗಳು ಕರುಣಾಜನಕವಾಗಿದ್ದು, ಭಾವನಾತ್ಮಕವಾಗಿರುತ್ತವೆ. ಇತ್ತೀಚಿಗೆ ಅಂತಹ ವೀಡಿಯೊವೊಂದು ಇಂಟರ್ನೆಟ್​​ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕೆಲವು ಸ್ನೇಹಿತರು (Friendship) ತಮ್ಮ ಸ್ನೇಹಿತನನ್ನು ಸಾವಿನಿಂದ ರಕ್ಷಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಆ ಗೆಳೆಯರು ತೋರಿದ ಸಮಯಪ್ರಜ್ಞೆ, ಮಾಡಿದ ಸಾಹಸವನ್ನು ಮನಸಾರೆ ಹೊಗಳುತ್ತಿದ್ದಾರೆ. ಇದುವರೆಗೆ ಲಕ್ಷಾಂತರ ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿ ನೆಟಿಜನ್‌ಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಷಯಕ್ಕೆ ಬರುವುದಾದರೆ..

ಆ ವಿಡಿಯೋವೊಂದು ವೈರಲ್ ಆಗಿದ್ದು, ಕಾರೊಂದು (Car) ಆಳವಾದ ಕಂದಕಕ್ಕೆ ಬಿದ್ದಿದೆ. ಆದರೆ ಮಧ್ಯೆ ಸಿಕ್ಕಿಹಾಕಿಕೊಂಡು ಕಾರು ಅಲ್ಲಿ ನಿಂತುಬಿಟ್ಟಿದೆ. ಅದನ್ನು ಗಮನಿಸಿದ ಬೇರೊಂದು ಕಾರಿನಲ್ಲಿದ್ದ ಸ್ನೇಹಿತರು ಕಾರಿನಲ್ಲಿದ್ದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ. ಅವರ ಸಕಾಲಿಕ ಸಹಾಯದಿಂದ ಕಾರಿನಲ್ಲಿದ್ದ ವ್ಯಕ್ತಿ ಸುರಕ್ಷಿತವಾಗಿ ಕಾರಿನಿಂದ ಹೊರಗೆ ಬಂದಿದ್ದಾರೆ.

ಅದಾದ ತಕ್ಷಣವೇ ಆ ಕಾರು ಆಳವಾದ ಕಂದಕದಲ್ಲಿ ಉರುಳಿಬಿದ್ದಿದೆ. ಅದನ್ನೆಲ್ಲಾ ವಿಡಿಯೋ ಮಾಡಲಾಗಿದೆ. ಅದನ್ನ ನೋಡಿ ಎಲ್ಲರಿಗೂ ಆಶ್ಚರ್ಯವಾಗಿದೆ. ಕಾರಿನಲ್ಲಿದ್ದ ವ್ಯಕ್ತಿಯನ್ನು ಉಳಿಸಿದ್ದು ನಿಜವಾದ ಸ್ನೇಹ ಮತ್ತು ಮಾನವೀಯತೆ ಎಂದು ಆ ಸ್ನೇಹಿತರನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. @HasnaZaruriHai ಎಂಬ ಬಳಕೆದಾರರಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Also read: ಈ 3 ಲಕ್ಷಣಗಳು ನಿಮ್ಮ ಸ್ನೇಹಿತ ಶಾಶ್ವತವಾಗಿ ನಿಮ್ಮಿಂದ ದೂರವಾಗುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ

ವೈರಲ್ ಆಗಿರುವ ಈ ವಿಡಿಯೋಗೆ ಜನ ಸಖತ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. “ಇದು ಸ್ನೇಹದ ಶಕ್ತಿ” ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಇದೊಂದು ಆಘಾತಕಾರಿ ವೀಡಿಯೊ ಎಂದಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ