ನಾವೆಲ್ಲರೂ ಶಾಲೆಗಳಲ್ಲಿ ಜೀವಶಾಸ್ತ್ರ ಪಾಠದಲ್ಲಿ ಆಹಾರ ಸರಪಳಿ ವಿಷಯದ ಬಗ್ಗೆ ಓದಿರುತ್ತೇವೆ. ಈ ಆಹಾರ ಸರಪಳಿಯ ಪ್ರಕಾರ ಹುಲ್ಲುಗಳನ್ನು ಕೀಟಗಳು ತಿಂದ್ರೆ, ಈ ಕೀಟಗಳು ಕಪ್ಪೆಗಳ ಆಹಾರವಾಗಿರುತ್ತವೆ. ಇನ್ನೂ ಈ ಕಪ್ಪೆಗಳು ಹಾವುಗಳಿಗೆ ಆಹಾರವಾಗಿದೆ. ಹೀಗಿದ್ರೂ ನಮ್ಮ ಪ್ರಕೃತಿಯಲ್ಲಿ ಆಹಾರ ಸರಪಳಿಗಳಿಗೆ ವಿರುದ್ಧವಾಗಿರುವ ಆಶ್ಚರ್ಯಕರ ಸಂಗತಿಗಳು ನಡೆಯುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಕಪ್ಪೆಯೊಂದು ಜೀವಂತ ಹಾವನ್ನು ನುಂಗಿದೆ. ಅರೇ ಕಪ್ಪೆ ಹಾವುಗಳನ್ನು ತಿನ್ನುತ್ತದೆಯೇ? ಅದು ಹೇಗೆ ಸಾಧ್ಯ? ಆಹಾರ ಸರಪಳಿಯ ಪ್ರಕಾರ ಕಪ್ಪೆಗಳನ್ನು ಹಾವುಗಳು ತಿನ್ನುತ್ತವೆಯೇ ಹೊರತು ಕಪ್ಪೆಗಳು ಹಾವುಗಳನ್ನು ತಿನ್ನಲು ಸಾಧ್ಯವಿಲ್ಲ, ಮೇಲಾಗಿ ಕಪ್ಪೆಗಳು ಗಾತ್ರದಲ್ಲಿ ಹಾವುಗಳಿಗಿಂತ ಚಿಕ್ಕದಾಗಿರುತ್ತವೆ, ಅದು ಹೇಗೆ ದೈತ್ಯ ಹಾವನ್ನು ತಿನ್ನಲು ಸಾಧ್ಯವಾಗುತ್ತೆ ಅಂತಾ ನೀವು ಯೋಚ್ನೆ ಮಾಡ್ತಿದ್ದೀರಾ. ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ.
@rizal.rayan_ ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಹಾರ ಸರಪಳಿಗೆ ವಿರುದ್ಧವಾಗಿ ಕಪ್ಪೆಯೊಂದು ಜೀವಂತ ಹಾವನ್ನು ನುಂಗುತ್ತಿರುವ ದೃಶ್ಯವನ್ನು ಕಾಣಬಹುದು.
ಈ ವೈರಲ್ ವಿಡಿಯೋದಲ್ಲಿ ಗಾತ್ರದಲ್ಲಿ ದೊಡ್ಡದಾಗಿರುವಂತಹ ಕಪ್ಪೆಯೊಂದು ಜೀವಂತ ಹಾವನ್ನು ನಿಧಾನಕ್ಕೆ ನುಂಗುತ್ತಿರುತ್ತೆ, ಆ ಸಂದರ್ಭದಲ್ಲಿ ಆ ಹಾವು ಕಪ್ಪೆಯ ಬಾಯಿಯಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಎಂದು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬೆಕ್ಕಿನ ಮರಿಯ ಮೇಲೆ ಗಿಡುಗನ ದಾಳಿ; ಮುಂದೆನಾಯ್ತು ನೋಡಿ
ಡಿಸೆಂಬರ್ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼರಿವರ್ಸ್ ಫುಡ್ ಚೈನ್ʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೊನೆಗೂ ಒಂದು ಕಪ್ಪೆಯಾದ್ರೂ ಹಾವಿನ ಮೇಲೆ ರಿವೇಂಜ್ ತೆಗೆದುಕೊಂಡಿತಲ್ವಾʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಕಪ್ಪೆ ಆಹಾರ ಸರಪಳಿಯ ನಿಯಮವನ್ನೇ ಮುರಿದಿದೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಹಲವರು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: