Viral Video: ಪಾಕಿಸ್ತಾನದಲ್ಲಿ ಸ್ಲ್ಯಾಪ್ ಕಬಡ್ಡಿ: ಇದರಲ್ಲಿ ರೈಡಿಂಗ್ ಇಲ್ಲ, ಒಬ್ಬರಿಗೊಬ್ಬರು ಎದೆಗೆ ಹೊಡೆಯುವುದು
ಕಬಡ್ಡಿ ಆಟದ ಬಗ್ಗೆ ಸಾಮಾನ್ಯವಾಗಿ ಎಲ್ರಿಗೂ ಗೊತ್ತಿದೆ. ಆದ್ರೆ ಸ್ಲ್ಯಾಪ್ ಕಬಡ್ಡಿ ಎಂಬ ಪಾಕಿಸ್ತಾನದ ವಿಶೇಷ ಆಟದ ಬಗ್ಗೆ ನಿಮ್ಗೆ ಗೊತ್ತಾ? ಅರೇ ಇದ್ಯಾವುದು ಹೊಸ ಆಟ ಅಂತ ಯೋಚ್ನೆ ಮಾಡ್ತಿದ್ದೀರಾ. ಇದು ಕೂಡಾ ಒಂದು ರೀತಿಯ ಕಬಡ್ಡಿ ಆಟವಾಗಿದ್ದು, ಇದು ಇಬ್ಬರು ಸ್ಪರ್ಧಿಗಳ ನಡುವೆ ನಡೆಯುವ ರೋಚಕ ಕಬಡ್ಡಿ ಪಂದ್ಯಾವಳಿಯಾಗಿದೆ. ಈ ವಿಶೇಷ ಕಬಡ್ಡಿ ಆಟದ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಆಟವನ್ನು ಕಂಡು ನೋಡಿಗರು ಅಚ್ಚರಿಗೊಂಡಿದ್ದಾರೆ
ಭಾರತದ ಜನಪ್ರಿಯ ಆಟವಾದ ಕಬಡ್ಡಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಬಹುತೇಕ ಎಲ್ರಿಗೂ ಗೊತ್ತಿದೆ. ಆದ್ರೆ ನೀವು ಎಂದಾದರೂ ಸ್ಲ್ಯಾಪ್ ಕಬಡ್ಡಿಯ ಬಗ್ಗೆ ಕೇಳಿದ್ದೀರಾ? ಅರೇ, ಇದ್ಯಾವುದು ಹೊಸ ಆಟ ಅಂತ ಯೋಚ್ನೆ ಮಾಡ್ತಿದ್ದೀರಾ? ಇದು ಪಾಕಿಸ್ತಾನದ ಸ್ಥಳೀಯ ಆಟವಾಗಿದ್ದು, ಇದು ಸಾಂಪ್ರದಾಯಿಕ ಕಬಡ್ಡಿಗಿಂತ ಬಹಳ ವಿಭಿನ್ನವಾದ ಆಟವಾಗಿದೆ. ಸಾಂಪ್ರದಾಯಿಕ ಕಬಡ್ಡಿಯು ಏಳು ಸ್ಪರ್ಧಿಗಳ ಎರಡು ತಂಡಗಳ ನಡುವೆ ನಡೆಯುವ ಆಟವಾದರೆ, ಈ ಕ್ರೀಡೆಯು ಎರಡು ಸ್ಪರ್ಧಿಗಳ ನಡುವೆ ನಡೆಯುವ ಆಟವಾಗಿದೆ. ಇದರಲ್ಲಿ ಯಾವುದೇ ಟ್ಯಾಕಲ್ ಅಥವಾ ರೈಡಿಂಗ್ ಇಲ್ಲ. ಬದಲಾಗಿ ಇಬ್ಬರು ಸ್ಪರ್ಧಿಗಳು ಪರಸ್ಪರ ಒಬ್ಬರಿಗೊಬ್ಬರು ಎದೆಗೆ ಬಲವಾಗಿ ಹೊಡೆದಾಡಿಕೊಂಡು ಆಡುವ ಆಟವಾಗಿದೆ. ಜನರ ಮನೋರಂಜನೆಗಾಗಿ ಆಡುವ ಈ ಸ್ಲ್ಯಾಪ್ ಕಬಡ್ಡಿ ಕ್ರೀಡೆಯನ್ನು ಪಾಕಿಸ್ತಾನದಲ್ಲಿ ಕಾನೂನು ಬದ್ಧವೆಂದು ಪರಿಗಣಿಸಲಾಗಿದೆ. ಈ ವಿಶೇಷ ಆಟದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಲ್ಯಾಪ್ ಕಬಡ್ಡಿ ಸ್ಪರ್ಧೆಯನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
@TheWeirdWorld ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಇಬ್ಬರು ಸ್ಪರ್ಧಿಗಳ ನಡುವಿನ ಸ್ಲ್ಯಾಪ್ ಕಬಡ್ಡಿಯ ರೋಚಕ ಪಂದ್ಯಾವಳಿಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ತಾಳಿಯ ಮಹತ್ವವೇನು? ಎಂಬುದನ್ನು ಈ ಕರ್ನಾಟಕದ ಅಜ್ಜಿ ಸುಂದರವಾಗಿ ವಿವರಿಸಿದ್ದಾರೆ
ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ:
My new favorite game. pic.twitter.com/c9EqTdYYa1
— Weird World (@TheWeirdWorld) January 1, 2024
14 ಸೆಕೆಂಡುಗಳ ಈ ವಿಡಿಯೋದಲ್ಲಿ ಇಬ್ಬರು ಸ್ಪರ್ಧಿಗಳು ಓಡಿಕೊಂಡು ಬಂದು ಪರಸ್ಪರ ಒಬ್ಬರಿಗೊಬ್ಬರು ಜೋರಾಗಿ ಎದೆಗೆ ಹೊಡೆದಾಡಿಕೊಂಡು ಸ್ಲ್ಯಾಪ್ ಕಬಡ್ಡಿ ಆಟವನ್ನು ಆಡುತ್ತಿರುತ್ತಾರೆ, ಈ ಸ್ಪರ್ಧೆಯನ್ನು ನೋಡಲೆಂದು ನೂರಾರು ಸಂಖ್ಯೆಯಲ್ಲಿ ಜನರು ಕೂಡಾ ನೆರೆದಿರುವುದನ್ನು ಕಾಣಬಹುದು. ಇಬ್ಬರು ಸ್ಪರ್ಧಿಗಳ ನಡುವೆ ನಡೆಯುವ ಈ ಸ್ಪರ್ಧೆಯಲ್ಲಿ ಒಬ್ಬ ಆಟಗಾರನು ಇನ್ನೊಬ್ಬ ಆಟಗಾರನ ಎದೆಗೆ ಹೊಡೆದಷ್ಟು ಅವನು ಹೆಚ್ಚು ಅಂಕಗಳನ್ನು ಪಡೆಯುತ್ತಾನೆ. ಕೊನೆಯಲ್ಲಿ ಹೆಚ್ಚು ಅಂಕ ಪಡೆದವರು ಈ ಸ್ಪರ್ಧೆಯ ವಿಜೇತರಾಗುತ್ತಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:58 pm, Tue, 2 January 24