AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಕ್ಕಿನ ಮರಿಯ ಮೇಲೆ ಗಿಡುಗನ ದಾಳಿ; ಮುಂದೆನಾಯ್ತು ನೋಡಿ

ಹದ್ದುಗಳಂತೆ ಗಿಡುಗಗಳು ಕೂಡಾ ಬೇಟೆಯಾಡುವುದರಲ್ಲಿ ಎತ್ತಿದ ಕೈ. ಅದೇ ರೀತಿ ಇಲ್ಲೊಂದು ಗಿಡುಗ ಆಹಾರಕ್ಕಾಗಿ ಕಾರಿನೊಳಗೆ ಇದ್ದ ಬೆಕ್ಕಿನ ಮರಿಯನ್ನು ಕಂಡು ಬೇಟೆಯಾಡಲು ಹೋಗುತ್ತೆ, ಆದ್ರೆ ಎಷ್ಟೇ ಟ್ರೈ ಮಾಡಿದ್ರೂ ಬೆಕ್ಕಿನ ಮರಿ ಏಕೆ ನನ್ನ ಬಲೆಗೆ ಬೀಳುತ್ತಿಲ್ಲ ಎಂದು ಕೊನೆಯಲ್ಲಿ ಗಿಡುಗ ಬಂದ ದಾರಿಗೆ ಸುಂಕವಿಲ್ಲ ಎಂದು ನಿರಾಶೆಗೊಂಡು ಹಾರಿ ಹೋಗುತ್ತೆ. ಸದ್ಯ ಈ ಇಂಟರೆಸ್ಟಿಂಗ್ ವಿಡಿಯೋ ಸಖತ್ ವೈರಲ್ ಆಗಿದೆ.

Viral Video: ಬೆಕ್ಕಿನ ಮರಿಯ ಮೇಲೆ ಗಿಡುಗನ ದಾಳಿ; ಮುಂದೆನಾಯ್ತು ನೋಡಿ
ವೈರಲ್​​​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Jan 01, 2024 | 2:58 PM

Share

ಹದ್ದು, ರಣಹದ್ದುಗಳಂತೆ ಗಿಡುಗಗಳೂ ಕೂಡಾ ಬೇಟೆಯಾಡುವುದರಲ್ಲಿ ಎತ್ತಿದ ಕೈ. ಈ ಬೇಟೆಗಾರ ಪಕ್ಷಿಗಳು ತಮ್ಮ ಆಹಾರಕ್ಕಾಗಿ ಮೀನುಗಳು, ಹಾವುಗಳು, ಪಾರಿವಾಳ, ಕೋಳಿ ಮರಿಗಳನ್ನೆಲ್ಲಾ ಕಾಲಿನ ಉಗುರಿನ ಸಹಾಯದಿಂದ ಬೇಟೆಯಾಡುತ್ತವೆ. ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿ ಈ ಗಿಡುಗಗಳು ಕೋಳಿ ಮರಿಗಳನ್ನು ಬೇಟೆಯಾಡುತ್ತವೆ. ಅದೇ ರೀತಿ ಇಲ್ಲೊಂದು ಗಿಡುಗ ಕಾರಿನ ಒಳಗೆ ಕುಳಿತಿದ್ದ ಬೆಕ್ಕಿನ ಮರಿಯನ್ನು ಕಂಡು ಅಬ್ಬಾ ದೇವ್ರೇ!! ಇವತ್ತಿನ ಊಟಕ್ಕೆ ಭರ್ಜರಿ ಬೇಟೆ ಸಿಕ್ತು ಎನ್ನುತ್ತಾ ಬೆಕ್ಕಿನ ಮರಿಯನ್ನು ಬೇಟೆಯಾಡಲು ಹೋಗುತ್ತೆ. ಆದ್ರೆ ಬೆಕ್ಕು ಕಾರಿನ ಒಳಗೆ ಇದೆ ಎಂಬ ಅರಿವೇ ಇಲ್ಲದ ಗಿಡುಗ ನಾನು ಎಷ್ಟೇ ಪ್ರಯತ್ನ ಪಟ್ರೂ ಏಕೆ ಬೇಟೆ ನನ್ನ ಬಲೆಗೆ ಬೀಳುತ್ತಿಲ್ಲ ಅಂತ ಯೋಚ್ನೆ ಮಾಡ್ತಾ, ಕೊನೆಯಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂದು ನಿರಾಶೆಗೊಂಡು ಹಾರಿ ಹೋಗುತ್ತೆ. ಗಿಡುಗನ ಬೇಟೆಯ ಈ ಇಂಟರೆಸ್ಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

@PicturesFoIder ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಗಿಡುಗ ಥಟ್ಟನೆ ಬೆಕ್ಕಿನ ಮರಿಯನ್ನು ಬೇಟೆಯಾಡಲು ಬರುವ ದೃಶ್ಯವನ್ನು ಕಾಣಬಹುದು.

ವೈರಲ್  ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಏನಾದ್ರೂ ಬೇಟೆ ಸಿಗುತ್ತಾ ಎಂದು ಅತ್ತ ಇತ್ತ ನೋಡುತ್ತಾ ಕಾಂಪೌಂಡ್ ಮೇಲೆ ಕುಳಿತಿದ್ದ ಗಿಡುಗನಿಗೆ ಅಲ್ಲೇ ಹತ್ತಿರದಲ್ಲಿ ಬೆಕ್ಕಿನ ಮರಿಯೊಂದು ಕಾಣಿಸುತ್ತೆ. ಅಬ್ಬಾ ! ಇವತ್ತಿನ ಭೋಜನಕ್ಕೆ ಭರ್ಜರಿ ಬೇಟೆ ಸಿಕ್ತು ಎಂದು ಖುಷಿ ಪಟ್ಟು ಬೆಕ್ಕಿನ ಮರಿಯನ್ನು ಬೇಟೆಯಾಡಲು ಬರುತ್ತೆ. ತನ್ನ ಹತ್ತಿರ ಬಂದ ಗಿಡುಗನನ್ನು ಕಂಡು ಭಯಪಟ್ಟ ಬೆಕ್ಕಿನ ಮರಿ ಕಾರಿನ ಸ್ಟೇರಿಂಗ್ ಒಳಗೆ ಅವಿತು ಕುಳಿತುಕೊಳ್ಳುತ್ತೆ. ಬೆಕ್ಕು ಕಾರಿನ ಒಳಗೆ ಇದೆ, ಅದನ್ನು ಯಾವುದೇ ಕಾರಣಕ್ಕೂ ಬೇಟೆಯಾಡಲು ಸಾಧ್ಯವಿಲ್ಲ ಎಂಬ ವಿಚಾರವನ್ನು ತಿಳಿಯದ ಗಿಡುಗ ತನ್ನ ಕಾಲಿನ ಉಗುರುಗಳ ಸಹಾಯದಿಂದ ಕಾರಿನ ಗಾಜಿಗೆ ಪರಚುತ್ತಾ ಬೆಕ್ಕನ್ನು ತನ್ನ ಬಲೆಯೊಳಗೆ ಬೀಳಿಸಲು ಹರಸಾಹಸ ಪಡುತ್ತೆ. ಅಲ್ಲಾ ನಾನು ಎಷ್ಟೇ ಟ್ರೈ ಮಾಡಿದ್ರೂ ಈ ಬೆಕ್ಕು ಯಾಕೆ ನನ್ನ ಬಲೆಗೆ ಬೀಳುತ್ತಿಲ್ಲ, ಎಂದು ಗಿಡುಗ ಆಶ್ಚರ್ಯ ಪಟ್ಟು ಕೊನೆಯಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂದು ಹಾರಿ ವಾಪಸ್ ಹೋಗುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ತನ್ನನ್ನು 4 ವರ್ಷದ ಮಗುವಿನಿಂದ ಸಾಕಿದ ವ್ಯಕ್ತಿಯನ್ನೇ ಮದುವೆಯಾದ ಯುವತಿ

ಡಿಸೆಂಬರ್ 31ರಂದು ಹಂಚಿಕೊಳ್ಳಲಾದ ಈ ವಿಡಿಯೋ 24 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಗಿಡುಗನ ಸ್ಥಿತಿಯನ್ನು ಕಂಡು ತುಂಬಾ ತಮಾಷೆಯನ್ನಿಸಿತುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ತುಂಬಾ ಅದ್ಭುತವಾದ ದೃಶ್ಯ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: