AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನೂ ಮಾಡದೇ ತಿಂಗಳಿಗೆ 9 ಲಕ್ಷ ರೂ ಸಂಪಾದಿಸುವ ಭಾರತ ಮೂಲದ ವ್ಯಕ್ತಿ; ಅದೇ ರೆಂಟಲ್ ಮ್ಯಾಜಿಕ್

Room rental magic: ಭಾರತ ಮೂಲದ ಕರುಣ್ ವಿಜ್ ಎಂಬುವವರು ಕೆನಡಾದಲ್ಲಿ ರೂಮುಗಳನ್ನು ಬಾಡಿಗೆಗೆ ಕೊಟ್ಟು ಹೇರಳ ಆದಾಯ ಗಳಿಸುತ್ತಿದ್ದಾರೆ. ಓದಬೇಕು, ಕೆಲಸ ಮಾಡಬೇಕು, ಒಂದೆರಡು ಮನೆ ಸಂಪಾದನೆ ಮಾಡಬೇಕು ಎಂಬ ಆಸೆ ಇರುವ ಕುಟುಂಬದಿಂದ ಬಂದವರು ಕರುಣ್ ವಿಜ್. ಇಡೀ ಮನೆಯನ್ನು ಬಾಡಿಗೆಗೆ ಕೊಡುವುದಕ್ಕಿಂತ ರೂಮುಗಳನ್ನು ಬಾಡಿಗೆ ಕೊಡುವುದರಿಂದ ಹೆಚ್ಚು ಆದಾಯ ಬರುತ್ತದೆ ಎನ್ನುವ ಸತ್ಯ ಕಂಡುಕೊಂಡಿದ್ದಾರೆ.

ಏನೂ ಮಾಡದೇ ತಿಂಗಳಿಗೆ 9 ಲಕ್ಷ ರೂ ಸಂಪಾದಿಸುವ ಭಾರತ ಮೂಲದ ವ್ಯಕ್ತಿ; ಅದೇ ರೆಂಟಲ್ ಮ್ಯಾಜಿಕ್
ಕರುಣ್ ವಿಜ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Dec 08, 2023 | 3:50 PM

ಭಾರತೀಯ ಮೂಲದ ವ್ಯಕ್ತಿಯೊಬ್ಬರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಏನೂ ಮಾಡದೆ ತಿಂಗಳಿಗೆ 9 ಲಕ್ಷ ರೂ ಸಂಪಾದನೆ ಮಾಡುತ್ತಿದ್ದಾರೆ. ಕೆನಡಾದ ಕರುಣ್ ವಿಜ್ (Karun Vij) ಅವರ ಈ ಭಾರತ ಮೂಲದ ವ್ಯಕ್ತಿ. 33 ವರ್ಷದ ಇವರಿಗೆ ಬಾಡಿಗೆಯೇ ಹಣ ಸಂಪಾದನೆಯ ಸುಲಭ ಹಾದಿ. ಎಂಜಿನಿಯರಿಂಗ್ ಓದುತ್ತಿರುವಾಗ ಸುಲಭ ಹಣ ಸಂಪಾದಿಸುವ ಈ ಸೂತ್ರವನ್ನು ಕಂಡುಹಿಡಿದುಕೊಂಡ ಅವರಿಗೆ ಈಗ ಇದು ಲಾಭದಾಯಕ ವ್ಯವಹಾರವಾಗಿದೆ.

33 ವರ್ಷದ ಕರುಣ್ ಯಾವಾಗಲೂ ಆಸ್ತಿ ಮಾಲೀಕನಾಗಲು ಬಯಸಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಿಗುವ ಲಾಭ ಬೇರೆ ಯಾವ ವ್ಯಾಪಾರದಲ್ಲೂ ಸಿಗುವುದಿಲ್ಲ ಎಂದು ಕಾಲೇಜು ದಿನಗಳಲ್ಲಿ ಅರಿತಿದ್ದರು. ಕೆನಡಾದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗ, ಕಾಲೇಜು ಸುತ್ತಮುತ್ತಲು ಇಡೀ ಮನೆಯನ್ನು ಬಾಡಿಗೆಗೆ ಕೊಡದೇ ಪ್ರತೀ ಕೋಣೆಯನ್ನು ಪ್ರತ್ಯೇಕವಾಗಿ ಬಾಡಿಗೆ ಕೊಡುವುದನ್ನು ಕರುಣ್ ಗಮನಿಸಿದರು. ಇದು ನಿಜಕ್ಕೂ ಲಾಭದಾಯಕ ಎಂಬ ಅಂಶ ಅವರಿಗೆ ಮನವರಿಕೆ ಆಯಿತು.

ಭಾರತದಲ್ಲೂ, ಅದರಲ್ಲೂ ಬೆಂಗಳೂರಿನಲ್ಲಿ ಈ ರೀತಿ ಪಿಜಿ ಹೆಸರಿನಲ್ಲಿ ಸಾಕಷ್ಟು ಮನೆಗಳಲ್ಲಿ ಪ್ರತೀ ರೂಮನ್ನು ಪ್ರತ್ಯೇಕವಾಗಿ ಬಾಡಿಗೆ ಕೊಡಲಾಗುತ್ತದೆ. ಇಡೀ ಮನೆಯನ್ನು ಬಾಡಿಗೆ ಕೊಡುವುದಕ್ಕಿಂತ ಹೆಚ್ಚು ಆದಾಯವನ್ನು ಈ ರೂಮು ಬಾಡಿಗೆಗಳ ಮೂಲಕ ಗಳಿಸಬಹುದು. ಈ ಸೂತ್ರ ಕರುಣ್ ವಿಜ್​ಗೆ ಅರಿವಿಗೆ ಬಂದಿತು.

ಇದನ್ನೂ ಓದಿ: Onion Export Ban: ಮಾರ್ಚ್​ವರೆಗೂ ಈರುಳ್ಳಿ ರಫ್ತು ನಿಷೇಧ; ಕೇಂದ್ರ ಸರ್ಕಾರದ ಕ್ರಮಕ್ಕೆ ಮಹಾರಾಷ್ಟ್ರದಲ್ಲಿ ವಿರೋಧ

28 ಕೊಠಡಿಗಳಿಂದ 9 ಲಕ್ಷ ಗಳಿಸುತ್ತಿದ್ದಾರೆ

ಸಿಎನ್​ಬಿಸಿ ವರದಿ ಪ್ರಕಾರ, ಕರುಣ್ ಅವರು ಕೆನಡಾದಲ್ಲಿ ಒಟ್ಟು 28 ಕೊಠಡಿಗಳನ್ನು ಹೊಂದಿರುವ ನಾಲ್ಕು ಆಸ್ತಿಗಳನ್ನು ಹೊಂದಿದ್ದು, ಅದನ್ನು ಅವರು ಬಾಡಿಗೆಗೆ ನೀಡಿದ್ದಾರೆ. ಇದರಿಂದ ಪ್ರತಿ ತಿಂಗಳು 9 ಲಕ್ಷ ರುಪಾಯಿಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಆದಾಗ್ಯೂ, ಕರುಣ್ ಈ ಆಸ್ತಿಗಳನ್ನು ಖರೀದಿಸಲು 2.3 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 19 ಕೋಟಿ ರೂ ಖರ್ಚು ಮಾಡಿರುವುದು ಹೌದು.

26 ನೇ ವಯಸ್ಸಿನಲ್ಲಿ ಮೊದಲ ಹೂಡಿಕೆ

2016 ರಲ್ಲಿ, 26 ನೇ ವಯಸ್ಸಿನಲ್ಲಿ, ಅವರು ಒಂಟಾರಿಯೊದಲ್ಲಿ ತಮ್ಮ ಮೊದಲ ಹೂಡಿಕೆ ಮಾಡಿದರು. ಅವರು 3,23,904 ಡಾಲರ್ (ಅಂದರೆ 2.7 ಕೋಟಿ ರೂಪಾಯಿ) ಮೌಲ್ಯದ ಆಸ್ತಿಯನ್ನು ಖರೀದಿಸಿದರು. ಏಳು ಕಾಲೇಜು ವಿದ್ಯಾರ್ಥಿಗಳಿಗೆ ಅದನ್ನು ಬಾಡಿಗೆಗೆ ನೀಡಿದರು. ಕರುಣ್‌ಗೆ ವಿಶ್ವವಿದ್ಯಾಲಯ ಮತ್ತು ಕಾಲೇಜು ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಚೆನ್ನಾಗಿ ತಿಳಿದಿರುವುದರಿಂದ, ಬಾಡಿಗೆದಾರರನ್ನು ಹುಡುಕಲು ಹೆಚ್ಚು ಸಮಯ ಬೇಕಾಗಲಿಲ್ಲ.

ಇದನ್ನೂ ಓದಿ: ಬೆಂಗಳೂರು ಸಮೀಪ ದೇಶದ ಅತಿದೊಡ್ಡ ಐಫೋನ್ ಘಟಕ; ಹೊಸೂರಿನಲ್ಲಿ ಟಾಟಾ ಯೋಜನೆ; 50,000 ಮಂದಿಗೆ ಉದ್ಯೋಗ

ವೃತ್ತಿಯಲ್ಲಿ ಮಾರಾಟ ವ್ಯವಸ್ಥಾಪಕ

ಅಂದಹಾಗೆ, ಕರುಣ್ ಬಾಡಿಗೆಯಿಂದ ಬರುವ ಹಣವನ್ನು ಮಾತ್ರ ಅವಲಂಬಿಸಿಲ್ಲ. ಪದವಿಯ ನಂತರ, ಅವರು ಅಪ್ಲಿಕೇಶನ್ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಪ್ರಸ್ತುತ ಅಮೆರಿಕದ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿದ್ದಾರೆ. ಹೆಂಡತಿ ಮಗುವಿನೊಂದಿಗೆ ಚಿಕಾಗೋ ನಗರದಲ್ಲಿ ನೆಲಸಿದ್ದಾರೆ.

ಬಾಡಿಗೆ ಆದಾಯ ಮತ್ತು ಸಂಬಳದ ಹಣದ ಸಹಾಯದಿಂದ ಕರುಣ್ ಸೌತ್ ಒಂಟಾರಿಯೊದಲ್ಲಿ ಸಾಕಷ್ಟು ಆಸ್ತಿಯನ್ನು ನಿರ್ಮಿಸಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೆಚ್ಚಿನ ಆದಾಯ ಗಳಿಸಬಹುದು ಎಂಬುದನ್ನು ಅರಿತಿರುವ ಅವರು ತಮ್ಮ ಆಸ್ತಿಯನ್ನು ಮಾರದೇ ಇರಲು ನಿರ್ಧರಿಸಿದ್ದಾರೆ. ಆಸ್ತಿ ಬೆಲೆ ಎಷ್ಟೇ ಏರಲಿ ತಾನು ಮಾತ್ರ ಮಾರುವುದಿಲ್ಲ. ಸಾಧ್ಯವಾದಷ್ಟೂ ಆಸ್ತಿಗಳನ್ನು ಸಂಪಾದಿಸುತ್ತೇನೆ ಎನ್ನುವುದು ಸದ್ಯ ಅವರ ನಿರ್ಧಾರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:49 pm, Fri, 8 December 23