Viral Video: ತಾಳಿಯ ಮಹತ್ವವೇನು? ಎಂಬುದನ್ನು ಈ ಕರ್ನಾಟಕದ ಅಜ್ಜಿ ಸುಂದರವಾಗಿ ವಿವರಿಸಿದ್ದಾರೆ

ಹಿಂದೂ ಸಂಸ್ಕೃತಿಯಲ್ಲಿ ತಾಳಿಗೆ ವಿಶೇಷವಾದ ಮಹತ್ವವಿದೆ. ಮಂಗಳಸೂತ್ರವನ್ನು ಮುತ್ತೈದೆಯರ ಸೌಭಾಗ್ಯದ ಸಂಕೇತವೆಂದು ಹೇಳಲಾಗುತ್ತದೆ. ಆದ್ರೆ ಇಂದು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ, ಫ್ಯಾಶನ್ ಹೆಸರಿನಲ್ಲಿ ಅದೆಷ್ಟೋ ವಿವಾಹಿತ ಮಹಿಳೆಯರು ತಾಳಿಯನ್ನು ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಇಂತಹವರರಿಗಾಗಿಯೇ  ಇಲ್ಲೊಬ್ರು  ಅಜ್ಜಮ್ಮ ಮುತ್ತೈದೆಯರು  ತಾಳಿಯನ್ನು ಯಾವುದೇ ಕಾರಣಕ್ಕೂ ಬಿಚ್ಚಿಡಬಾರದು ಎಂದು ತಾಳಿಯ ಮಹತ್ವದ ಬಗ್ಗೆ ಬಹಳ ಸೊಗಸಾಗಿ  ಹೇಳಿಕೊಟ್ಟಿದ್ದಾರೆ.  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Viral Video: ತಾಳಿಯ ಮಹತ್ವವೇನು? ಎಂಬುದನ್ನು ಈ ಕರ್ನಾಟಕದ ಅಜ್ಜಿ ಸುಂದರವಾಗಿ ವಿವರಿಸಿದ್ದಾರೆ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 01, 2024 | 6:26 PM

ಹಿಂದೂ ಸಂಸ್ಕೃತಿಯಲ್ಲಿ ತಾಳಿಗೆ ಬಹಳ ವಿಶೇಷವಾದ ಮಹತ್ವವಿದೆ. ತಾಳಿಯನ್ನು ಸುಮಂಗಲಿಯರ ಸಂಕೇತವೆಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ವಿವಾಹವಾದ ಬಳಿಕ ಪ್ರತಿಯೊಬ್ಬ ಮಹಿಳೆಯೂ ಮಂಗಳಸೂತ್ರವನ್ನು ಧರಿಸಲೇಬೇಕು. ಮಾಂಗಲ್ಯಧಾರಣೆಯು ಪತಿ ಪತ್ನಿಯ ನಡುವೆ ಅನ್ಯೋನ್ಯವಾದ ಬಾಂಧವ್ಯ ಬೆಸೆಯುವ ಕೊಂಡಿಯಾಗಿದೆ ಮತ್ತು ತಾಳಿಯು ಹೆಣ್ಣಿಗೆ ರಕ್ಷಾ ಕವಚ ಇದ್ದಂತೆ. ಅಷ್ಟೇ ಅಲ್ಲದೆ ಮಂಗಳಸೂತ್ರವನ್ನು ಧರಿಸುವುದರಿಂದ ಪತಿಯ ಆರೋಗ್ಯ, ಆಯಸ್ಸು  ವೃದ್ಧಿಯಾಗುತ್ತದೆ. ಮುತ್ತೈದೆ ಸ್ತ್ರೀ ಎಷ್ಟೇ ಅಲಂಕಾರವನ್ನು ಮಾಡಿಕೊಂಡರೂ, ಎಷ್ಟೇ ಚಿನ್ನ ಒಡವೆಯನ್ನು ಧರಿಸಿದ್ರೂ, ಆಕೆ ಮಂಗಳ ಸೂತ್ರವನ್ನು ಧರಿಸಿಲ್ಲ ಎಂದ್ರೆ, ಆಕೆ ಎಷ್ಟು ಅಲಂಕಾರ ಮಾಡಿಕೊಂಡರೂ ಲಕ್ಷಣವಾಗಿ ಕಾಣೊಲ್ಲ  ಎಂದು  ತಾಳಿಯ ವಿಶೇಷ ಮಹತ್ವದ  ಬಗ್ಗೆ ಹಿರಿಯರು ಹೇಳುತ್ತಿರುತ್ತಾರೆ.  ಹೀಗಿದ್ರೂ ಕೂಡಾ   ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ, ಫ್ಯಾಶನ್ ಹೆಸರಿನಲ್ಲಿ ಅದೆಷ್ಟೋ  ವಿವಾಹಿತ ಸ್ತ್ರೀಯರು ಮಂಗಳಸೂತ್ರವನ್ನು ಧರಿಸಲು ಇಷ್ಟಪಡುವುದಿಲ್ಲ.  ತಾಳಿ ಧರಿಸಿಲ್ಲ ಅಂದ್ರೆ ಏನ್ ಆಗಲ್ಲ, ಅದೆಲ್ಲ ಸುಮ್ಮನೆ ಹಾಗೆ ಹೀಗೆ  ಅಂತೆಲ್ಲಾ ಅಸಡ್ಡೆಯ ಮಾತುಗಳನ್ನಾಡುತ್ತಾರೆ.  ಇಂತಹವರರಿಗಾಗಿಯೇ   ಇಲ್ಲೊಬ್ರು  ಅಜ್ಜಮ್ಮ ಮುತ್ತೈದೆಯರು  ತಾಳಿಯನ್ನು ಯಾವುದೇ ಕಾರಣಕ್ಕೂ ಬಿಚ್ಚಿಡಬಾರದು ಎಂದು ತಾಳಿಯ ಮಹತ್ವದ ಬಗ್ಗೆ ಬಹಳ ಸೊಗಸಾಗಿ  ಹೇಳಿಕೊಟ್ಟಿದ್ದಾರೆ.

@namo_vishu_m ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಅಜ್ಜಮ್ಮ ತಾಳಿಯ ಮಹತ್ವ ಹಾಗೂ ಅದರ ವಿಶೇಷತೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿರುವ ಸುಂದರ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಅಜ್ಜಮ್ಮ,  ಮುತ್ತೈದೆಯರು ತಾಳಿಯನ್ನು ಬಿಚ್ಚಿಡಬಾರದು. ಒಂದು ವೇಳೆ ತಾಳಿ ಕಳೆದು ಹೋದ್ರೆ, ಆ ತಾಳಿಯನ್ನು ಮತ್ತೆ ತಂದು ಕೊರಳಿಗೆ  ಹಾಕುವವರೆಗೆ ಊಟ ಮಾಡುವ ಹಾಗಿಲ್ಲ. ಹಾಗೂ ಹೊಸ ಮಂಗಳಸೂತ್ರವನ್ನು ತಂದ್ರೆ ಅದನ್ನು ದೇವರ ಬಳಿಯಿಟ್ಟು ಪೂಜಿಸಿ, ಗಂಡ, ಹೆಂಡತಿಯ ಕುತ್ತಿಗೆಗೆ ಆ ಮಂಗಳಸೂತ್ರವನ್ನು ಕಟ್ಟಬೇಕು. ಮುತ್ತೈದೆಯರಿಗೆ ಕರಮಣಿ ಸರ ಮತ್ತು ಕಾಲುಂಗುರವೇ ಶೋಭೆ. ವಿವಾಹಿತ ಮಹಿಳೆ  ಕರಿಮಣಿಯನ್ನು ಧರಿಸದೆ  ಎಷ್ಟೆ ಚಿನ್ನ ಒಡವೆ ಹಾಕಿದ್ರೂ  ಆಕೆ ಸುಂದರವಾಗಿ ಕಾಣೊಲ್ಲ. ತಾಳಿಯೇ ಆಕೆಗೆ ಲಕ್ಷಣ  ಅಂತ  ತಾಳಿಯ ಮಹತ್ವವನ್ನು ವಿವರಿಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಅರೇ ಏನಿದು ವಿಚಿತ್ರ! ಜೀವಂತ ಹಾವನ್ನೇ ನುಂಗಿದ ಕಪ್ಪೆರಾಯ 

ಡಿಸೆಂಬರ್ 30 ರಂದು ಹಂಚಿಕೊಳ್ಳಲಾದ  ಈ ವಿಡಿಯೋ  ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತಾಳಿಯ ಮಹತ್ವವನ್ನು ಚೆನ್ನಾಗಿ ವಿವರಿಸಿದ್ದೀರಾʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈಗಿನ ಕಾಲದ ಹೆಣ್ಣು ಮಕ್ಕಳಿಗೆ ನಿಮ್ಮಂತವರ ಮಾರ್ಗದರ್ಶನದ ಅವಶ್ಯಕತೆಯಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ನೀವು ಹೇಳಿದ ಮಾತು ನಿಜ ಅಮ್ಮಾ  ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ